ಅಕ್ರಮ ಮರಳು ದಂಧೆ ವಿರುದ್ಧ ದಾಳಿಗೆ ಹೋದ ಅಧಿಕಾರಿಗಳ ಹತ್ಯೆಗೆ ಯತ್ನ ; ಬೆಚ್ಚಿಬಿದ್ದ ಅಧಿಕಾರಿ ವಲಯ

ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ್ದ ಅಧಿಕಾರಿಗಳು ಅಕ್ರಮ ಮರಳ ಸಾಗಾಟ ಲಾರಿಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಅಕ್ರಮ ಮರಳು ದಂದೇಕೋರರು ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಜೀಪಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆಸಿ ಹತ್ಯೆ ನಡೆಸಲು ವಿಫಲ ಯತ್ನ ನಡೆಸಿದ್ದಾರೆ

news18-kannada
Updated:August 26, 2020, 4:26 PM IST
ಅಕ್ರಮ ಮರಳು ದಂಧೆ ವಿರುದ್ಧ ದಾಳಿಗೆ ಹೋದ ಅಧಿಕಾರಿಗಳ ಹತ್ಯೆಗೆ ಯತ್ನ ; ಬೆಚ್ಚಿಬಿದ್ದ ಅಧಿಕಾರಿ ವಲಯ
ಜಕ್ಕಂ ಆಗಿರುವ ಜೀಪು
  • Share this:
ಆನೇಕಲ್(ಆಗಸ್ಟ್​.26): ಇತ್ತೀಚೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಸಹ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಹತ್ಯೆಗೆ ಪ್ರಯತ್ನ ನಡೆದಿದ್ದು, ಅಧಿಕಾರಿ ವಲಯ ಬೆಚ್ಚಿ ಬಿದ್ದಿದೆ. ಕಳೆದ ರಾತ್ರಿ ಅಂತರ ರಾಜ್ಯ ಗಡಿ ಬಾಗಲೂರು ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ಮೇಲೆ ದಾಳಿಗೆ ಮುಂದಾಗಿದ್ದ ಹೊಸೂರು ತಹಶೀಲ್ದಾರ್ ಸೆಂದಿಲ್ ಕುಮಾರ್ ಮತ್ತು ಉಪವಿಭಾಗಾಧಿಕಾರಿ ಗುಣಶೇಖರ್ ಹತ್ಯೆಗೆ ಪ್ರಯತ್ನ ನಡೆದಿದೆ.

ಕರ್ನಾಟಕ ಮತ್ತು ತಮಿಳುನಾಡು ಗಡಿ ಬಾಗಲೂರು ಬೇರಿಕೆ ಸುತ್ತಮುತ್ತ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕವಾಗಿ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಹಲವು ಬಾರಿ ದಂಧೆಕೋರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಕ್ಯಾರೆ ಎಂದಿರಲಿಲ್ಲ.

ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ್ದ ಅಧಿಕಾರಿಗಳು ಅಕ್ರಮ ಮರಳ ಸಾಗಾಟ ಲಾರಿಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಅಕ್ರಮ ಮರಳು ದಂದೇಕೋರರು ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಜೀಪಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆಸಿ ಹತ್ಯೆ ನಡೆಸಲು ವಿಫಲ ಯತ್ನ ನಡೆಸಿದ್ದಾರೆ. ಅಪಾಯದ ಸುಳಿವರಿತ ಅಧಿಕಾರಿಗಳು ಕಾರಿನಿಂದ ಕೆಳಗಿಳಿದು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಆದರೆ, ಅಧಿಕಾರಿಗಳ ಕಾರಿಗೆ ಡಿಕ್ಕಿ ಹೊಡೆಸಿದ ಲಾರಿ ಚಾಲಕ ಮರಳು ಸಮೇತ ಟಿಪ್ಪರ್ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ದೋಚುತ್ತಿದ್ದ ನಟೋರಿಯಸ್ ಗ್ಯಾಂಗ್ ಬಂಧನ

ಅಂದಹಾಗೆ ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಬಿದ್ದ ಬಳಿಕ ಹೊರ ರಾಜ್ಯಗಳಿಂದ ಮರಳು, ಎಂ ಸ್ಯಾಂಡ್ ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ಅಧಿಕಾರಿಗಳ ಕಣ್ಣು ತಪ್ಪಿಸಿ ಕಳ್ಳದಾರಿಗಳ ಮೂಲಕ ಅಕ್ರಮವಾಗಿ ಸಾಗಾಟ ಮಾಡುವ ದಂಧೆ ಪ್ರತಿದಿನ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ಸಾಗಿಸಲಾಗುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿತ್ತು.

ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಿದ್ದ ಅಧಿಕಾರಿಗಳ ತಂಡ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಲಾರಿ ಚಾಲಕನಿಂದ ಅಧಿಕಾರಿಗಳಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿ ಹತ್ಯಾ ಪ್ರಯತ್ನ ಜರುಗಿದೆ. ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ಕಾರಿಗೆ ಡಿಕ್ಕಿ ಹೊಡೆದ ಲಾರಿ ಜಪ್ತಿಯನ್ನು ಮಾಡಿರುವ ಪೊಲೀಸರು ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಬಲೆ ಬೀಸಿದ್ದಾರೆ.
Published by: G Hareeshkumar
First published: August 26, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading