HOME » NEWS » District » TAUKTAE CYCLONE WAS DESTROYED BEACH SIDE PEOPLE STORES RHHSN DKK

Tauktae Cyclone: ತೌಕ್ತೆ ತಾಕತ್ತು ಸಮುದ್ರ ತೀರದ ಜನರು ಕಂಗಾಲು; ಬದುಕು‌ ಕಸಿದ ಚಂಡಮಾರುತ!

ಅಂಗಡಿಗಳೆಲ್ಲ ನೀರು ಪಾಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಂಗಾಲಾದ ವ್ಯಾಪಾರಿಗಳು ಸಮುದ್ರ ತೀರಗಳತ್ತ ಧಾವಿಸಿದ್ದು, ಸಮುದ್ರ ಪಾಲಾದ ಅಂಗಡಿಗಳನ್ನು ಎತ್ತಿ ಮತ್ತೆ ದಡದಲ್ಲಿಡುವ ಕಾರ್ಯ ಮಾಡುತ್ತಿದ್ದಾರೆ‌. ಇನ್ನು ಕೆಲವರು ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ತಮ್ಮ ಮನೆಗಳತ್ತ ಸಾಗಿಸುತ್ತಿದ್ದಾರೆ.

news18-kannada
Updated:May 17, 2021, 4:34 PM IST
Tauktae Cyclone: ತೌಕ್ತೆ ತಾಕತ್ತು ಸಮುದ್ರ ತೀರದ ಜನರು ಕಂಗಾಲು; ಬದುಕು‌ ಕಸಿದ ಚಂಡಮಾರುತ!
ಸಮುದ್ರ ಪಾಲಾಗಿರುವ ಗೂಡಂಗಡಿ
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಶಾಂತವಾಗಿದೆ. ಆದರೆ ತೌಕ್ತೆ ತನ್ನ ತಾಕತ್ತು ಏನು ಎಂದು ತೋರಿಸಿ ಹೋಗಿದ್ದು ಸಮುದ್ರ ತೀರದಲ್ಲಿ ಬದುಕು ಕಟ್ಟಿಕೊಂಡವರಿಗೆ ಭಾರೀ ಹಾನಿ ಮಾಡಿದೆ. ತೌಕ್ತೆ ಅಬ್ಬರಕ್ಕೆ ನಲುಗಿದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರುಡೇಶ್ವರದ ಐವತ್ತಕ್ಕೂ ಹೆಚ್ಚು ಗೂಡಂಗಡಿಗಳು ಸಮುದ್ರ ಪಾಲಾಗಿದ್ದು ಗೂಡಂಗಡಿ ನಂಬಿ ಉದ್ಯೋಗ ಮಾಡಿಕೊಂಡವರ ಪಾಡು ಬೀದಿಗೆ ಬಂದಿದೆ. ಮುರುಡೇಶ್ವರ ಕಡಲತೀರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಗೂಡಂಗಡಿಗಳು ಸಮುದ್ರ ಪಾಲಾಗಿವೆ. ಲಾಕ್ ಡೌನ್ ಕಾರಣ ಇಲ್ಲಿನ ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚಿದ್ದರು. ತೌಕ್ತೆ ಚಂಡಮಾರುತ ಏಕಾಏಕಿ ತನ್ನ ರೌದ್ರತೆ ಪ್ರದರ್ಶಿಸಿದ ಸಮುದ್ರದ ಅಲೆಗಳು ನಿರೀಕ್ಷೆಗೂ ಮೀರಿ ದಡಕ್ಕೆ ಅಪ್ಪಳಿಸಿ ದಡದಲ್ಲಿ ಇದ್ದ ಗೂಡಂಗಡಿಗಳನ್ನು ಆಪೋಷನ ಪಡೆದುಕೊಂಡಿದೆ. ಈಗ ಗೂಡಂಗಡಿ ಕಳದುಕೊಂಡವರು ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ. ತೌಕ್ತೆ ಚಂಡಮಾರುತ ಈಗ ಶಾಂತವಾಗಿದೆ. ಆದರೆ ಅದರ ರೌದ್ರತೆಗೆ ಜನರ ಬದುಕು ಮೂರಾಬಟ್ಟೆ ಆಗಿದೆ.

ವಿಶ್ವಪ್ರಸಿದ್ಧ ಮುರುಡೇಶ್ವರ ಅತಿದೊಡ್ಡ ಶಿವನ ಮೂರ್ತಿಗೆ ಪ್ರಖ್ಯಾತಿ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಕೊರೋನಾ ಆರಂಭವಾದಾಗಿನಿಂದ ಲಾಕ್ ಡೌನ್, ಕರ್ಫ್ಯೂ ವಿಧಿಸುತ್ತಿದ್ದರಿಂದ ಪ್ರವಾಸಿಗರ ಸಂಖ್ಯೆ ಇಲ್ಲಿ ಇಳಿಮುಖವಾಗಿತ್ತು. ಆದರೆ ಪ್ರವಾಸಿಗರನ್ನೇ ನಂಬಿಕೊಂಡು ಕಡಲತೀರದಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ಫಾಸ್ಟ್ ಫುಡ್, ಫ್ಯಾನ್ಸಿ ಐಟಮ್, ಬಟ್ಟೆಗಳನ್ನು ಮಾರಾಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಿಗಳು ಕೂಡ ಪ್ರವಾಸಿಗರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದರು.

ಕೆಲವು ಸಮಯ ಲಾಕ್ ಡೌನ್ ಸಡಿಲಗೊಳಿಸಿದ್ದ ಕಾರಣ ಒಂದಷ್ಟು ದಿನ ವ್ಯಾಪಾರ ನಡೆಸಿದ್ದವರಿಗೆ ಇತ್ತೀಚೆಗೆ ಮತ್ತೆ ಸರ್ಕಾರ ಲಾಕ್ ಡೌನ್ ಘೋಷಿಸಿ ಮನೆಯಲ್ಲಿ ಕೂರುವಂತೆ ಮಾಡಿತು. ಜೀವಕ್ಕಿಂತ ವ್ಯಾಪಾರ ದೊಡ್ಡದಲ್ಲ, ಜೀವವಿದ್ದರೆ ಇನ್ನು ಯಾವತ್ತಾದ್ರು ದುಡಿಯಬಹುದೆಂದು ತಮ್ಮಷ್ಟಕ್ಕೆ ವ್ಯಾಪಾರಿಗಳು ಮನೆಯಲ್ಲಿದ್ದರು. ಲಾಕ್ ಡೌನ್ ನಲ್ಲಿ ಹೊರಗಡೆ ಓಡಾಡುವಂತಿಲ್ಲದ ಕಾರಣ ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ ಅಂಗಡಿಗಳೊಳಗೆ ಇಟ್ಟು, ಬೀಗ ಹಾಕಿ ಮನೆಯಲ್ಲಿದ್ದವರಿಗೆ ನಿನ್ನೆ ಬಂದ ತೌಕ್ತೆ ಚಂಡಮಾರುತ ಶಾಕ್ ನೀಡಿದೆ.

ಇದನ್ನು ಓದಿ: Narada Sting Case; ನಾರದ ಪ್ರಕರಣ ಸಂಬಂಧ ಬಂಗಾಳದ 2 ಸಚಿವರು, ಶಾಸಕರ ಬಂಧನ, ಸಿಬಿಐ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ

ಮುರ್ಡೇಶ್ವರದ ಸಮುದ್ರದ ದಡದಲ್ಲಿ ನಿಲ್ಲಿಸಿಟ್ಟಿದ್ದ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ಸಮುದ್ರ ಸೇರಿದ್ದು, ಅದರಲ್ಲಿದ್ದ ಲಕ್ಷಗಟ್ಟಲೆ ಸಾಮಗ್ರಿಗಳು ಸಮುದ್ರದ ಪಾಲಾಗಿವೆ. ರಂಜಾನ್ ಹಬ್ಬವಿದೆ, ಜನ ಹೆಚ್ಚು ಬರ್ತಾರೆ ಎಂದು ತಿಂಗಳ ಹಿಂದೆ ಸಾಮಗ್ರಿಗಳನ್ನೆಲ್ಲ ಖರೀದಿಸಿಟ್ಟಿದ್ದ ವ್ಯಾಪಾರಿಗಳು, ಲಾಕ್ ಡೌನ್ ನಲ್ಲಿ ಹೊರಗಡೆ ಹೋದರೆ ಪೊಲೀಸರು ವಾಹನಗಳನ್ನು ಸೀಜ್ ಮಾಡಬಹುದು ಎಂದು ಎಲ್ಲೂ ಹೋಗದೆ ಮನೆಯಲ್ಲಿದ್ದರೆ, ರಾತ್ರೋರಾತ್ರಿ ಅಂಗಡಿಗಳೆಲ್ಲ ನೀರು ಪಾಲಾಗಿವೆ.
Youtube Video

ಇದೀಗ ಅಂಗಡಿಗಳೆಲ್ಲ ನೀರು ಪಾಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಂಗಾಲಾದ ವ್ಯಾಪಾರಿಗಳು ಸಮುದ್ರ ತೀರಗಳತ್ತ ಧಾವಿಸಿದ್ದು, ಸಮುದ್ರ ಪಾಲಾದ ಅಂಗಡಿಗಳನ್ನು ಎತ್ತಿ ಮತ್ತೆ ದಡದಲ್ಲಿಡುವ ಕಾರ್ಯ ಮಾಡುತ್ತಿದ್ದಾರೆ‌. ಇನ್ನು ಕೆಲವರು ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ತಮ್ಮ ಮನೆಗಳತ್ತ ಸಾಗಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೊರೋನಾ ಲಾಕ್ ಡೌನ್ ಒಂದು ರೀತಿಯ ಸಂಕಷ್ಟ ತಂದೊಡ್ಡಿದ್ದರೆ, ಇದೀಗ ಚಂಡಮಾರುತ ಮತ್ತಷ್ಟು ನಷ್ಟ ತಂದೊಡ್ಡಿದೆ.
Published by: HR Ramesh
First published: May 17, 2021, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories