• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮೇಯರ್ ಸ್ಥಾನ‌ ಬಿಟ್ಟುಕೊಟ್ಟಿದ್ದು ತನ್ವೀರ್ ಸೇಠ್ ಏಕಪಕ್ಷೀಯ ನಿರ್ಧಾರ; ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ

ಮೇಯರ್ ಸ್ಥಾನ‌ ಬಿಟ್ಟುಕೊಟ್ಟಿದ್ದು ತನ್ವೀರ್ ಸೇಠ್ ಏಕಪಕ್ಷೀಯ ನಿರ್ಧಾರ; ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ

ಮೈಸೂರು ಕಾಂಗ್ರೆಸ್​ ಪಾಲಿಕೆ ಸದಸ್ಯರ ಪತ್ರಿಕಾಗೋಷ್ಠಿ.

ಮೈಸೂರು ಕಾಂಗ್ರೆಸ್​ ಪಾಲಿಕೆ ಸದಸ್ಯರ ಪತ್ರಿಕಾಗೋಷ್ಠಿ.

ಸಿದ್ದರಾಮಯ್ಯ ತನ್ವೀರ್ ಸೇಠ್ ನಂಬಿ ಚುನಾವಣೆ ಜವಾಬ್ದಾರಿ ನೀಡಿದ್ರೂ, ಆದರೆ ಆಗಿದ್ದೆ ಬೇರೆ. ಇವತ್ತು ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದು ಕುಮಾರಸ್ವಾಮಿ ಮತ್ತು ತನ್ವೀರ್ ಸೇಠ್ ಷಡ್ಯಂತ್ರ ಎಂದು ಮೈಸೂರು ಕಾಂಗ್ರೆಸ್​ ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ.

  • Share this:

ಮೈಸೂರು: ಮುಗಿಯದ ಮೈಸೂರು ಪಾಲಿಕೆ ದೋಸ್ತಿ ವಾರ್‌ ಸಂಜೆಯೂ ಮುಂದುವರೆದಿದ್ದು, ಶಾಸಕ ತನ್ವೀರ್ ಸೇಠ್ ವಿರುದ್ಧ ಕಾಂಗ್ರೆಸ್ ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಮಾಜಿ‌ ಮೇಯರ್ ಅಯೂಬ್ ಖಾನ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ 18 ಪಾಲಿಕೆ ಸದಸ್ಯರು ಹಾಗೂ ನೂತನ ಉಪಮೇಯರ್ ಅನ್ವರ್ ಬೇಗ್, ನಗರಾಧ್ಯಕ್ಷ ಮೂರ್ತಿ, ಮಾಜಿ ಶಾಸಕ ಎಂ.ಕೆ ಸೋಮಶೇಖರ್, ಲಕ್ಷ್ಮಣ್, ಮರೀಗೌಡ ತನ್ವೀರ್ ನಡೆಯನ್ನು ಆಕ್ಷೇಪಿಸಿದರು. ಕೆಲ ಪಾಲಿಕೆ ಸದಸ್ಯರಂತು ಸಿದ್ದರಾಮಯ್ಯ ವಿರುದ್ದ ಷಡ್ಯಂತ್ರ ಮಾಡಿದ ಶಾಸಕ ತನ್ವೀರ್ ಸೇಠ್‌ರನ್ನ ಪಕ್ಷದಿಂದಲೇ ಉಚ್ಛಾಟಿಸುವಂತೆ ಆಗ್ರಹಿಸಿದರು.


ಪಾಲಿಕೆಯಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹಿಂದಿನ ಮೈತ್ರಿಯಂತೆ ನಡೆಯಲಿ ಎಂದು ಹೇಳಿದ್ರು. ಸಿದ್ದರಾಮಯ್ಯ ಡಿಕೆ.ಶಿವಕುಮಾರ್ ಆದೇಶದಂತೆ ಚುನಾವಣೆಗೆ ಹೋಗಿದ್ದೇವು. ಆದ್ರೆ ಇಲ್ಲಿ ಆದ ತೀರ್ಮಾನವೇ ಒಂದು, ಒಳಗೆ ನಡೆದಿದ್ದೇ ಮತ್ತೊಂದು ಎಂದು ಮಾಜಿ ಮೇಯರ್ ಅಯೂಬ್ ಖಾನ್ ಬೇಸರ ವ್ಯಕ್ತಪಡಿಸಿದರು. ಪಾಲಿಕೆಯ ಎಲ್ಲರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೆ ಒಳಗೆ ನಡೆದಿದ್ದೇ ಬೇರೆಯಾಗಿದೆ. ಜೆಡಿಎಸ್‌ಗೆ ಮೇಯರ್ ಸ್ಥಾನ ಕೊಡೋಕೆ ನಮಗೆ ಒಪ್ಪಿಗೆ ಇರಲಿಲ್ಲ. ಬಿಜೆಪಿ ದೂರ ಇಡೋದು ನಮ್ಮೆಲ್ಲರ ಅಭಿಪ್ರಾಯ ಆಗಿತ್ತು. ಅದಕ್ಕಾಗಿ ಪಕ್ಷವನ್ನು ಅಡ ಇಡುವ ಪ್ರಮೇಯ ಇರಲಿಲ್ಲ.


ನೆನ್ನೆ ಸಿದ್ದರಾಮಯ್ಯ ಡಿಕೆ.ಶಿವಕುಮಾರ್ ಗೆ ಎಲ್ಲಾ ವರದಿ ಮಾಡಿದ್ದೇವೆ. ಆದರೂ ಇಂದು ಸಿದ್ದರಾಮಯ್ಯ ವಿರುದ್ಧ ಯಾಕೆ ಪ್ರತಿಭಟನೆ ಮಾಡಿದ್ದಾರೆ ಗೊತ್ತಿಲ್ಲ. ಕೆಪಿಸಿಸಿ ನಾಯಕರು ಕೂಡ ಮೇಯರ್ ನಮಗೆ, ಉಪ ಮೇಯರ್ ಅವರಿಗೆ ಅಂತ ಸ್ಪಷ್ಟವಾಗಿ ಹೇಳಿದ್ರು. ಆ ಸಂದೇಶವನ್ನು ನಾನೇ ಹೋಗಿ ಒಳಗೆ ಹೇಳಿದೆ. ತನ್ವೀರ್‌ಸೇಠ್ ಇಷ್ಟು ಬಾರಿ ಗೆದ್ದು ಮೆಚ್ಯುರಿಟಿ ಇದ್ದು ಯಾಕೆ ಹೀಗೆ ಮಾಡಿದ್ರೂ ಗೊತ್ತಿಲ್ಲ? ಇವರು ಮಾಡಿದ್ದು ಕಾಂಗ್ರೆಸ್ ಪಕ್ಷದ ಉದ್ದಾರೋಕೋ, ಇಲ್ಲ, ಕುಮಾರಸ್ವಾಮಿ ಮೆಚ್ಚಿಸಲೋ ಅಂತ ಶಾಸಕ ತನ್ವೀರ್ ವಿರುದ್ದ ಮಾಜಿ‌ ಮೇಯರ್ ಅಯೂಬ್ ಖಾನ್ ಬೇಸರ ವ್ಯಕ್ತಪಡಿಸಿದರು.


ನಮ್ಮ ಪಕ್ಷದ ನಾಯಕರ ನಿಲುವಿನ ವಿರುದ್ಧ ನಿರ್ಧಾರ ಕೈಗೊಂಡಿದ್ದರು, ಅದು ತನ್ವೀರ್ ಸೇಠ್ ಅವರ ಏಕಪಕ್ಷೀಯ ತೀರ್ಮಾನ ಆಗಿತ್ತು,  ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಅವರಿಗೆ ಕರೆ ಮಾಡಿದ್ದಾರೆ, ಬರೋಬ್ಬರಿ 12 ಬಾರಿ ಕಾಲ್ ಮಾಡಿದ್ದಾರೆ ಆದರೆ ರಿಸೀವ್ ಮಾಡಲಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬುದು ನಮ್ಮ ನಾಯಕರ ತೀರ್ಮಾನವಲ್ಲ. ಆದರೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿಗೆ ಒಬ್ಬರೂ ಮತ ಹಾಕದಂತೆ ಮಾಡಿದರು ಅವರ ವಿರುದ್ಧ ಕಾಂಗ್ರೆಸ್ ನಾಯಕರು ಕ್ರಮ ಕೈಗೊಳ್ಳಬೇಕು ಅಂತ ಮಾಜಿ ಅಯೂಬ್ ಖಾನ್ ಆಗ್ರಹಿಸಿದರು.


ಒಂದು ಹೆಜ್ಜೆ ಮುಂದೆ ಹೋದ ಕೈ ಪಾಲಿಕೆ ಸದಸ್ಯ ಆರಿಫ್‌ಉಸೇನ್, ತನ್ವೀರ್ ಸೇಠ್ ರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ,ತನ್ವೀರ್ ಸೇಠ್ ಮೇಲೆ ತನಿಖೆಯಾಗಬೇಕು ಅಂತ  ಆಕ್ರೋಶ ವ್ಯಕ್ತಡಿಸಿದರು. ನಮ್ಮ ಜೊತೆ ಇದ್ದ ಎರಡು ಪಾಲಿಕೆ ಸದಸ್ಯರನ್ನ ಜೆಡಿಎಸ್ ಗೆ ಮಾರಟ ಮಾಡಿದ್ರೂ, ಇನ್ನೂ ಇಬ್ಬರನ್ನ ಮಾರಟ ಮಾಡಲು ಟ್ರೈ ಮಾಡಿದ್ರೂ. ನಾವು ತನ್ವೀರ್ ಸೇಠ್ ರನ್ನ ನಂಬಿ ಕುಮಾರಸ್ವಾಮಿ ಜೊತೆ ಮಾತುಕತೆಗೆ ಕಳುಹಿಸಿದ್ವಿ, ಕುಮಾರಸ್ವಾಮಿ ಒಂದು ಕಡೆ ಬಿಜೆಪಿಯವರನ್ನ ಮತ್ತೊಂದರಲ್ಲಿ ತನ್ವೀರ್ ಸೇಠ್ ಕೂರಿಸಿ‌ ಡೀಲ್ ಗೆ ಮುಂದಾದ್ರೂ, ಆ ಕಡೆ ಡೀಲ್ ಆಗಲಿಲ್ಲ ಈ ಕಡೆ ಡೀಲ್ ಆಯ್ತೂ ಅಂತ ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಆರೀಫ್ ಹುಸೇನ್ ಹೇಳಿದರು.


ಸಿದ್ದರಾಮಯ್ಯ ತನ್ವೀರ್ ಸೇಠ್ ನಂಬಿ ಚುನಾವಣೆ ಜವಾಬ್ದಾರಿ ನೀಡಿದ್ರೂ, ಆದರೆ ಆಗಿದ್ದೆ ಬೇರೆ. ಇವತ್ತು ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದು ಕುಮಾರಸ್ವಾಮಿ ಮತ್ತು ತನ್ವೀರ್ ಸೇಠ್ ಷಡ್ಯಂತ್ರ. ನಾಲ್ಕು ಜನ ಕಟ್ಟಿಕೊಂಡು ರಾಜಕೀಯ ಮಾಡೋಕೆ ಆಗಲ್ಲ ಆದರೆ ಇಡೀ ನಗರ ಕಾಂಗ್ರೆಸ್ ಸಿದ್ದರಾಮಯ್ಯ ಜೊತೆ ಇದೆ ಸಿದ್ದರಾಮಯ್ಯ ಮುಗಿಸಲು ಕುಮಾರಸ್ವಾಮಿ ಜೊತೆ ಸೇರಿ ಮಾಡುತ್ತಿರೊ ಕೆಲಸ ಇದು. ಸಿದ್ದರಾಮಯ್ಯ ರಿಂದ ಇಡೀ ಮುಸಲ್ಮಾನ ಜನಾಂಗ ರಾಜಕೀಯದಲ್ಲಿ ಆಕ್ಟೀವ್ ಆಗಿದೆ ಯಾರೋ ಒಬ್ಬ ಮುಸಲ್ಮಾನ ಅಗಿ ಅವರ ವಿರುದ್ದ ಕೂಗಿದ್ರೆ ಮುಸಲ್ಮಾನ ರು ಸಿದ್ದರಾಮಯ್ಯರನ್ನ ವಿರೋಧಿಸೊಲ್ಲ.


ಇಡೀ ದೇಶದ ಮುಸಲ್ಮಾನರ ನಾಯಕ ಸಿದ್ದರಾಮಯ್ಯ ಪುಡೀ ಕಾಸಿಗೆ ಅವರ ವಿರುದ್ದ ಘೋಷಣೆ ಕೂಗಿತಿದ್ದಾರೆ. ತನ್ವೀರ್ ಸೇಠ್ ಎತ್ತಿ ಕಟ್ಟಿ ಸಿದ್ದರಾಮಯ್ಯ ವಿರುದ್ದ ಕೆಲಸ ಮಾಡಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ ಈ ಕೆಲಸ ಮಾಡೋಕಾಗಿ ಮಾಜಿ ಮುಖ್ಯಮಂತ್ರಿ ಇಲ್ಲಿ ಬಂದು ಚುನಾವಣೆಯಲ್ಲಿ ಭಾಗಿಯಾಗಿಯಾಗಬೇಕಿತ್ತಾ? ಅಂತ ಕುಮಾರಸ್ವಾಮಿ ವಿರುದ್ದವು  ಪಾಲಿಕೆ ಸದಸ್ಯ ಆರೀಫ್ ಹುಸೇನ್ ಆಕ್ರೋಶ ಹೊರಹಾಕಿದರು.


ಇದನ್ನೂ ಓದಿ: ಮೈಸೂರು ಪಾಲಿಕೆ ನೂತನ ಮೇಯರ್‌ಗೆ ಸಂಕಷ್ಟ: ಸದಸ್ಯತ್ವ ಕಳೆದುಕೊಳ್ತಾರಾ ರುಕ್ಮಿಣಿ ಮಾದೇಗೌಡ?


ಕೊನೆಗೆ ನಾನು ಆ ಕ್ಷಣದ ನಿರ್ಧಾರದ ಬಲಿಪಶು ಆದೇ ನಾನು ಅಂತ ಬೇಸರ ಹೊರಹಾಕಿದ ಕಾಂಗ್ರೆಸ್ ಮೇಯರ್ ಸ್ಥಾನದ ಅಭ್ಯರ್ಥಿ ಶಾಂತಕುಮಾರಿ ಶಾಸಕರು ಕೈ ಎತ್ತಿದ ನಂತರ ಎಲ್ಲಾರು ಕೈ ಎತ್ತಬೇಕು ಅಂತ ಇತ್ತು,  ಆದರೆ ನಾನೋಬ್ಬಳೇ ಕೈ ಎತ್ತಿದ್ರೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಗೆ ಒಂದು ಮತ ಬಿತ್ತು ಅನ್ನೋ ಅವಮಾನ ಆಗುತ್ತೆ ಅಂತ ಕೈ ಎತ್ತಲಿಲ್ಲ. ಪಕ್ಷದ ನಿರ್ಧಾರ ಅಥವಾ ರಾಜ್ಯ ನಾಯಕರ ನಿರ್ಧಾರದಿಂದ ಬಲಿಪಶು ಆಗಲಿಲ್ಲ.


ಸಿದ್ದರಾಮಯ್ಯರ ಮಾತಿನಂತೆ ನಾವೆಲ್ಲ ನಿರ್ಧಾರ ಮಾಡಿದ್ವಿ ಆದರೆ ಆ ಕ್ಷಣದ  ನಿಲುವಿನಿಂದ ಕೈ ಎತ್ತುವ ಪ್ರಯತ್ನ ಮಾಡಲಿಲ್ಲ. ಆ ಕ್ಷಣದಲ್ಲಿ ನಾನು ಬಲಿಪಶು ಆದೇ ಅಂ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವ ಅಭ್ಯರ್ಥಿ ಶಾಂತಕುಮಾರಿ ತಿಳಿಸಿದರು. ಒಟ್ಟಾರೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ ಮೈಸೂರು ಕಾಂಗ್ರೆಸ್ ಎರಡು ಹೋಳಾಗಿದೆ, ಈ ಪ್ರಕರಣ ಇನ್ನೆಲ್ಲಿ ಹೋಗಿ ನಿಲ್ಲುತ್ತೆ, ಯಾರ್ಯಾರು ಯಾವ ಬಣದಲ್ಲಿ ಗುರುತಿಸಿಕೊಳ್ತಾರೆ  ಅಂತ ಕಾದು ನೋಡಬೇಕಿದೆ.

Published by:MAshok Kumar
First published: