• Home
  • »
  • News
  • »
  • district
  • »
  • ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ-ಯೋಗೇಶ್ವರ್ ವಾಕ್ಸಮರ; ವಸೂಲಿ ದಂಧೆಯದ್ದೇ ಚರ್ಚೆ!

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ-ಯೋಗೇಶ್ವರ್ ವಾಕ್ಸಮರ; ವಸೂಲಿ ದಂಧೆಯದ್ದೇ ಚರ್ಚೆ!

ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್.

ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್.

ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ. ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಈಗ ಚನ್ನಪಟ್ಟಣಕ್ಕೆ ಹೋಗಲಿಲ್ಲ. ಆದರೂ ಜನ ನನಗೆ ಆರ್ಶೀರ್ವಾದ ಮಾಡಿಲ್ವ. ಇಂತಹ ಮಂತ್ರಿ ಸ್ಥಾನಗಳನ್ನು ಎಷ್ಟು ನೋಡಿಲ್ಲ ನಾನು. ಆದರೆ ಚನ್ನಪಟ್ಟಣದಲ್ಲಿ ನಾನು ಶಾಸಕ. ಅಲ್ಲಿ ನನ್ನನ್ನು ಬಿಟ್ಟು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಸಿಪಿವೈ ಹೇಳಿಕೆಗೆ ತಿರುಗೇಟು ಕೊಟ್ಟರು.

ಮುಂದೆ ಓದಿ ...
  • Share this:

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಕ್ಷೇತ್ರದ ಹಾಲಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನಡುವೆ ಜಗಳ ಜೋರಾಗಿದೆ. ಯೋಗೇಶ್ವರ್ ಕ್ಷೇತ್ರದಲ್ಲಿ ವಸೂಲಿಗೆ ಇಳಿದಿದ್ದಾರೆ ಎಂದು ಎಚ್​.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರೆ, ಈ ಆರೋಪಕ್ಕೆ ಎಚ್​ಡಿಕೆ ಬಳಿ ದಾಖಲೆ ಇದೆಯಾ ಎಂದು ಯೋಗೇಶ್ವರ್ ಸವಾಲು ಹಾಕಿದ್ದಾರೆ.


ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್ ಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದ್ದು, ಈ ವಿಚಾರಕ್ಕೆ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮುಖ್ಯಮಂತ್ರಿಗಳು ಈ ಹಿಂದೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು. ಅವರಿಗೆ ನಾನು ಧನ್ಯವಾದ ಹೇಳ್ತೇನೆ. ಆದರೆ ಈವರೆಗೆ ನನಗೆ ಅಧಿಕೃತ ಮಾಹಿತಿಯಿಲ್ಲ. ಮಾಹಿತಿ ಬಂದ ನಂತರ ಮಾತನಾಡುತ್ತೇನೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನು ಅಲ್ಲ. ಹಾಗಾಗಿ ಸ್ಥಾನ ಸಿಗಲಿ ನಂತರ ಮಾತನಾಡುತ್ತೇನೆ. ಈಗ ಊಹಾಪೋಹದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.


ಇದೇ ಸಂದರ್ಭದಲ್ಲಿ ಹೆಚ್ಡಿಕೆಗೆ ಸಿ.ಪಿ.ಯೋಗೇಶ್ವರ್ ಟಾಂಗ್ ಕೊಟ್ಟರು. ಯೋಗೇಶ್ವರ್ ವಸೂಲಿ ದಂಧೆ ಮಾಡ್ತಿದ್ದಾರೆಂಬ ಹೆಚ್ಡಿಕೆ ಹೇಳಿಕೆ ಸಂಬಂಧ ಮಾತನಾಡಿದ ಅವರು, ಸಮಯ ಬಂದಾಗ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಕೊಡುತ್ತೇನೆ. ಅವರ ಅಸ್ತಿತ್ವಕ್ಕೆ ಅವರು ಬಡಿದಾಡುತ್ತಿದ್ದಾರೆ. ನಾನು ಕ್ಷೇತ್ರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ. ಹಾಗಾಗಿ ಅವರು ನನ್ನನ್ನು ಹೊಗಳೋಕೆ ಆಗುತ್ತ. ಇಂದ್ರ-ಚಂದ್ರ ಎನ್ನೋಕೆ ಆಗುತ್ತ. ಅದು ಕುಮಾರಸ್ವಾಮಿಯವರ ಚಾಳಿ ಎಂದು ಟೀಕಿಸಿದರು.


ಅಚಾನಕ್ಕಾಗಿ ಎರಡು ಬಾರಿ ಸಿಎಂ ಆದವರೂ. ಅವರು ಹಗುರವಾಗಿ ಮಾತನಾಡುವುದನ್ನು ಬಿಡಲಿ. ನನಗೆ ಅವರಿಗಿಂತಲೂ ಚೆನ್ನಾಗಿ ಮಾತನಾಡಲು ಬರುತ್ತೆ. ಹಾಗಾಗಿ ಮುಂದೆ ಗಂಭೀರವಾಗಿ ಮಾತನಾಡಲು ಕಲಿತುಕೊಳ್ಳಲಿ. ಯಾರ್ಯಾರ ದಾಖಲೆ ಇಟ್ಟುಕೊಂಡಿದ್ದಾರೆಂದು ಅವರನ್ನೇ ಕೇಳಬೇಕು ಎಂದು ಚನ್ನಪಟ್ಟಣದಲ್ಲಿ ಹೆಚ್ಡಿಕೆಗೆ ಸಿ.ಪಿ.ಯೋಗೇಶ್ವರ್ ಟಾಂಗ್ ಕೊಟ್ಟರು.


ಇದನ್ನು ಓದಿ: ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ; ಹುಬ್ಬಳ್ಳಿ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಗುಡುಗು


ಚನ್ನಪಟ್ಟಣದ ಊರುಗಳಲ್ಲಿ ವಸೂಲಿ ಬಗ್ಗೆ ಚರ್ಚೆ ನಡೆಯುತ್ತಿದೆ : ಹೆಚ್ಡಿಕೆ


ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಹೆಚ್ಡಿಕೆ ರಾಮನಗರದಲ್ಲಿ ಟಾಂಗ್  ಕೊಟ್ಟಿದ್ದಾರೆ. ಯೋಗೇಶ್ವರ್ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗ್ತಿದೆ. ಅದರ ಬಗ್ಗೆ ನಾನೇನು ಆರೋಪ ಮಾಡ್ತಿಲ್ಲ. ರಾಮನಗರ ಎಸಿ ಮೂಲಕ ವಸೂಲಿ ಮಾಡ್ತಿಲ್ವಾ? ಈ ಸರ್ಕಾರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಾನು ನೇರವಾಗಿ ಹೇಳ್ತಿದ್ದೇನೆ. ಆ ಎಸಿ ನನಗೆ 3 ಕೋಟಿಗೆ ಆಫರ್ ಕೊಟ್ಟಿದ್ದರು. ಯೋಗೇಶ್ವರ್ ಲೆಟರ್ ಹೆಡ್ ನ ಯಾವ ರೀತಿ ಬಳಸ್ತಿದ್ದಾರೆಂದು ಜನರಿಗೆ ಗೊತ್ತಿದೆ ಎಂದರು.


ಇನ್ನು ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ. ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಈಗ ಚನ್ನಪಟ್ಟಣಕ್ಕೆ ಹೋಗಲಿಲ್ಲ. ಆದರೂ ಜನ ನನಗೆ ಆರ್ಶೀರ್ವಾದ ಮಾಡಿಲ್ವ. ಇಂತಹ ಮಂತ್ರಿ ಸ್ಥಾನಗಳನ್ನು ಎಷ್ಟು ನೋಡಿಲ್ಲ ನಾನು. ಆದರೆ ಚನ್ನಪಟ್ಟಣದಲ್ಲಿ ನಾನು ಶಾಸಕ. ಅಲ್ಲಿ ನನ್ನನ್ನು ಬಿಟ್ಟು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಸಿಪಿವೈ ಹೇಳಿಕೆಗೆ ತಿರುಗೇಟು ಕೊಟ್ಟರು.


ವರದಿ : ಎ.ಟಿ.ವೆಂಕಟೇಶ್ 

Published by:HR Ramesh
First published: