ಪ್ರಿಯಾಂಕ ಅಂದರೆ ಮಹಿಳೆಯರೆಲ್ಲಾ ತಿರುಗಿ ನೋಡ್ತಾರೆ: ‘ಪೇಪರ್ ಸಿಂಹ’ ಹೇಳಿಕೆಗೆ Pratap Simha ತಿರುಗೇಟು

ನನ್ನ ಅಪ್ಪನ ಹೆಸರು ಯಾರಿಗೂ ಗೊತ್ತಿಲ್ಲ, ನಾನು ಅಪ್ಪನ ಹೆಸರು ಹೇಳಿಕೊಂಡು ಬೆಳೆದಿಲ್ಲ. ಹೌದು ನಾನು ಪೇಪರ್ ಸಿಂಹನೇ. ಅಲ್ಲಿ ಸೋನಿಯಾ ಮಗಳು ಪ್ರಿಯಾಂಕ, ಇಲ್ಲಿ ನಟ ಉಪೇಂದ್ರ ಪತ್ನಿ ಪ್ರಿಯಾಂಕ. ನಿಮ್ಮಲ್ಲೇ ಪ್ರಿಯಾಂಕ ಎಂದು ಕರೆದರೆ ಮಹಿಳೆಯರೇ ತಿರುಗಿ ನೋಡ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಿಯಾಂಕ್​ ಖರ್ಗೆ, ಪ್ರತಾಪ್​ ಸಿಂಹ

ಪ್ರಿಯಾಂಕ್​ ಖರ್ಗೆ, ಪ್ರತಾಪ್​ ಸಿಂಹ

  • Share this:
ಕೊಪ್ಪಳ: ಬಿಟ್​​ಕಾಯಿನ್​ ಹಗರಣ (Bitcoin Scam Karnataka )ಸಂಬಂಧ ಕಾಂಗ್ರೆಸ್​​ ಮುಖಂಡ ಪ್ರಿಯಾಂಕ್​ ಖರ್ಗೆ (Priyank Kharge) ಹಾಗೂ ಬಿಜೆಪಿ ಸಂಸದ ಪ್ರತಾಪ್​ ಸಿಂಹ (MP Pratap Simha) ಮಧ್ಯೆ ವ್ಯಂಗ್ಯದ ವಾಗ್ಬಾಣ ಮುಂದುವರೆದಿದೆ. ಇಲ್ಲಿ ನಡೆದ ಜನ ಸ್ವರಾಜ್ ಸಮಾವೇಶದಲ್ಲಿ ವೇದಿಕೆಯಲ್ಲೂ ಪ್ರತಾಪ್​​ ಸಿಂಹ ಅವರು ಪ್ರಿಯಾಂಕ್​ ಖರ್ಗೆ ಹೆಸರಿನ ವಿಚಾರವಾಗಿ ಕುಹಕದ ದಾಟಿಯಲ್ಲೇ ಮಾತನಾಡಿದರು. ನನ್ನ ಅಪ್ಪನ ಹೆಸರು ಯಾರಿಗೂ ಗೊತ್ತಿಲ್ಲ, ನಾನು ಅಪ್ಪನ ಹೆಸರು ಹೇಳಿಕೊಂಡು ಬೆಳೆದಿಲ್ಲ. ಹೌದು ನಾನು ಪೇಪರ್ ಸಿಂಹನೇ ಎಂದರು. ಅಲ್ಲಿ ಸೋನಿಯಾ ಮಗಳು ಪ್ರಿಯಾಂಕ, ಇಲ್ಲಿ ನಟ ಉಪೇಂದ್ರ ಪತ್ನಿ ಪ್ರಿಯಾಂಕ. ನಿಮ್ಮಲ್ಲೇ ಪ್ರಿಯಾಂಕ ಎಂದು ಕರೆದರೆ ಮಹಿಳೆಯರೇ ತಿರುಗಿ ನೋಡ್ತಾರೆ ಎಂದು ವ್ಯಂಗ್ಯವಾಡಿದರು. ಪ್ರಿಯಾಂಕ್​​ ಖರ್ಗೆ ಹೆಸರಿನಲ್ಲೇ ದಾಸ್ಯ ಇದೆ. ನೀವು ಸೋನಿಯಾ ಗಾಂಧಿ ಅವರ ಮಗಳ ಹೆಸರು ಇಟ್ಟುಕೊಂಡಿದ್ದೀರಿ. ಶೋಷಿತ ವರ್ಗದ ನಿಮಗೆ ರಾಜ್ಯಾದ್ಯಂತ ಬಂಗಲೆ ಎಂದು ಆರೋಪಿಸಿದರು.

ಅಮ್ಮ-ಮಗ ಹಗರಣ ಮಾಡಿದ್ದಾರೆ

ನೀವು ಬಿಟ್ ಕಾಯಿನ್ ಬಗ್ಗೆ ಕೇಳ್ತಿರಿ ಆದ್ರೆ, ಚುನಾವಣೆ ಆಯೋಗಕ್ಕೆ ಸಾಕಷ್ಟು ಮನೆ ಇರುವ ಮಾಹಿತಿಯನ್ನೇ ನೀಡಿಲ್ಲ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ರಫೆಲ್​​ನಲ್ಲಿ ಅಮ್ಮ-ಮಗ ಹಗರಣ ಮಾಡಿದ್ದಾರೆ ಅಂತಾ ಗೊತ್ತಾಯಿತು. ಅದಕ್ಕೆ ಈಗ ಬಿಟ್ ಕಾಯಿನ್ ಹಿಡಿದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

ಡಿಕೆಶಿಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್

ಕಾಂಗ್ರೆಸ್ ಮಿತ್ರರಿಗೆ ನಾವು ಕೇಳಲು ಬಯಸುತ್ತೇವೆ. ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ. ಆದ್ರೆ, ಕಾಂಗ್ರೆಸ್ ನ ಕ್ಯಾಪ್ಟರ್ ಯಾರು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರದ್ದು ಒಂದು ಟೀಂ, ಡಿಕೆಶಿಯದ್ದು ಮತ್ತೊಂದು ಟೀಂ. ಸಿದ್ದರಾಮಯ್ಯ ಅವರಿಗೆ ಗೌರಿ ಪಾಳ್ಯದ ನ್ಯಾಷನಲ್ ಟ್ರಾವೆಲ್ ವೈಸ್ ಕ್ಯಾಪ್ಟನ್‌. ಡಿಕೆಶಿಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್ ಆಗಿದ್ದಾನೆ ಎಂದು ಪರೋಕ್ಷವಾಗಿ ಜಮೀರ್​​ ಹಾಗೂ ಮೊಹ್ಮದ್​​ ಹ್ಯಾರೀಸ್​​ ನಲಪಾಡ್​​​ ಹೆಸರೇಳದೆ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಹುಟ್ಟಿರೋದು ಬ್ರಿಟಿಷರಿಗೆ’

ಕಾಂಗ್ರೆಸ್​​ನವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರೋದಿಲ್ಲ, ತಾಲಿಬಾನ್ ಸರ್ಕಾರ ಬರುತ್ತೆ. ಬಿಜೆಪಿ ಆರ್ ಎಸ್ ಎಸ್ ಗೆ ಜನಿಸಿದೆ, ಅದರ ಸಿದ್ದಾಂತದ ಅಡಿಯೇ ಕೆಲಸ ಮಾಡ್ತಿದೆ. ಕಾಂಗ್ರೆಸ್ ಹುಟ್ಟು ಹಾಕಿದ್ದು ಬ್ರಿಟೀಷರು, ಕಾಂಗ್ರೆಸ್ ಹುಟ್ಟಿರೋದು ಬ್ರಿಟಿಷರಿಗೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ; Siddaramaiah ಆಗ್ರಹ

ಬಿಜೆಪಿಯಿಂದ ಸ್ವಾಭಿಮಾನ ಬದುಕು

ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಕೂಡ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಪಂಚಾಯತ್ ಸದಸ್ಯರಿಗೆ ಕಾಂಗ್ರೆಸ್ ಗೌರವ ಕೊಟ್ಟಿಲ್ಲ, ಬಿಜೆಪಿ ಮಾತ್ರ ಪಂಚಾಯತ್ ಸದಸ್ಯರಿಗೆ ಗೌರವ ನೀಡಿದೆ. ಗ್ರಾಪಂ ಸದಸ್ಯರಿಗೆ ಸ್ವಾಭಿಮಾನದ ಬದುಕು ಕೊಟ್ಟಿದ್ದರೆ ಅದು ಬಿಜೆಪಿ. ಗ್ರಾಪಂ ಸದಸ್ಯರ ಗೌರವಧನ 10 ಸಾವಿರ ಏರಿಕೆಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಕೇರಳದಲ್ಲಿ ಗ್ರಾಪಂ ಸದಸ್ಯರಿಗೆ ಕಾರು ಇದೆ, ಅದೇ ರೀತಿ ಎಲ್ಲ ಸೌಲಭ್ಯ ನೀಡಲು ಬಿಜೆಪಿ ಸಿದ್ಧವಿದೆ. ಅದಕ್ಕಾಗಿ ಪಂಚಾಯತ್ ಸದಸ್ಯರು ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕಿದೆ. ವಿಧಾನ ಪರಿಷತ್ ನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಆಯ್ಕೆ ಆಗ್ತಾರೆ ಎಂದರು.

ಕಾಂಗ್ರೆಸ್​​ನವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ

ಕಾಂಗ್ರೆಸ್ ಸುಳ್ಳು, ಮೋಸ,‌ ವಂಚನೆಯಿಂದ ಆಡಳಿತ ಮಾಡಿದೆ. ರೆಫೆಲ್ ನಲ್ಲಿ ಹಗರಣ ಮಾಡಿದ್ದು ಕಾಂಗ್ರೆಸ್ ‌ಎಂಬುದು ಎಲ್ಲರಿಗೂ ಗೊತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಜನ‌ ಮೆಚ್ಚಿದ್ದಾರೆ. ಇದಕ್ಕೆ ಕಾಂಗ್ರೆಸ್ ‌ಬಿಟ್ ಕಾಯಿನ್ ಎಂಬ ಸುಳ್ಳು ಸುದ್ದಿ ಹಬ್ಬಿಸಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ. ಗಲಾಟೆಗೆ ಕಾರಣ ಬಿಟ್ ಕಾಯಿನ್ ಎಂದು ಕುಮಾರಸ್ವಾಮಿ ಹೇಳಿದ್ದರು. ಕಾಂಗ್ರೆಸ್ ತನ್ನ ಉಳಿವಿಗಾಗಿ ಸುಳ್ಳು ಹೇಳ್ತಿದೆ, ಜನರಿಗೆ ವಂಚನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
Published by:Kavya V
First published: