ವಿಜಯಪುರದಲ್ಲಿ ಫುಡ್ ಪಾರ್ಕ್ ನಿರ್ಮಿಸಲು ಆಗ್ರಹ : ಕೃಷಿ ಸಚಿವರಿಗೆ ರೈತರು, ಉದ್ಯಮಿಗಳ ತಂಡದಿಂದ ಮನವಿ

ವಿಜಯಪುರ ಜಿಲ್ಲೆಯ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ತೋಟಗಾರಿಕೆ ಪ್ರದೇಶ ಅಭಿವೃದ್ಧಿಯಾಗಲಿದೆ. ಆ ನಿಟ್ಟಿನಲ್ಲಿ ವಿಜಯಪುರ ಫುಡ್​ಪಾರ್ಕ್​​ ಮಾನ್ಯ ಕೃಷಿ ಸಚಿವರು ಹೆಚ್ಚು ಒತ್ತು ನೀಡಬೇಕು

ಸಚಿವ ಬಿ ಸಿ ಪಾಟೀಲ್​​ ಅವರಿಗೆ ಮನವಿ ನೀಡಿದ ನಿಯೋಗ

ಸಚಿವ ಬಿ ಸಿ ಪಾಟೀಲ್​​ ಅವರಿಗೆ ಮನವಿ ನೀಡಿದ ನಿಯೋಗ

  • Share this:
ವಿಜಯಪುರ(ಡಿಸೆಂಬರ್​. 26): ವಿಜಯಪುರ ಸಮೀಪದ ಇಟ್ಟಂಗಿಹಾಳ ಹತ್ತಿರ ಫುಡ್​​ಪಾರ್ಕ್ ನಿರ್ಮಿಸಬೇಕೆಂದು ಜಿಲ್ಲೆಯ ರೈತರ ಮತ್ತು ಮಾಜಿ ಸಚಿವರ ಪುತ್ರ ಬಸನಗೌಡ ಎಂ. ಪಾಟೀಲ ಅವರನ್ನೊಳಗೊಳಂಡ ತಂಡ ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಲಿಂಬೆ, ಮಾವು, ಬಾರೆ ಹಣ್ಣು, ಪೇರಲೆ ಮತ್ತು ಇತರ ಹೆಸರುವಾಸಿಯಾಗಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲದೇ, ಈ ರೈತರಿಗೆ ತಾವು ಬೆಳೆದ ಹಣ್ಣುಗಳನ್ನು ಸಂಸ್ಕರಣೆಗೆ ಅನುಕೂಲ ಮಾಡಿದರೆ ಈ ಭಾಗದಲ್ಲಿ ಸಣ್ಣ ಉದ್ಯಮಿಗಳು ಆರಂಭವಾಗಲು ನೆರವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನವೆಂಬರ್​ 30 ರಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದರು ಕೋರಿದ್ದರು. 

ಆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಮಗ ಹಾಗೂ ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ, ರೈತರು ಹಾಗೂ ಉದ್ಯಮಿಗಳ ತಂಡ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಅಲ್ಲದೇ, ವಿಜಯಪುರ ನಗರದ ಬಳಿ ಇರುವ ಇಟ್ಟಂಗಿಹಾಳ ಹತ್ತಿರ ಪುಡ್​ಪಾರ್ಕ್​​ ನಿರ್ಮಿಸಲು 72ಎಕರೆ ಜಮೀನನ್ನು ಈಗಾಗಲೇ ಮೀಸಲಿರಿಸಲಾಗಿದೆ. ಇದೇ ಜಾಗದಲ್ಲಿ ಫುಡ್​ಪಾರ್ಕ್​​​ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.  ಅಲ್ಲದೇ, ಸಣ್ಣ, ಅತೀಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ಎಂದು ತಂಡದದಲ್ಲಿದ್ದ ಮುಖಂಡರು ಕೃಷಿ ಸಚಿವರಿಗೆ ಮನವರಿಕೆ ಮಾಡಿದರು.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಯವರ ಕೇಶದ ಬಗ್ಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಏನು ಹೇಳಿದ್ರು ಗೊತ್ತಾ!?

ವಿಜಯಪುರ ಜಿಲ್ಲೆಯ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ತೋಟಗಾರಿಕೆ ಪ್ರದೇಶ ಅಭಿವೃದ್ಧಿಯಾಗಲಿದೆ. ಆ ನಿಟ್ಟಿನಲ್ಲಿ ವಿಜಯಪುರ ಫುಡ್​ಪಾರ್ಕ್​​ ಮಾನ್ಯ ಕೃಷಿ ಸಚಿವರು ಹೆಚ್ಚು ಒತ್ತು ನೀಡಬೇಕು ಎಂದು ಈ ತಂಡದ ಸದಸ್ಯರು ಸಂಪೂರ್ಣ ಮಾಹಿತಿಯನ್ನು ಕೃಷಿ ಸಚಿವರಿಗೆ ನೀಡಿತು. ರೈತರು, ಉದ್ಯಮಿಗಳ ಮನವಿಗೆ ಸ್ಪಂದಿಸಿದ ಕೃಷಿ ಸಚಿವ ಬಿ. ಸಿ. ಪಾಟೀಲ್, ತಾವು ಶೀಘ್ರದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ, ಪುಡ್​ಪಾರ್ಕ್​​ ಸ್ಥಾಪನೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ದ್ರಾಕ್ಷಿ ಬೆಳೆಗಾರ ಸೋಮನಾಥ ಬಾಗಲಕೋಟ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಕೆ. ಎಸ್. ಮುಂಬಾರೆಡ್ಡಿ, ವಿಜಯಪುರದ ಪ್ರತಿಷ್ಛಿತ ಬಿ ಎಲ್ ಡಿ ಇ ನಿರ್ದೇಶಕ ಬಸನಗೌಡ ಎಂ. ಪಾಟೀಲ, ಪ್ರಗತಿಪರ ರೈತರಾದ ದುಂಡಪ್ಪ ಬಡ್ರಿ, ಅಜೇಯ ಪಾಟೀಲ ಹಣಮಾಪುರ ಮುಂತಾದವರು ಉಪಸ್ಥಿತರಿದ್ದರು.
Published by:G Hareeshkumar
First published: