Maski By Election: ಮಸ್ಕಿಯಲ್ಲಿ ಮತ ಸೆಳೆಯಲು ಗಾಯಕಿ ಮಂಗ್ಲಿ ಮೋಡಿ

ಕಣ್ಣೆ ಅದರಿಂದಿ, ಕಣ್ಣು ಹೊಡೆಯಾಕ ಎಂದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಜನಪ್ರಿಯ ಹಾಡಿನೊಂದಿಗೆ ಲಂಬಾಣಿ ಭಾಷೆಯಲ್ಲಿ ಹಾಡಿನಿಂದ  ಮಸ್ಕಿ ಬೈ ಎಲೆಕ್ಷನ್ ಅಖಾಡದಲ್ಲಿ ತೆಲುಗು ಗಾಯಕಿ ಸತ್ಯವತಿ ರಾಠೋಡ ಮತದಾರರನ್ನು ಸೆಳೆಯುವ ಯತ್ನ ಮಾಡಿದರು.

ಚುನಾವಣಾ ಪ್ರಚಾರದಲ್ಲಿ
ಗಾಯಕಿ ಮಂಗ್ಲಿ

ಚುನಾವಣಾ ಪ್ರಚಾರದಲ್ಲಿ ಗಾಯಕಿ ಮಂಗ್ಲಿ

  • Share this:
 Maski By Election: ಪ್ರತಾಪಗೌಡ ಪಾಟೀಲರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭೆ ಉಪಚುನಾವಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಮತ ಬೇಟೆಗಾಗಿ ಜನಪ್ರಿಯ ಗಾಯಕಿಯನ್ನು ಕರೆಸಿ ರೋಡ್ ಶೋ ಮಾಡಿಸಿದ್ದು ಪ್ರತಾಪಗೌಡರಿಗೆ ಎಷ್ಟು ಪ್ರಮಾಣದ ಮತಗಳ ಬರುತ್ತವೊ ಕಾದು ನೋಡಬೇಕು.

ಕಣ್ಣೆ ಅದರಿಂದಿ, ಕಣ್ಣು ಹೊಡೆಯಾಕ ಎಂದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಜನಪ್ರಿಯ ಹಾಡಿನೊಂದಿಗೆ ಲಂಬಾಣಿ ಭಾಷೆಯಲ್ಲಿ ಹಾಡಿನಿಂದ  ಮಸ್ಕಿ ಬೈ ಎಲೆಕ್ಷನ್ ಅಖಾಡದಲ್ಲಿ ತೆಲುಗು ಗಾಯಕಿ ಸತ್ಯವತಿ ರಾಠೋಡ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಏಪ್ರಿಲ್ 17 ರಂದು ನಡೆಯುವ ಮಸ್ಕಿ ಬೈ ಎಲೆಕ್ಷನ್ ನ ಬಹಿರಂಗ ಪ್ರಚಾರಕ್ಕೆ ಎರಡು ದಿನ ಮಾತ್ರ ಅವಕಾಶವಿದ್ದು ಮಂಗಳವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪರವಾಗಿ ಮತ ಪ್ರಚಾರಕ್ಕಾಗಿ `ರಾಬರ್ಟ್' ಚಿತ್ರದ ಕಣ್ಣು ಹೊಡೆಯಾಕ, ಮೊನ್ನೆ ಕಲಿತೀನಿ, ಕಣ್ಣೆ ಅದರಿಂದಿ ಎಂದು ಕನ್ನಡ ಹಾಗು ತೆಲುಗಿನಲ್ಲಿ ಪ್ರಸಿದ್ದವಾದ ಹಾಡಿನ ತೆಲುಗು ಭಾಷೆಯ ಗಾಯಕಿ ಲಂಬಾಣಿ ಜನಾಂಗದ ಹಾಡುಗಾರ್ತಿ ಸತ್ಯವತಿ ರಾಠೋಡ ಮಂಗ್ಲಿ ಎಂದೇ ಖ್ಯಾತರಾಗಿದ್ದಾರೆ.

ಈ ಗಾಯಕಿ ಮಸ್ಕಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಮಂಗಳವಾರ ಸಾಯಂಕಾಲ ಮಸ್ಕಿ ಕ್ಷೇತ್ರದ ಅಡವಿಬಾವಿ ತಾಂಡಾ, ಹಡಗಲಿ ತಾಂಡಾಕ್ಕೆ ಆಗಮಿಸಿದ ಮಂಗ್ಲಿ, ತಾಂಡಾಗಳಲ್ಲಿ ಲಂಬಾಣಿ ಜನಾಂಗದ ಭಾಷೆಯ ಹಾಡುಗಳನ್ನು ಹಾಡಿದರು, ಜನರ ಒತ್ತಾಯದ ಮೇರಿಗೆ ತೆಲುಗಿನಲ್ಲಿ ತಾವೇ ಹಾಡಿರುವ `ಕಣ್ಣೇ ಅದರಿಂದಿ' ಹಾಡು, ಇದೇ ಹಾಡನ್ನು ಕನ್ನಡದಲ್ಲಿ ಕಣ್ಣು ಹೊಡೆಯಾಕ ಎಂದು ಹಾಡಿ ರಂಜಿಸಿದರು. ಎರಡು ತಾಂಡಾಗಳ ಭೇಟಿ ನಂತರ ಮಸ್ಕಿ ಪಟ್ಟಣದಲ್ಲಿ ರೋಡ್ ಶೋ ಮಾಡಿದ ಮಂಗ್ಲಿ ಮಸ್ಕಿಯ ಜನರನ್ನು ರಂಜಿಸಿದರು.

ಅಲ್ಪ ಸಮಯದಲ್ಲಿ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸತ್ಯವತಿ ರಾಠೋಡ, ಈಗ ಕನ್ನಡಿಗರಿಗೂ ಫೆವರೇಟ್ ಗಾಯಕಿಯಾಗಿದ್ದಾರೆ. ಸಾಮಾಜಿಕ‌ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಕನ್ನಡಿಗರು ಮಂಗ್ಲಿಯ ಫಾಲೋವರ್ ಆಗಿರುವುದು ವಿಶೇಷ. ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗ್ಲಿ ನನಗೆ ಕನ್ನಡ ಬರುವುದಿಲ್ಲ ಆದರೆ ಭಾಷೆ ಸರಳವಾಗಿರುವದರಿಂದ ಕಲಿಯುತ್ತೇನೆ ಎಂದು ಹೇಳುತ್ತಾ ಪ್ರತಾಪಗೌಡ ಪಾಟೀಲರನ್ನು 25000 ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ಕಂಚಿನ ಕಂಠದ ಮಂಗ್ಲಿಯು ಮೂಲತಃ ತೆಲುಗು ಭಾಷೆಯ ಜನಪದ ಹಾಡುಗಾರ್ತಿಯಾಗಿದ್ದು ಆಕೆಯ ಕಂಚಿನ ಕಂಠ ಕ್ಕೆ ತೆಲುಗು ಭಾಷಿಕರೊಂದಿಗೆ ಈಗ ಕನ್ನಡಿಗರು ಫಿದಾ ಆಗಿದ್ದಾರೆ. ಇಂಥ ಗಾಯಕಿಯನ್ನು ಮಸ್ಕಿಗೆ ಕರೆಸಿ ಮತ ಬೇಟೆಯನ್ನು ಪ್ರತಾಪಗೌಡ ಪಾಟೀಲ ಪರ ಮಾಡಲಾಯಿತು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 30 ಲಂಬಾಣಿ ತಾಂಡಾಗಳಿವೆ. ಈ ತಾಂಡಾಗಳಲ್ಲಿ ಬೆಂಗಳೂರು ಹಾಗು ಮುಂಬೈ ನಲ್ಲಿ ಲಾಕಡೌನ್ ಆಗುವ ಭೀತಿಯಿಂದ ಜನ ತಾಂಡಾಗಳಿಗೆ ಮರಳಿದ್ದು, ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ದೊಡ್ಟ ತಾಂಡಾಗಳಾದ ಹಡಗಲಿ ಹಾಗು ಅಡವಿಬಾವಿ ತಾಂಡಾಗಳಲ್ಲಿ ಲಂಬಾಣಿ ಜನಾಂಗದ ಗಾಯಕಿ ಹಾಡಿಸಿದ್ದಾರೆ.

ಈ‌ ಸಂದರ್ಭದಲ್ಲಿ ಸಂಸದ ಉಮೇಶ ಜಾದವ ಸೇರಿದಂತೆ ಲಂಬಾಣಿ ಜನಾಂಗದ ಮುಖಂಡರು ಭಾಗವಹಿಸಿದ್ದು, ಗಾಯಕಿ ಹಾಗು ಮುಖಂಡರಿಂದಾಗಿ ಬಿಜೆಪಿ ಪರ ಮತಗಳು ಬೀಳುತ್ತವೊ ಕಾದು ನೋಡಬೇಕು. ಮಂಗ್ಲಿ ನೋಡಲು ಜನ ಮುಗಿ ಬಿದ್ದಿದ್ದು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕಾದ ಕಾರ್ಯಕ್ರಮದಲ್ಲಿ ಕೊರೊನಾವನ್ನು ಜನರು ಮರೆತಿದ್ದರು, ಜನಪ್ರಿಯ ಗಾಯಕಿಯೂ ಸಹ ಕೊವಿಡ್ ನಿಯಮಾವಳಿ ಪಾಲಿಸಲಿಲ್ಲ.
Published by:Soumya KN
First published: