• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹಾಸನದಲ್ಲಿ 10 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್; ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು!

ಹಾಸನದಲ್ಲಿ 10 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್; ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು!

ಡಿಡಿಪಿಐ ಪ್ರಕಾಶ್

ಡಿಡಿಪಿಐ ಪ್ರಕಾಶ್

ಪರೀಕ್ಷಾ ವರದಿ ಬಂದ ಬಳಿಕ ವರದಿಯ ಆಧಾರದ ಮೇಲೆ ಶಾಲೆಗೆ ಬರಬೇಕಾ ಅಥವಾ ಬೇಡವೇ ಎಂಬುದನ್ನು ಶಿಕ್ಷಕರಿಗೆ ತಿಳಿಸಲಾಗುವುದು. ಆದರೆ, ಸದ್ಯ ಶಾಲೆಗೆ ಬಾರದಂತೆ ಅವರಿಗೆ ಸೂಚನೆ ನೀಡುವ ಜೊತೆಗೆ ಚಿಕಿತ್ಸೆಗೆ ಒಳಗಾಗಬೇಕೆಂದು ಆದೇಶ ನೀಡಲಾಗಿದೆ. ಇವತ್ತು ಶಿಕ್ಷಕರಿಂದ ಮಕ್ಕಳಿಗೆ ಸೋಂಕು ಹರಡಿಲ್ಲ ಹಾಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದೆ ಓದಿ ...
  • Share this:

ಹಾಸನ; ಹಾಸನ ಜಿಲ್ಲೆಯಲ್ಲಿ 10 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ. ಶಾಲೆ ಆರಂಭಕ್ಕೂ ಮುನ್ನ ಮೂರು ಮಂದಿ ಶಿಕ್ಷಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಸೋಂಕಿತ ಮೂರು ಮಂದಿ ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ. ಶಾಲೆ ಆರಂಭವಾದ 2 ದಿನಗಳಲ್ಲಿ 7 ಮಂದಿ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಚನ್ನರಾಯಪಟ್ಟಣ ತಾಲ್ಲೂಕಿನ 3, ಹಾಸನ ತಾಲ್ಲೂಕಿನ 2 ಹಾಗೂ ಹೊಳೆನರಸೀಪುರ ತಾಲ್ಲೂಕಿನ 2 ಶಿಕ್ಷಕರಿಗೆ ಸೋಂಕು ತಗುಲಿದೆ. ಶಿಕ್ಷಕರಿಗೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯ ಹತ್ತು ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಮೂರು ದಿನ ರಜೆ ನೀಡಲಾಗಿದೆ. ಹೊಳೆನರಸೀಪುರ, ಚನ್ನರಾಯಪಟ್ಟಣ, ಹಾಸನ ತಾಲ್ಲೂಕಿನ ಏಳು ಶಾಲೆಗಳಿಗೆ ರಜೆ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.


ಹತ್ತು ಕಟ್ಟಡಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಮುಂದಿನ ಮೂರು ದಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಶಾಲೆ ಓಪನ್ ಮಾಡಲು ನಿರ್ಧರಿಸಲಾಗಿದೆ. ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.


ಶಾಲೆ ಪ್ರಾರಂಭವಾಗಿ ಇಂದಿಗೆ ಆರು ದಿನಗಳು ಕಳೆದಿವೆ. ಆದರೆ ಹಾಸನದಲ್ಲಿ ಹತ್ತು ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆತಂಕ ಮನೆ ಮಾಡಿದೆ. ಹಾಸನ ಜಿಲ್ಲೆಯ ಪ್ರಾಥಮಿಕ ಶಾಲೆಯ 7 ಮಂದಿ ಶಿಕ್ಷಕರಿಗೆ ಹಾಗೂ ಪ್ರೌಢಶಾಲೆಯ 3 ಮಂದಿ ಶಿಕ್ಷಕರಿಗೆ ಇರುವ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಕರಿನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ತಿಳಿಸಿದರು.


ಶಾಲೆ ಆರಂಭವಾಗುವ ಮುನ್ನವೇ 3ಮಂದಿ ಶಿಕ್ಷಕರಿಗೆ ಪಾಸಿಟಿವ್ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರು ಶಾಲೆಗೆ ಬಂದಿರಲಿಲ್ಲ. ಉಳಿದ ಶಿಕ್ಷಕರಿಗೆ ಮೊದಲು ಪರೀಕ್ಷೆ ಮಾಡಿದಾಗ ಯಾವುದೇ ರೋಗಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಬಳಿಕ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಶಾಲೆಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ.


ಇದನ್ನು ಓದಿ: ಶಾಲೆ ಆರಂಭದ ನಡುವೆ ಕೊರೋನಾ ಭಯ; ಲಸಿಕೆ ಎದುರು ನೋಡುತ್ತಿರುವ ಜನ


ಪಿಯುಸಿ ಭಾಗದಲ್ಲಿ ಯಾವುದೇ ಅಧ್ಯಾಪಕರಿಗೆ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಹತ್ತು ಮಂದಿ ಶಿಕ್ಷಕರಲ್ಲಿ ಆರು ಪ್ರಕರಣಗಳು ಹಾಸನ ತಾಲೂಕಿನವರಾಗಿದ್ದು ಚನ್ನರಾಯಪಟ್ಟಣ ತಾಲೂಕಿನಲ್ಲಿ 2 ಪ್ರಕರಣ ಹಾಗೂ ಹೊಳೆನರಸೀಪುರದಲ್ಲಿ 2 ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು 10 ಪ್ರಕರಣಗಳು ಇದುವರೆಗೆ ಕಂಡುಬಂದಿದ್ದು, ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ  20 ಶಾಲೆಗಳಿಗೂ ಸ್ಯಾನಿಟೈಸರ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ.


ಶಾಲೆಗಳಿಗೆ ಸ್ಯಾನಿಟೈಸರ್ ಮಾಡುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಕ್ಕಳಿಗೆ ರಜೆ ನೀಡಲಾಗಿದೆ. ಮತ್ತೊಮ್ಮೆ ಪರೀಕ್ಷಾ ವರದಿ ಬಂದ ಬಳಿಕ ವರದಿಯ ಆಧಾರದ ಮೇಲೆ ಶಾಲೆಗೆ ಬರಬೇಕಾ ಅಥವಾ ಬೇಡವೇ ಎಂಬುದನ್ನು ಶಿಕ್ಷಕರಿಗೆ ತಿಳಿಸಲಾಗುವುದು. ಆದರೆ, ಸದ್ಯ ಶಾಲೆಗೆ ಬಾರದಂತೆ ಅವರಿಗೆ ಸೂಚನೆ ನೀಡುವ ಜೊತೆಗೆ ಚಿಕಿತ್ಸೆಗೆ ಒಳಗಾಗಬೇಕೆಂದು ಆದೇಶ ನೀಡಲಾಗಿದೆ. ಇವತ್ತು ಶಿಕ್ಷಕರಿಂದ ಮಕ್ಕಳಿಗೆ ಸೋಂಕು ಹರಡಿಲ್ಲ ಹಾಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.


ವರದಿ - ಡಿಎಂಜಿಹಳ್ಳಿಅಶೋಕ್

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು