ಆ್ಯಂಬುಲೆನ್ಸ್ ನಿಂತಲ್ಲೇ ತುಕ್ಕು ಹಿಡಿಯುತ್ತಿವೆ - ರೋಗಿಗಳು ಕುಳಿತಲ್ಲೇ ಸಾಯುತ್ತಿದಾರೆ ; ಪ್ರಿಯಾಂಕ್ ಖರ್ಗೆ ಲೇವಡಿ

ನಿತ್ಯ ಕೊರೋನಾ ಮತ್ತು ಕೊರೋನೇತರ ರೋಗಿಗಳ ಸಾವನ್ನಪ್ಪುತ್ತಿದ್ದಾರೆ. ಕಲಬುರ್ಗಿಯ ಡಿಎಚ್ಓ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

  • Share this:
ಕಲಬುರ್ಗಿ(ಆಗಸ್ಟ್​. 25): ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳುತ್ತಲೇ ಇದೆ. ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಗೂ ಕಡಿವಾಣ ಬಿದ್ದಿಲ್ಲ. ಹೀಗೆ ಕೊರೋನಾ ನಿಯಂತ್ರಣ ತಪ್ಪಲು ರಾಜ್ಯ ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿ ದಿನ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣಕ್ಕೆ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಕೊರೋನಾ ಮತ್ತು ಕೊರೋನೇತರ ರೋಗಿಗಳ ಸಾವನ್ನಪ್ಪುತ್ತಿದ್ದಾರೆ. ಕಲಬುರ್ಗಿಯ ಡಿಎಚ್ಓ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಮತ್ತೊಂದೆಡೆ ಆ್ಯಂಬುಲೆನ್ಸ್ ಸಕಾಲಕ್ಕೆ ಬಾರದೆ ಹಲವಾರು ರೋಗಿಗಳ ಸಾವನ್ನಪ್ಪುತ್ತಿದ್ದಾರೆ. ಇದೇನಾ ಕೊರೋನಾ ನಿಯಂತ್ರಿಸುವ ವಿಧಾನ. ಬಿಜೆಪಿ ಸರ್ಕಾರ ಕೊರೋನಾ ನಿಯಂತ್ರಿಸಲು ಮಾಡುತ್ತಿರುವ ಪ್ರಯತ್ನ ಇದೇನಾ ಎಂದು ಟ್ವಿಟ್ಟರ್ ಮೂಲಕ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕೊರೋನಾ ವ್ಯಾಪಕಗೊಳ್ಳಲು ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ಕಿಡಿಕಾರಿದ್ದಾರೆ.ಕಲಬುರ್ಗಿಯಲ್ಲಿ ಸಾವಿನ ಸರದಿ ಮುಂದುವರಿಕೆ

ಕಲಬುರ್ಗಿ ಜಿಲ್ಲೆಯಲ್ಲಿ ಮತ್ತಿಬ್ಬರ ಸಾವನ್ನಪ್ಪಿದ್ದಾರೆ. ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸಾವಿಗೀಡಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಮಧುಮೇಹ, ರಕ್ತದೊಟ್ಟದದಿಂದ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಕೆರೆ ಅಂಬಲಗಾ ಗ್ರಾಮದ ನಿವಾಸಿ 65 ವರ್ಷದ ಪುರುಷ ಸಾವನ್ನಪ್ಪಿದ್ದಾನೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಸೇವಾಲಾಲ ನಗರದ 58 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ.

ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 192 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ 176 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,318 ಗೆ ಏರಿಕೆಯಾಗಿದೆ. ಇದೇ ವೇಳೆ 225 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 8353 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1773 ಸಕ್ರಿಯ ಪ್ರಕರಣಗಳಿವೆ.

ಸಾವಿನ ಮನೆಯಾದ ಕಲ್ಯಾಣ ಕರ್ನಾಟಕ

ಕಲ್ಯಾಣ ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಈ ಭಾಗದ ಜಿಲ್ಲೆಗಳಲ್ಲಿ ಮತ್ತೆ 13 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 9 ಜನ ಪುರುಷರು ಹಾಗೂ ನಾಲ್ವರು ಮಹಿಳೆಯರಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಏಳು ಜನ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಎರಡು ಜನ ಹಾಗೂ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಗಳಲ್ಲಿ ತಲಾ ಓರ್ವ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ; ಚೆಕ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಡಬಲ್ ಸಂಚುರಿ, ರಾಯಚೂರು, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸೆಂಚುರಿ ದಾಟಿದ ಸೋಂಕಿತರ ಸಂಖ್ಯೆ. ಕೊಪ್ಪಳ 271, ರಾಯಚೂರು 183,ಕಲಬುರ್ಗಿ 176, ಯಾದಗಿರಿ 122 ಹಾಗೂ ಬೀದರ್ 83 ಜನರಿಗೆ ಸೋಂಕು ದೃಢ. ಕಲ್ಯಾಣ ಕರ್ನಾಟಕದಲ್ಲಿ 835 ಜನರಿಗೆ ಸೋಂಕು ದೃಢಪಟ್ಟಿದೆ.

30 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ. ಕಲ್ಯಾಣ ಕರ್ನಾಟಕದ ಸೋಂಕಿತರ ಸಂಖ್ಕೆ 30,252 ಕ್ಕೆ ಏರಿಕೆ. ಈ ಭಾಗದಲ್ಲಿ ಮತ್ತೆ 661 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಕಲಬುರ್ಗಿ 225, ಕೊಪ್ಪಳ 186, ರಾಯಚೂರು 113 ಹಾಗೂ ಬೀದರ್ 107 ಡಿಸ್ಚಾರ್ಚ್ ಆಗಿದ್ದಾರೆ.
Published by:G Hareeshkumar
First published: