HOME » NEWS » District » TEACHER WHO CONFERRED WITH DIST RAJYOTSAVA AWARD CREATED DUPLICATED CERTIFICATE IN TROUBLE NOW IN VIJAYAPURA MVSV HK

ಪಾಠ ಮಾಡಬೇಕಾದ ಶಿಕ್ಷಕನಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪತ್ರದ ನಕಲು : ತಪ್ಪು ಮಾಡಿ ಟೀಕೆಗೆ ಗುರಿಯಾದ ಶಿಕ್ಷಕ

ಈ ಬಾರಿ ಜಿಲ್ಲಾಡಳಿತ ನೀಡಿರುವ ಪ್ರಮಾಣ ಪತ್ರದಲ್ಲಿ ಜಿಲ್ಲಾಧಿಕಾರಿಯೊಬ್ಬರ ಸಹಿ ಮಾತ್ರವಿದ್ದು, ಈತ ತಯಾರಿಸಿದ ನಕಲಿ ಪ್ರಮಾಣ ಪತ್ರದಲ್ಲಿ ಮೂವರು ಅಧಿಕಾರಿಗಳ ಹೆಸರನ್ನು ಬಳಸಲಾಗಿದೆ

news18-kannada
Updated:November 4, 2020, 9:03 PM IST
ಪಾಠ ಮಾಡಬೇಕಾದ ಶಿಕ್ಷಕನಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪತ್ರದ ನಕಲು : ತಪ್ಪು ಮಾಡಿ ಟೀಕೆಗೆ ಗುರಿಯಾದ ಶಿಕ್ಷಕ
ಶಿಕ್ಷಕ ಸಿದ್ದಲಿಂಗ ಚೌಧರಿ
  • Share this:
ವಿಜಯಪುರ(ನವೆಂಬರ್​. 04): ಇದು ಮಕ್ಕಳು ತಪ್ಪಿದಾಗ ಪಾಠ ಮಾಡಬೇಕಾದ ಮತ್ತು ಸಮಾಜವನ್ನು ಸಾಹಿತ್ಯದ ಮೂಲಕ ತಿದ್ದಬೇಕಾದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರು ಮಾಡಿದ ಯಡವಟ್ಟು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿಕ್ಷಕನೊಬ್ಬ ಪ್ರಶಸ್ತಿ ಪ್ರದಾನಕ್ಕೂ ಮುಂಚೆಯೇ ಪ್ರಶಸ್ತಿ ಪತ್ರವನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯಡವಟ್ಟು ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಸರಕಾರಿ ಶಾಲೆಯ ಶಿಕ್ಷಕ ಮತ್ತು ಸಿಂದಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರೂ ಆಗಿರುವ ಸಿದ್ದಲಿಂಗ ಚೌಧರಿ ತಾವು ಸಾಹಿತ್ಯ ಕ್ಷೇತ್ರದಲ್ಲಿ ಆಯ್ಕೆಯಾದ ಸುದ್ದಿ ತಿಳಿದ ತಕ್ಷಣವೇ ಉಪಾಯವೊಂದನ್ನು ಮಾಡಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವ ಮೊದಲೇ ತಾವೇ ಒಂದು ನಕಲಿ ಪ್ರಶಸ್ತಿ ಪತ್ರವನ್ನು ಸಿದ್ದಪಡಿಸಿ ಅದರಲ್ಲಿ ಸಂಕೀರ್ಣ ಕ್ಷೇತ್ರಕ್ಕೆ ಆಯ್ಕೆ ಎಂದು ಬರೆದುಕೊಂಡು ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. 

ಕರ್ನಾಟಕ ಸರಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಎಂಬ ನಕಲಿ ಸರ್ಟಿಫಿಕೇಟ್ ಮಾಡಿ ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಅದನ್ನು ಹಂಚಿಕೊಂಡಿದ್ದಾರೆ. ಈಗ ಇದು ಚರ್ಚೆಗೆ ಗ್ರಾವಾಗಿದೆ. ತಮ್ಮ ತಪ್ಪಿನ ಅರಿವಾದ ನಂತರ ಈ ಕುರಿತು ಮತ್ತೆ ವಿಡಿಯೋ ಮಾಡಿರುವ ಸಿದ್ಧಲಿಂಗ ಚೌಧರಿ, ತಾವು ಆಯ್ಕೆಯಾದ ಸಂತೋಷವನ್ನು ಹಂಚಿಕೊಳ್ಳುವ ಉತ್ಸಾಹದಲ್ಲಿ ಹೀಗೆ ಅಚಾತುರ್ಯ ಆಗಿದೆ. ಇದರಿಂದ ಸರಕಾರ, ವಿಜಯಪುರ ಜಿಲ್ಲಾಡಳಿತ ಹಾಗೂ ನಾಡಿನ ಜನತೆಯಲ್ಲಿ ಕ್ಷಮೆ ಯಾಚಿಸುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಕಲಿ ಸರ್ಟಿಫಿಕೇಟ್


ಇನ್ನು ಈ ಬಾರಿ ಜಿಲ್ಲಾಡಳಿತ ನೀಡಿರುವ ಪ್ರಮಾಣ ಪತ್ರದಲ್ಲಿ ಜಿಲ್ಲಾಧಿಕಾರಿಯೊಬ್ಬರ ಸಹಿ ಮಾತ್ರವಿದ್ದು, ಈತ ತಯಾರಿಸಿದ ನಕಲಿ ಪ್ರಮಾಣ ಪತ್ರದಲ್ಲಿ ಮೂವರು ಅಧಿಕಾರಿಗಳ ಹೆಸರನ್ನು ಬಳಸಲಾಗಿದೆ. ಜೊತೆಗೆ ಕರ್ನಾಟಕ ಸರಕಾರದ ಲೊಗೋ ಬಳಸಲಾಗಿದೆ.

ಇದನ್ನೂ ಓದಿ :  ಡ್ರಗ್ಸ್ ಮಾದರಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಝೀರೋ ಟಾಲರೆನ್ಸ್ : ಪ್ರವೀಣ್ ಸೂದ್ ಎಚ್ಚರಿಕೆ

ಫಾರ್ಮೆಟ್ ಬದಲಾಯಿಸಿ ಹೀಗೆ ರಾಜ್ಯ ಸರ್ಕಾರದ ಲೊಗೋ ಹಾಗೂ ಅಧಿಕಾರಿಗಳ ಹೆಸರನ್ನು ಬದಲಾಯಿಸಿ ಪ್ರಶಸ್ತಿಪತ್ರ ಸಿದ್ದಪಡಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಈ ಕೂಡಲೆ ತಪ್ಪೆಸಗಿದ ಪ್ರಶಸ್ತಿ ಪುರಸ್ಕ್ರತನ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಈ ಕುರಿತು ಈಗಾಗಲೇ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದ್ದಾರೆ.
ಈ ಮಧ್ಯೆ, ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಈ ಶಿಕ್ಷಕನ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published by: G Hareeshkumar
First published: November 4, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories