HOME » NEWS » District » TERRORISM WILL TRIUMPH IN BELAGAVI IF SATISH JARAKIHOLI WINS THERE SAYS BASANAGOWDA PATIL YATNAL MYD SKTV

ಸತೀಶ್ ಜಾರಕಿಹೊಳಿ ಗೆದ್ದರೆ ಬೆಳಗಾವಿಯಲ್ಲಿ ಭಯೋತ್ಪಾದನೆ : ಯತ್ನಾಳ್

ಸತೀಶ ಜಾರಕಿಹೊಳಿ ಆರಿಸಿ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ಭಯೋತ್ಪಾನೆ ಪ್ರಾರಂಭ ಆಗುತ್ತದೆ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರು. ಅದರಲ್ಲಿ ಸತೀಶ ಜಾರಕಿಹೊಳಿ ಕೈವಾಡ ಇತ್ತು. ಈ ರೀತಿ ತುಷ್ಟೀಕರಣ ಹೆಚ್ಚಾಗುತ್ತದೆ. ಸತೀಶ ಆರಿಸಿ ಬಂದರೆ ಕೋಮು ಗಲಭೆ ಹೆಚ್ಚಾಗುತ್ತದೆ. ಬಿಜೆಪಿ ನಾಯಕರನ್ನು ಖರೀದಿಸಲು ಸತೀಶ ಪ್ರಯತ್ನಿಸುತ್ತಿದ್ದಾರೆ. 5-6 ಕೋಟಿ ರೂಪಾಯಿ ಒಬ್ಬೊಬ್ಬ ಶಾಸಕನಿಗೆ ಕೊಡಲು ಹಣ ಅವರಲ್ಲಿದೆ ಎಂದಿದ್ದಾರೆ.

news18-kannada
Updated:April 11, 2021, 7:09 AM IST
ಸತೀಶ್ ಜಾರಕಿಹೊಳಿ ಗೆದ್ದರೆ ಬೆಳಗಾವಿಯಲ್ಲಿ ಭಯೋತ್ಪಾದನೆ : ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್.
  • Share this:
ಧಾರವಾಡ(ಏಪ್ರಿಲ್ 10) : ನಾನು ಸಿಎಂ ಸ್ಥಾನ ಅಪೇಕ್ಷೆ ಪಟ್ಟಿಲ್ಲ. ಪಕ್ಷದ ನಿರ್ಣಯ ಹೇಳಲಾಗದು. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ ಸಿಂಗ್‌ರ ತಪ್ಪೋ ನಮ್ಮ ತಪ್ಪೋ ಮೇ 2ಕ್ಕೆ ಗೊತ್ತಾಗುತ್ತದೆ. ನಾಯಕರನ್ನು ಮಾಡುವುದು ರಾಜ್ಯದ ಜನ. ಅರುಣ ಸಿಂಗ್ ಮಾಡಲ್ಲ ಎಂದರು.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಬಿಜೆಪಿ ಶಾಸಕರಿಗೆ ಸಮಾಧಾನವಿಲ್ಲ. ಶಾಸಕರ ಕೆಲಸ ಆಗುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿಲ್ಲ ಎಂದು ಬೇಸರಿಸಿದರು. ಸಭೆ ಕರೆದರೆ ಎಲ್ಲರೂ ಮುಗಿ ಬೀಳುತ್ತಾರೆಂಬ ಭಯ ಯಡಿಯೂರಪ್ಪ ಅವರಿಗಿದೆ. ತಿಂಗಳು ಅಲೆದರೂ ಶಾಸಕಾಂಗ ಸಭೆ ಕರೆಯಲಿಲ್ಲ. ಯತ್ನಾಳ ಹೇಳಿಕೆ ಸುಳ್ಳು ಅಂತಾ ಅರುಣ ಸಿಂಗ್ ಹೇಳುತ್ತಾರೆ. ಶಾಸಕರ ಭಾವನೆ ತಿಳಿಯದಿದ್ದರೆ ಉಸ್ತುವಾರಿಯಾಗಿ ಏನು ಪ್ರಯೋಜನ ಎಂದರು.

ಯಡಿಯೂರಪ್ಪ-ವಿಜಯೇಂದ್ರ ಮೇಲೆ ಅರುಣ ಸಿಂಗ್‌ರಿಗೆ ಏಕೆ, ಪ್ರೀತಿ ಗೊತ್ತಿಲ್ಲ. ವಿಜಯೇಂದ್ರರನ್ನು ಉತ್ತರಾಧಿಕಾರಿ ಮಾಡುವುದು ಬಿಎಸ್‌ವೈ ಕೊನೆ ಆಸೆ. ದುರ್ಯೋಧನ ಯೋಗ್ಯ ಇಲ್ಲದ್ದರೂ, ದೃತರಾಷ್ಟ ಪಟ್ಟಕ್ಕೇರಿಸಿದ. ಹಾಗೇ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ಅದರಿಂದ ಅವರ ಕುಟುಂಬಕ್ಕೆ ಕೊನೆ ಅಂತ್ಯ ಆಗುತ್ತದೆ ಎಂದರು.

ಬೆಳಗಾವಿ ಲೋಕಸಭೆ ಚುನಾವಣೆ ವಿಚಾರಕ್ಕೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಆರಿಸಿ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ಭಯೋತ್ಪಾನೆ ಪ್ರಾರಂಭ ಆಗುತ್ತದೆ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರು. ಅದರಲ್ಲಿ ಸತೀಶ ಜಾರಕಿಹೊಳಿ ಕೈವಾಡ ಇತ್ತು. ಈ ರೀತಿ ತುಷ್ಟೀಕರಣ ಹೆಚ್ಚಾಗುತ್ತದೆ. ಸತೀಶ ಆರಿಸಿ ಬಂದರೆ ಕೋಮು ಗಲಭೆ ಹೆಚ್ಚಾಗುತ್ತದೆ. ಬಿಜೆಪಿ ನಾಯಕರನ್ನು ಖರೀದಿಸಲು ಸತೀಶ ಪ್ರಯತ್ನಿಸುತ್ತಿದ್ದಾರೆ. 5-6 ಕೋಟಿ ರೂಪಾಯಿ ಒಬ್ಬೊಬ್ಬ ಶಾಸಕನಿಗೆ ಕೊಡಲು ಹಣ ಅವರಲ್ಲಿದೆ. ಅದು ಸಾಧ್ಯ ಆಗಲ್ಲ. ಬಿಜೆಪಿಯ ಬೆಳಗಾವಿ ನಾಯಕರು ತಮ್ಮ ತಾಕತ್ತು ತೋರಿಸಬೇಕು.

ಇನ್ನು ಬಿಜೆಪಿಯಿಂದ ಬಸವರಾಜ ಪಾಟೀಲ ಯತ್ನಾಳ ಅವರನ್ನು ಉಚ್ಛಾಟನೆ ಮಾಡಲ್ಲ. ಏಕೆಂದರೆ ನಿಜವಾದ ಲಿಂಗಾಯತರು ಯಾರು ಅಂತಾ ಹೈಕಮಾಂಡಗೂ ಗೊತ್ತು ಎಂದು ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣಸಿಂಗ್ ಅವರಿಗೂ ಯತ್ನಾಳರ ಬಗ್ಗೆ ಗೌರವವಿದೆ. ಯತ್ನಾಳರು ಬಿಜೆಪಿ ವಿರುದ್ಧ ಮಾತನಾಡಲ್ಲ. ಭ್ರಷ್ಟಾಚಾರ-ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಅವರನ್ನು ಉಚ್ಛಾಟನೆ ಮಾಡಲ್ಲ ಎಂದರು.

ಇದನ್ನು ನಾವು ಅರುಣಸಿಂಗ್ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ಚುನಾವಣೆ ಕಾರಣಕ್ಕೆ ಯತ್ನಾಳರ ಮಾತನ್ನು ತಪ್ಪಾಗಿ ಭಾವಿಸಿದ್ದಾರೆ. ಯತ್ನಾಳ ಮತ್ತು ಅರುಣಸಿಂಗ್ ಸೇರಿಸಿ ಮಾತುಕತೆ ಮಾಡುತ್ತೇವೆ ಎಂದು ಹೇಳಿದರು.

ಪ್ರಧಾನಮಂತ್ರಿ, ಅಮಿತ ಷಾ ಹೃದಯದಲ್ಲಿಯೂ ಯತ್ನಾಳರ ಬಗ್ಗೆ ಕಳಕಳಿ ಇದೆ. ಸಣ್ಣಪುಟ್ಟ ಜನ ಪ್ರತಿನಿಧಿಗಳು ಹೋಗಿ ಹಣ ಕೊಟ್ಟು ಸಸ್ಪೆಂಡ್ ಮಾಡಲು ಒತ್ತಡ ಹಾಕಿರಬಹುದು. ಆದರೆ, ರಾಷ್ಟ್ರೀಯ ಹೈಕಮಾಂಡ್ ಯತ್ನಾಳರನ್ನು ಬಿಟ್ಟು ಕೊಡುವುದಿಲ್ಲ ಎಂದರು.
Youtube Video

ಹೈಕಮಾಂಡ್ಗೂ ಲಿಂಗಾಯತರ ಶಕ್ತಿ ಗೊತ್ತಿದೆ. ಲಿಂಗಾಯತರು ಅಂದರೆ ಶೆಟ್ಟರ್, ಯಡಿಯೂರಪ್ಪ ನಾಲ್ಕು ಜನ ಅಂತಾ ಭಾವಿಸಿದ್ದರು. ಆದರೆ, ನಿಜವಾದ ಲಿಂಗಾಯತ ಯಾರು ಎಂಬುದು ಅವರಿಗೂ ಈಗ ಗೊತ್ತಾಗಿದೆ. ಅರುಣ ಸಿಂಗ್‌ರ ತಪ್ಪು ತಿಳವಳಿಕೆ ಸರಿಪಡಿಸಲಿದೆ ಎಂದರು.
Published by: Soumya KN
First published: April 11, 2021, 7:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories