ಆನ್​ಲೈನ್ ಕ್ಲಾಸ್ ಕೇಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ನಿಗೂಢ ಸಾವು

10ನೇ ತರಗತಿ ಬಾಲಕನೊಬ್ಬ ಮಗುವಿನ ಜೋಗುಳದ ಬಟ್ಟೆಯಲ್ಲಿ ಕೂತು ಆನ್​ಲೈನ್​ನಲ್ಲಿ ಪಾಠ ಕೇಳುತ್ತಿದ್ದ ಬಾಲಕ ಅದೇ ಜೋಗುಳ ಸುರುಳಿಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೊಡ್ಡಬಳ್ಳಾಪುರ: ಆನ್​ಲೈನ್ ಕ್ಲಾಸ್​ನಲ್ಲಿ ಪಾಠ ಕೇಳುತ್ತಿದ್ದ ಬಾಲಕನೊಬ್ಬ ನಿಗೂಢ ರೀತಿಯಲ್ಲಿ ಜೋಗುಳದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ  ಹೂರವಲಯ ದರ್ಗಾಜೋಗಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಎಂಬುವರ ಮಗ ವಿಶ್ವಾಸ್ (10) ಸಂಶಯಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಈತ ಜ್ಞಾನಗಂಗಾ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ.

ಕೊರೊನಾ  ಹಿನ್ನೆಲೆಯಲ್ಲಿ  ಆನ್​ಲೈನ್ ಕ್ಲಾಸ್  ಮೂಲಕ  ಮಕ್ಕಳಿಗೆ  ಪಾಠ ಮಾಡಲಾಗುತ್ತಿತ್ತು. ನಿನ್ನೆ ಭಾನುವಾರ ಮಧ್ಯಾಹ್ನ ನಾಲ್ಕು ಗಂಟೆಗೆ ಆನ್​ಲೈನ್ ಕ್ಲಾಸ್ ಇದ್ದ ಕಾರಣಕ್ಕೆ ಆತನ ಪೋಷಕರು ರೂಮ್ ಒಳಗೆ ಕಳುಹಿಸಿದ್ದಾರೆ. ಮನೆಯಲ್ಲಿ ಸಣ್ಣ ಮಗುವಿದ್ದ  ಕಾರಣಕ್ಕೆ ರೂಮ್​ನಲ್ಲಿ ಜೋಕಾಲಿ ಕಟ್ಟಲಾಗಿತ್ತು. ಆನ್​ಲೈನ್  ಕ್ಲಾಸ್​ಗೆಂದು ರೂಮ್ ಒಳ ಹೋದ ವಿಶ್ವಾಸ್, ಜೋಕಾಲಿ ಒಳಗೆ ಕುಳಿತು ಪಾಠ ಕೇಳುತ್ತಿದ್ದನೆನ್ನಲಾಗಿದೆ. ಗಂಟೆಗಳು ಕಳೆದರೂ ಆತ ರೂಮ್​ನಿಂದ ಹೊರಗೆ ಬಂದಿಲ್ಲ. ಆಗ ರೂಮ್ ಒಳ ಹೋಗಿ ನೋಡಿದಾಗ ಆತ ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿರುವುದು ಪೋಷಕರಿಗೆ ಕಂಡುಬಂದಿದೆ.

ಇದನ್ನೂ ಓದಿ: ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದ ಡಾ.ಮಾಧುರಿ‌ ಕಾನಿಟ್ಕರ್ ಧಾರವಾಡದವರು

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ನಿರ್ಲಕ್ಷ್ಯತೆಯಿಂದ ಸಾವನ್ನಪ್ಪಿದನಾ ಅಥವಾ ಆನ್​ಲೈನ್ ತರಗತಿಯ ಒತ್ತಡಕ್ಕೆ ಸಿಲುಕಿ ಈ ಘಟನೆ ನಡೆಯಿತಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.ಸುಮಾರು ಮೂರು ಗಂಟೆ ವೇಳೆಗೆ ಪೋಷಕರು ಬಾಲಕನನ್ನು ಗದರಿಸಿ ಕ್ಲಾಸ್ ಅಟೆಂಡ್ ಮಾಡುವಂತೆ ತಿಳಿಸಿದ್ದಾರೆ. ಮೊಬೈಲ್ ಫೋನ್ ತೆಗೆದುಕೊಂಡು ಕೊಠಡಿ ಒಳ ಹೋದ ಬಾಲಕ ಒಳಗಿಂದ ಚಿಲಕ ಲಾಕ್ ಮಾಡಿಕೊಂಡಿದ್ದ. ಒಳಗೆ ಚಿಕ್ಕ ಮಗುವಿಗೆ ಹಾಕಿದ್ದ ಜೋಕಾಲಿಯಲ್ಲಿ ಆಟ ಆಡುತ್ತಾ ಪಾಠ ಕೇಳ್ತಾ ಇದ್ದ. ಜೋಕಾಲಿ ಸುತ್ತಿಕೊಂಡು ಉಸಿರು ಕಟ್ಟಿ ಸಾವನ್ನಪ್ಪಿರಬಹುದು ಎಂಬುದು ಪೋಷಕರ ಹೇಳಿಕೆ.

ಆದರೆ ಆನ್​ಲೈನ್ ಲೈವ್ ಕ್ಲಾಸ್​ನಲ್ಲಿ ಇರೋವಾಗ ಅಷ್ಟು ಜನರಲ್ಲಿ ವಿಶ್ವಾಸ್ ಕಡೆ ಯಾರೂ ಗಮನ ಹರಿಸಲಿಲ್ಲವಾ ಎಂಬ ಪ್ರಶ್ನೆ ಇದೆ. ಆದರೆ, ವಿಡಿಯೋ ಆಫ್​ಲೈನ್ ಮಾಡಿ ಪಾಠ ಕೇಳಿರುವ ಸಾಧ್ಯತೆಯೂ ಇದೆ. ಇವೆಲ್ಲ ಗೊಂದಲಗಳ ಮಧ್ಯೆ ವಿಶ್ವಾಸ ಸಾವಿಗೆ ನಿಜವಾಗಿಯೂ ಏನು ಕಾರಣ ಎಂಬುದು ಗೊತ್ತಾಗಬೇಕಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್​ಐ ಗಜೇಂದ್ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ವರದಿ: ನವೀನ್ ಕುಮಾರ್
Published by:Vijayasarthy SN
First published: