• Home
  • »
  • News
  • »
  • district
  • »
  • ಸಚಿವ ಪ್ರಭು ಚವ್ಹಾಣ್-ಶಾಸಕ ಶರಣಬಸಪ್ಪಗೌಡ ನಡುವೆ ಟಾಕ್​ ವಾರ್​ಗೆ ಕಾರಣವಾದ ಯಾದಗಿರಿ ಕೊರೋನಾ ಸಭೆ!

ಸಚಿವ ಪ್ರಭು ಚವ್ಹಾಣ್-ಶಾಸಕ ಶರಣಬಸಪ್ಪಗೌಡ ನಡುವೆ ಟಾಕ್​ ವಾರ್​ಗೆ ಕಾರಣವಾದ ಯಾದಗಿರಿ ಕೊರೋನಾ ಸಭೆ!

ಸಚಿವ ಪ್ರಭು ಚವ್ಹಾಣ್.

ಸಚಿವ ಪ್ರಭು ಚವ್ಹಾಣ್.

ಏ ನೀನು ಅಮಾವಾಸ್ಯೆ ಹುಣ್ಣಿಮೆಗೆ ಬರುತ್ತಿ ನೀನಗೇನು ಗೊತ್ತು..! ನಮ್ಮಲ್ಲಿ ಸಮಸ್ಯೆಯಾಗಿದೆ. ನಮ್ಮ ಗೋಳು ಕೇಳು, ನಾವು ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದೇವೆ. ಡಾಕ್ಟರ್ ಗೆ ಏನು ಕೇಳಿತ್ತಿರಿ? ಎಂದು ಸಭೆಯಲ್ಲಿ ಸಚಿವರ ವಿರುದ್ಧ ಶಾಸಕ ಶರಣಬಸಪ್ಪಗೌಡ ಕಿಡಿಕಾರಿದರು.

  • Share this:

ಯಾದಗಿರಿ: ಆಕ್ಸಿಜನ್ ಹಾಗೂ ರೆಮಡಿವಿಸರ್ ಇಂಜೆಕ್ಷನ್ ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆ  ಅಧಿಕಾರಿಗಳು ಸುಳ್ಳು ಹೇಳುತ್ತಿದ್ದು, ಅದೆ ರೀತಿ ಸಚಿವರು ಕೂಡ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು ಸರಿಯಲ್ಲ ಎಂದು ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಪಂಚಾಯತ್​ನಲ್ಲಿ ಜಿಲ್ಲಾಉಸ್ತುವಾರಿ ಸಚಿವ ಹಾಗೂ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆ ಸಭೆ ನಡೆಸಲಾಗಿತ್ತು. ಈ ಸಭೆಯು ವಾಗ್ವಾದಕ್ಕೆ ಕಾರಣವಾಯಿತು. ಸುಳ್ಳು ಮಾಹಿತಿ ನೀಡಿದಕ್ಕೆ ಸಚಿವ ಪ್ರಭು ಚವ್ಹಾಣ್ ವಿರುದ್ಧ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಗರಂ ಆದರು.


ಏ ನೀನು ಅಮಾವಾಸ್ಯೆ ಹುಣ್ಣಿಮೆಗೆ ಬರುತ್ತಿ ನೀನಗೇನು ಗೊತ್ತು..! ನಮ್ಮಲ್ಲಿ ಸಮಸ್ಯೆಯಾಗಿದೆ. ನಮ್ಮ ಗೋಳು ಕೇಳು, ನಾವು ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದೇವೆ. ಡಾಕ್ಟರ್ ಗೆ ಏನು ಕೇಳಿತ್ತಿರಿ? ನಾವು ಸಮಸ್ಯೆ ಹೇಳುತ್ತೆವೆ ಸುಮ್ಮನೆ ಕುಳಿತುಕೋ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸಚಿವ ಪ್ರಭು ಚವ್ಹಾಣ ವಿರುದ್ಧ ಗರಂ ಆದರು. ಸಚಿವರನ್ನು ಏಕ ವಚನದಲ್ಲಿ ನಿಂದನೆ ಮಾಡಿದರು. ಈ ವೇಳೆ ಸಚಿವ ಪ್ರಭು ಚವ್ಹಾಣ್ ಅವರು ಜಗಳ ಮಾಡಲು ಬಂದಿದ್ದಿರಾ? ಜಗಳ ಮಾಡಬೇಡಿ ಎಂದು ಮನವಿ ಮಾಡಿದರು.


ಸಚಿವರು ಸಭೆಯಲ್ಲಿ ಮಾತನಾಡುವಾಗ ಡಿಎಚ್ ಓ ಡಾ. ಇಂದುಮತಿ ಕಾಮಶೆಟ್ಟಿ ಮಾತನಾಡಿ, ರೆಮಡಿವಿಸರ್ ಇಂಜೆಕ್ಷನ್ ಕೊರತೆ ಯಾಗಿತ್ತು ನಂತರ ಸಮಸ್ಯೆ ನೀಗಿದೆ ಎಂದು ಹೇಳಿದರು. ಇದಕ್ಕೆ ಸುರಪುರ ಶಾಸಕ ರಾಜುಗೌಡ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ನಮ್ಮ ಪಾಲಿಗೆ ಸಿಗಬೇಕಾದ ಇಂಜೆಕ್ಷನ್ ಯಾಕೆ ಕೊಟ್ಟಿಲ್ಲ. ಸೋಂಕಿತರು ಸಾಯುತ್ತಿದ್ದಾರೆ. ಇಂಜೆಕ್ಷನ್ ‌ಜಿಲ್ಲಾ ಕೇಂದ್ರದಲ್ಲಿ ಇಟ್ಟಿಕೊಂಡು‌ ಕುಳಿತರೇ ಹೇಗೆ ಎಂದರು.


ಜನರ ಜೀವ ಉಳಿಸುವದು ಅಗತ್ಯ...! ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗಿದೆ. ಆಕ್ಸಿಜನ್ ಕೊರತೆ ನಿಗಿಸಬೇಕು. ಜನರು ಸಾಯುತ್ತಿದ್ದಾರೆ. ನಾವು ಜನರ ಸೇವೆ ಮಾಡಲು ಇದ್ದೆವೆ ಜನರೇ ಸತ್ತರೇ ನಾವು ಯಾಕೆ ಇರಬೇಕು. ಸರಕಾರ ಆಕ್ಸಿಜನ್ ಸಮಸ್ಯೆ ನಿಗಿಸಿ ಜನರ ಜೀವ ಉಳಿಸಬೇಕೆಂದು ಶಾಸಕ ರಾಜುಗೌಡ ಒತ್ತಾಯ ಮಾಡಿದ್ದಾರೆ. ಸರಕಾರ ಆಕ್ಸಿಜನ್ ನೀಡದಿದ್ದರೆ‌ ನನ್ನ ವ್ಯಯಕ್ತಿಕ‌ ಖರ್ಚಿನಲ್ಲಿ ಆಕ್ಸಿಜನ್ ಅಳವಡಿಸುತ್ತೇನೆ ಎಂದರು.


ಇದನ್ನೂ ಓದಿ: Coronavirus Updates: ಭಾರತದಲ್ಲಿ ನಿನ್ನೆ ಕೂಡ 4 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ!


ಲಾಕ್ ಡೌನ್ ಮಾಡಿ...!


ಜನತಾ ಕರ್ಫ್ಯೂದಿಂದ ಯಾವುದೇ ಪ್ರಯೋಜನವಾಗಿಲ್ಲ. ಜನತಾ ಕರ್ಫ್ಯೂ ನಿಯಮ ಜನ ಗಾಳಿಗೆ ತೂರಿ ಓಡಾಡಿಕೊಂಡಿದ್ದು ಇದರಿಂದ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಳಕ್ಕೆ ಕಾರಣವಾಗಿದೆ. ಇದೆ ರೀತಿ ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಹೇಗೆ. ಈಗಾಗಲೇ ಬೇಡ್ ಇಲ್ಲ ಇಂಜೆಕ್ಷನ್ ಇಲ್ಲ. ರಾಜ್ಯದ ಜನರ ಜೀವ ಉಳಿಸಲು ಸರಕಾರ ಕಠಿಣ ನಿಯಮ ಜಾರಿಗೆ ತರಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೈಮುಗಿದು ಕೇಳಿಕೊಳ್ಳುತ್ತೆನೆ ದಯವಿಟ್ಟು ನಾಲ್ಕು ವಾರ ಲಾಕ್ ಡೌನ್ ಮಾಡಬೇಕು.


ಸಾಲವಾದರು ಪರವಾಗಿಲ್ಲ. ಬಡವರಿಗೆ, ನಿರ್ಗತಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು .ಬಡವರಿಗೆ ಪಡಿತರ ನೀಡಬೇಕು ಇಲ್ಲದಿದ್ದರೆ ಅವರ ಬ್ಯಾಂಕ್ ಖಾತೆಗೆ ಹಣ ಹಾಕಬೇಕೆಂದು ಶಾಸಕ ರಾಜುಗೌಡ ಸಿಎಂ ಬಿಎಸ್ ವೈಗೆ ಮನವಿ ಮಾಡಿಕೊಂಡರು. ಹಣದ ಕೊರತೆ ಇದ್ದರೆ ಶಾಸಕರಿಗೆ ನೀಡಿದ ಅನುದಾನ ವ್ಯಾಪಾಸ ಪಡೆದು ಜನರ ಕಾಳಜಿ ತೊರಬೇಕೆಂದರು. ಜನರು ಕೂಡ ನಿರ್ಲಕ್ಷ್ಯ ತೊರದೆ ಮಾಸ್ಕ್ ಧರಿಸಬೇಕು ಹಾಗೂ ಸಮಾಜಿಕ ಅಂತರ ಕಾಪಾಡಿಕೊಂಡು ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲಿಸಬೇಕೆಂದು  ಶಾಸಕ ರಾಜುಗೌಡ ಮನವಿ ಮಾಡಿದ್ದಾರೆ.

Published by:MAshok Kumar
First published: