HOME » NEWS » District » TERRORIST PRO WRITING ON WALL IN MANGALORE RH

ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪತ್ತೆ; ಆರೋಪಿಗಳ ಪತ್ತೆಗೆ ಪೊಲೀಸರ ಶೋಧ!

ನವೆಂಬರ್ 26, 2008ರಂದು ಲಷ್ಕರ್ ಇ ತೊಯ್ಬಾ  ಉಗ್ರ ಸಂಘಟನೆ ಮುಂಬೈ ದಾಳಿ ನಡೆಸಿತ್ತು. ಅದೇ ದಿನ ಕಡಲನಗರಿ ಮಂಗಳೂರಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಖಾಕಿಪಡೆ ಈ ದುಷ್ಕೃತ್ಯ ಎಸಗಿದವರ ಬಂಧನಕ್ಕೆ ಬಲೆ ಬೀಸಿದೆ.

news18-kannada
Updated:November 27, 2020, 3:15 PM IST
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪತ್ತೆ; ಆರೋಪಿಗಳ ಪತ್ತೆಗೆ ಪೊಲೀಸರ ಶೋಧ!
ಮಂಗಳೂರಿನಲ್ಲಿ ಉಗ್ರರ ಪರ ಬರೆದಿರುವ ಗೋಡೆ ಬರೆಹ
  • Share this:
ಮಂಗಳೂರು; ಕಡಲನಗರಿ ಮಂಗಳೂರಿನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆಯ ಪರ ಬರಹ ಬರೆದಿದ್ದಾರೆ. ಲಷ್ಕರ್ ಉಗ್ರರನ್ನು ಕರೆಸುವುದಾಗಿ ಬೆದರಿಕೆಯ ಬರೆಹದ ಜೊತೆಗೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದಿದ್ದಾರೆ. ಕಿಡಿಗೇಡಿಗಳ ಈ ದೇಶವಿರೋಧಿ ಕೃತ್ಯಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಡಲನಗರಿ ಮಂಗಳೂರಿನಲ್ಲಿ ಗೋಡೆಯ ಮೇಲೆ ಉಗ್ರಸಂಘಟನೆಯ ಪರ ಬರಹಗಳನ್ನು ಕಿಡಿಗೇಡಿಗಳು ಬರೆದಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕೌಂಪೌಂಡ್ ಮೇಲೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಆ್ಯಂಡ್ ಲಷ್ಕರ್ ಇ ತೊಯ್ಬಾ. ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನ್ವೇದಿಸ್ ಎಂಬ ಬರಹವನ್ನು ಹಾಕಿ ಲಷ್ಕರ್ ಜಿಂದಾಬಾದ್ ಎಂದು ಗೋಡೆಯ ಮೇಲೆ ಬರೆಯಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಕದ್ರಿ ಠಾಣಾ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್ ಹಚ್ಚಿ ಬರಹವನ್ನು ಅಳಿಸಿ ಹಾಕಿದ್ದಾರೆ.

ಇನ್ನು ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರ ವಿರೋಧಿ ಈ ಕೃತ್ಯದ ವಿರುದ್ದ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಒಕ್ಕಲಿಗ ಸಮಾಜವನ್ನು 2ಎ ಗೆ ಸೇರಿಸಿ; ಜೆಡಿಎಸ್ ಮಾಜಿ ಶಾಸಕ ಕೆ.ರಾಜು ಒತ್ತಾಯ

ತಡರಾತ್ರಿ 2 ಗಂಟೆಯಿಂದ ನಾಲ್ಕೂ ಗಂಟೆಯ ಒಳಗೆ ಈ ಕೃತ್ಯ ನಡೆದಿರುವ ಶಂಕೆಯಿದೆ. ಹೀಗಾಗಿ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಕಿಡಿಗೇಡಿಗಳ ಈ ಕೃತ್ಯ ಖಂಡಿಸಿ ಕದ್ರಿ ಮಲ್ಲಿಕಟ್ಟೆಯಲ್ಲಿ ಹಿಂದೂಪರ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿಭಟನೆ ನಡೆಸಿತು. ದೇಶವಿರೋಧಿ ಗೋಡೆಬರಹ ಬರೆದವರನ್ನು ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದರು.
Youtube Video

ನವೆಂಬರ್ 26, 2008ರಂದು ಲಷ್ಕರ್ ಇ ತೊಯ್ಬಾ  ಉಗ್ರ ಸಂಘಟನೆ ಮುಂಬೈ ದಾಳಿ ನಡೆಸಿತ್ತು. ಅದೇ ದಿನ ಕಡಲನಗರಿ ಮಂಗಳೂರಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಖಾಕಿಪಡೆ ಈ ದುಷ್ಕೃತ್ಯ ಎಸಗಿದವರ ಬಂಧನಕ್ಕೆ ಬಲೆ ಬೀಸಿದೆ.
Published by: HR Ramesh
First published: November 27, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories