HOME » NEWS » District » TEARY TALE OF A FAN OF SANDALWOOD STAR PUNITH RAJKUMAR IN MYSORE PMTV SNVS

ಸತ್ತ ಮಗನ ಕೊನೆಯಾಸೆ ತೀರಿಸಿದ ಪೋಷಕರು; ಅಭಿಮಾನ ಕಂಡು ಪುನೀತನಾದ ಯುವರತ್ನ

ಯುವರತ್ನ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದ ಹರ್ಷಿತ್ ಕೆಲ ತಿಂಗಳ ಹಿಂದೆ ಈಜಲು ಹೋಗಿ ಸಾವನ್ನಪ್ಪಿದ್ದ. 16 ವರ್ಷದ ಈತನಿಗೆ ಯುವರತ್ನ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂಬ ಆಸೆ ಇತ್ತು. ಇದೀಗ ಆತನ ಭಾವಚಿತ್ರಕ್ಕೆ ಆ ಭಾಗ್ಯ ಸಿಕ್ಕಿತು.

news18-kannada
Updated:April 6, 2021, 3:39 PM IST
ಸತ್ತ ಮಗನ ಕೊನೆಯಾಸೆ ತೀರಿಸಿದ ಪೋಷಕರು; ಅಭಿಮಾನ ಕಂಡು ಪುನೀತನಾದ ಯುವರತ್ನ
ಅಪ್ಪು ಅಭಿಮಾನಿ ಹರ್ಷಿತ್ ಮತ್ತವನ ಕುಟುಂಬ
  • Share this:
ಮೈಸೂರು: ಆ ಯುವಕ ಪುನಿತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಯುವರತ್ನ ಚಿತ್ರ ರಿಲೀಸ್ ಗಾಗಿ ಆತ ಕಾಯ್ತ ಇದ್ದ. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ನೀರಲ್ಲಿ ಈಜಲು ಹೋಗಿದ್ದ ಆ ಯುವಕ ನೀರುಪಾಲಾಗಿ ಪ್ರಾಣ ಕಳೆದುಕೊಂಡಿದ್ದ. ಆದ್ರೆ ಇದೀಗ ಯುವರತ್ನ ಚಿತ್ರ ರಿಲೀಸ್ ಆದ ಮೇಲೆ ಮಗನ ಆಸೆ ಪೂರೈಸಿದ ಪೋಷಕರು ಮಗನ ಭಾವಚಿತ್ರ ಇಟ್ಟುಕೊಂಡು ಥಿಯೇಟರ್​ನಲ್ಲಿ ಯವರತ್ನ ಸಿನಿಮಾ‌ ವೀಕ್ಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಈ ಅಭಿಮಾನದ ಕಥೆ ಕೇಳಿ ಮನಸ್ಸು ಭಾರ ಆಗಿದೆ ಅಂತ ಅಭಿಮಾನಿಯ ಅಪ್ಪು ಟ್ವೀಟ್ ಮಾಡಿದ್ದರು.

ಈ ಅಭಿಮಾನಿಯ ಹೆಸರು ಹರಿಕೃಷ್ಣನ್. ವಯಸ್ಸು 16 ವರ್ಷ. ಮೈಸೂರಿನ ಮುರುಳಿಧರ್ ಎಂಬುವವರ ಪುತ್ರ. ಈತನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಇನ್ನಿಲ್ಲದ ಪ್ರೀತಿ. ಯುವರತ್ನ ಸಿನಿಮಾ ರಿಲೀಸ್ ಆಗುತ್ತೆ, ಫಸ್ಟ್ ಶೋ ನೋಡ್ಬೇಕು ಅಂದುಕೊಂಡಿದ್ದನಂತೆ. ಆದ್ರೆ ವಿಧಿ ಆಟ ಬೇರೆ ಆಗಿ ಘೋರ ದುರಂತವೇ ಆಗಿಹೋತ್ತು. ಸ್ನೇಹಿತರ ಜೊತೆ ಮೈಸೂರಿನ‌ ಹೊರವಲಯದಲ್ಲಿರುವ ನಾಲೆಯೊಂದರಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಇಡೀ ಕುಟುಂಬ ಕಳೆದ ಮೂರು ತಿಂಗಳಿಂದ ದುಃಖದಲ್ಲಿ ಇದ್ದರು. ಅಷ್ಟರಲ್ಲೇ ಮಗ ಆಸೆ ಪಡುತ್ತಿದ್ದ ನಟನ‌ ಸಿನಿಮಾ ರಿಲೀಸ್ ಆಗಿದೆ. ಆದರೆ ಮಗ ಮಾತ್ರ ಇಲ್ಲ ಅಂತ ಮನೆ ಮಂದಿಗೆಲ್ಲ ಮತ್ತಷ್ಟು ಖಿನ್ನತೆ ಕಾಡಿದೆ. ಈ ವೇಳೆ ಕಡೆಯ ಮಗನ ಆಸೆ ಪೂರೈಸಲು ಮಗನ ರೂಪದಲ್ಲಿ ಚಿತ್ರಮಂದಿರಕ್ಕೆ ಆತನ‌ ಭಾವಚಿತ್ರ ತಂದು ಸಿನಿಮಾ‌ ವೀಕ್ಷಣೆ ಮಾಡಿದ್ದಾರೆ.

ಮೈಸೂರಿನ ಡಿಆರ್​ಸಿ ಚಿತ್ರಮಂದಿರದಲ್ಲಿ ತಂದೆ ತಾಯಿ ಹಾಗೂ ಹಿರಿಯ ಮಗ ಹರ್ಷಿತ್ ಚಿತ್ರ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಮೃತ ಹರಿಕೃಷ್ಣನ್​ಗೂ ಕೂಡ ಒಂದು ಟಿಕೆಟ್ ತೆಗೆದುಕೊಂಡು ಆತನ ಭಾವ ಚಿತ್ರವನ್ನು ಸೀಟ್​ನಲ್ಲಿಟ್ಟು ಸಿನಿಮಾ ನೋಡಿದ್ದಾರೆ. ಈ‌ ಮೂಲಕ ತಮ್ಮ ಮಗನ ಆಸೆ ಪೂರೈಸಿದಂತಾಗಿದೆ ಎಂದು ನೋವಿನಿಂದಲೇ ಪೋಷಕರು ಮಾತನಾಡಿದ್ದಾರೆ.

ಇದನ್ನೂ ಓದಿ: ನಿರ್ಲಕ್ಷ್ಯಕ್ಕೊಳಗಾಗಿದೆ ತುಳುನಾಡಿನ ವೀರ ಪುರುಷರ ತವರು; ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ

ಹರಿಕೃಷ್ಣನ್ ತಂದೆ ಮುರುಳಿಧರ್ ಹಾಗೂ ಕುಟುಂಬಸ್ಥರು ಆತನ ಆಸೆಯನ್ನು ಈಡೇರಿಸಬೇಕು ಅಂತ ಆತನ ಪೋಟೋವನ್ನು ಥಿಯೇಟರ್ ನಲ್ಲಿ ಇಟ್ಟುಕೊಂಡು ಸಿನಿಮಾ ವೀಕ್ಷಣೆ ಮಾಡಿದ್ರು. ಈ ಮೂಲಕ ಮಗನ ಆಸೆಯನ್ನು ಪೂರೈಸಿದ್ರು. ಆ ಯುವಕನ‌ ಕುಟುಂಬಸ್ಥರು ಮಗನ ಆಸೆ ತೀರಿಸಿದ್ದರ ಬಗ್ಗೆ ನ್ಯೂಸ್‌18 ಕನ್ನಡ ವರದಿ ಪ್ರಸಾರ ಮಾಡಿತ್ತು. ಇದನ್ನ ಗಮನಿಸಿದ ಪುನೀತ್ ರಾಜ್ ಕುಮಾರ್ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಹರಿಕೃಷ್ಣನ್ ಫೋಟೋ ಹಿಡಿದು ಯುವರತ್ನ ಸಿನಿಮಾ ನೋಡಿರುವ ದೃಶ್ಯ ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ‌ ಅಂತ ಕೋರಿದ್ದಾರೆ.

ಅಭಿಮಾನಿಯ ಅಭಿಮಾನ ಎಂಥದ್ದು ಎಂದು ಯಾರು ಊಹೆ ಮಾಡಲಾರರು. ಮಗನ ಅಭಿಮಾನಕ್ಕೆ ಬೆಲೆ ಕೊಟ್ಟ ತಂದೆ, ತಾಯಿ, ಅಣ್ಣನಿಗೂ ಆ ಅಭಿಮಾನದ ಬೆಲೆ ತಿಳಿದಿತ್ತು. ಇವರೆಲ್ಲರ ಅಭಿಮಾನಕ್ಕೆ ಮನಸ್ಸನ್ನ ಭಾರ ಮಾಡಿಕೊಂಡ ಕರುನಾಡಿನ ಅಪ್ಪುವಿಗೂ ಅಭಿಮಾನದ ಬೆಲೆ ಅರಿವಾಗಿದೆ. ಅದೇನೇ ಇದ್ದರೂ ಚಿತ್ರನಟರ ಮೇಲಿನ ಅಭಿಮಾನಕ್ಕೆ ಇದೊಂದು ಜೀವಂತ ಉದಾಹರಣೆಯಾಗಿದೆ

ವರದಿ: ಪುಟ್ಟಪ್ಪ
Published by: Vijayasarthy SN
First published: April 6, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories