HOME » NEWS » District » TALK WAR BETWEEN EX CM HD KUMARASWAMY AND MINISTER CP YOGESHWAR ATVR MAK

HD Kumaraswamy: ನೀನು ನನ್ನ ಮುಂದೆ ಬಚ್ಚಾ, ಲಘುವಾಗಿ ಮಾತಾಡಬೇಡ; ಸಚಿವ ಯೋಗೇಶ್ವರ್​ಗೆ ಕುಮಾರಸ್ವಾಮಿ ವಾರ್ನಿಂಗ್!

ನಾನು ಕಾಣದಿರೋ ಬಿಜೆಪಿ ಪಕ್ಷನಾ ಕರ್ನಾಟಕದಲ್ಲಿ? ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು. 2006 ರಲ್ಲಿ ಎಲ್ಲಾ ಮಂಗನ ತರಹ ಹಾರಲು ರೆಡಿಯಾಗಿದ್ದರು. ಅವತ್ತು ಬಿಜೆಪಿಯನ್ನ ಉಳಿಸಿದ್ದು ನಾನು. ಇದೇ ಯಡಿಯೂರಪ್ಪ ಮಂತ್ರಿ ಮಾಡಿ ಎಂದು ಅರ್ಜಿ ಹಾಕೊಂಡು ನನ್ನ ಹತ್ತಿರ ಬಂದಿದ್ದರು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

news18-kannada
Updated:February 26, 2021, 7:50 PM IST
HD Kumaraswamy: ನೀನು ನನ್ನ ಮುಂದೆ ಬಚ್ಚಾ, ಲಘುವಾಗಿ ಮಾತಾಡಬೇಡ; ಸಚಿವ ಯೋಗೇಶ್ವರ್​ಗೆ ಕುಮಾರಸ್ವಾಮಿ ವಾರ್ನಿಂಗ್!
ಹೆಚ್​.ಡಿ. ಕುಮಾರಸ್ವಾಮಿ-ಸಿಪಿ ಯೋಗೇಶ್ವರ್​.
  • Share this:
ಚನ್ನಪಟ್ಟಣ (ಫೆಬ್ರವರಿ 26); ನನ್ನ ಮುಂದೆ ಇನ್ನು ಬಚ್ಚಾ ಇದೀಯಾ ನೀನು, ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಮುಂಚೆ ಯೋಚಿಸು, ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತೆ ಎಂದು ಸಚಿವ ಸಿ.ಪಿ. ಯೋಗೇಶ್ವರ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಮತ್ತು ಯೋಗೇಶ್ವರ್​ ನಡುವೆ ಕಳೆದ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಇಬ್ಬರೂ ಪರಸ್ಪರ ಆಗಾಗ್ಗೆ ಮಾತಿನ ಬಾಣವನ್ನು ಪ್ರಯೋಗಿಸುತ್ತಲೇ ಇದ್ದಾರೆ. ಈ ನಡುವೆ ನಿನ್ನೆ ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದ ಯೋಗೇಶ್ವರ್​ ಏಕ ವಚನದಲ್ಲಿ ಸಂಬೋಧಿಸಿದ್ದರು. ಸಚಿವರ ಈ ವರ್ತನೆಯಿಂದ ಸಾಮಾನ್ಯವಾಗಿ ಕೆರಳಿರುವ ಮಾಜಿ ಸಿಎಂ ಕುಮಾರಸ್ವಾಮಿ ಇಂದು ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ.

ಚನ್ನಪಟ್ಟಣದ ಉದ್ಯೋಗ ಮೇಳದಲ್ಲಿ ಮಾತನಾಡಿರುವ ಕುಮಾರಸ್ವಾಮಿ, "ಯೋಗೇಶ್ವರ್ ನೀನು ಸಚಿವ ಆಗಿದ್ದೀಯಾ. ನಿನ್ನ ಕೆಲಸ ಮಾಡಿಕೊಂಡು ಹೋಗು, ನನ್ನ ವಿರುದ್ಧ ಮಾತನಾಡಿ ಲೀಡರ್ ಆಗುವ ಪ್ರಯತ್ನ ಬೇಡ. ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ನೀನು ಮಂತ್ರಿಯಾಗಿದ್ದೀಯ. ನಿನ್ನಂತವನು ನನ್ನ ಬಗ್ಗೆ ಏನು ಮಾತನಾಡಲು ಸಾಧ್ಯ" ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧವೂ ಆಕ್ರೋಶ ಹೊರಹಾಕಿರುವ ಕುಮಾರಸ್ವಾಮಿ, "ನಾನು ಕಾಣದಿರೋ ಬಿಜೆಪಿ ಪಕ್ಷನಾ ಕರ್ನಾಟಕದಲ್ಲಿ? ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು. 2006 ರಲ್ಲಿ ಎಲ್ಲಾ ಮಂಗನ ತರಹ ಹಾರಲು ರೆಡಿಯಾಗಿದ್ದರು. ಅವತ್ತು ಬಿಜೆಪಿಯನ್ನ ಉಳಿಸಿದ್ದು ನಾನು. ಇದೇ ಯಡಿಯೂರಪ್ಪ ಅರ್ಜಿ ಹಾಕೊಂಡು ನನ್ನ ಹತ್ತಿರ ಬಂದಿದ್ದರು. ನನ್ನನ್ನು ಮಂತ್ರಿ ಮಾಡಿ ಬಿಜೆಪಿ ಗೆ ರಾಜೀನಾಮೆ ಕೊಡ್ತೀನಿ ಅಂತಾ ಬಂದಿದ್ದರು. ಇಂತಹ ಬಿಜೆಪಿಯಿಂದ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೌಹಾರಿದರು.

"ರಾಮನಗರ ಜಿಲ್ಲೆಯಲ್ಲಿ ನನ್ನನ್ನ ಖಾಲಿ ಮಾಡಿಸಲು ಎಲ್ಲಾ ಎದ್ದು ನಿಂತಿದ್ದಾರೆ. ಆದರೆ, ದೇವೇಗೌಡರ ಕುಟುಂಬದ ಕೊಡುಗೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಹೊಡೆದಿಲ್ಲ, ಜನರ ಹಣ ಲೂಟಿ ಮಾಡಿಲ್ಲ. ನನ್ನನ್ನು ಖಾಲಿ ಮಾಡಿಸಲು ಬಂದವರು ಅವರೇ ಖಾಲಿಯಾಗಿದ್ದಾರೆ. ನಾನು ಸಿಎಂ ಆಗಿದ್ದಾಗ ರಾಮನಗರ - ಚನ್ನಪಟ್ಟಣಕ್ಕೆ ಮಾಡಿರುವ ಅಭಿವೃದ್ಧಿ ಜನರಿಗೆ ಗೊತ್ತಿದೆ. ಜನರಿಂದ ತಲೆ ಹೊಡೆದ ಹಣದಲ್ಲಿ ಮಂತ್ರಿಯಾಗಿದ್ದಾನೆ ಇವನು, ಯಡಿಯೂರಪ್ಪ ನ ಮೆಚ್ಚಿಸಲು ಆರ್​ಎಸ್​ಎಸ್​ ನಾಯಕರ ಮೆಚ್ಚಿಸಲು ಯೋಗೇಶ್ವರ್​ ಹೀಗೆ ಮಾತನಾಡುತ್ತಿದ್ದಾನೆ. ನನ್ನ ಬೈಕೊಂಡು ಹೊಟ್ಟೆಪಾಡು ಮಾಡುತ್ತಿದ್ದಾನೆ" ಎಂದು ಕುಮಾರಸ್ವಾಮಿ ದೂರಿದರು.

ಇದನ್ನೂ ಓದಿ: Assembly Election Dates: ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ, ಮೇ 2ರಂದು 5 ರಾಜ್ಯಗಳ ಫಲಿತಾಂಶ ಪ್ರಕಟ

"ಚನ್ನಪಟ್ಟಣದಲ್ಲಿ ನನ್ನನ್ನ ಏನು ಮಾಡಲು ಸಾಧ್ಯವಿಲ್ಲ. ನಾನು ಈ ಮಣ್ಣಿನ ಮಗ, ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ. ಜೊತೆಗೆ ರಾಮನಗರ ಜಿಲ್ಲೆ ಯಾರ ಸ್ವತ್ತಲ್ಲ. ಇವನು ಮೆಗಾಸಿಟಿಯಲ್ಲಿ ಜನರಿಂದ ಹಣ ಲೂಟಿ ಮಾಡಿದವನು. ಇಂವನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಮಾಡ್ತಾನಾ?, ನಾನು ಸಿಎಂ ಆಗಿದ್ದಾಗ ಒತ್ತಡದಿಂದ ಚನ್ನಪಟ್ಟಣಕ್ಕೆ ಸಮಯ ಕೊಡಲು ಆಗಲಿಲ್ಲ, ಈಗ ಯಡಿಯೂರಪ್ಪ ದಿನ ಶಿಕಾರಿಪುರದಲ್ಲಿ ಕೂತಿದ್ದಾರಾ?. ನಾನು ಕಾಣದಿರೋ ಮಂತ್ರಿ ಏನಲ್ಲ, ಇಂತಹವರನ್ನ ಎಷ್ಟು ಜನರನ್ನ ಮಂತ್ರಿ ಮಾಡಿದ್ದೀನಿ ನಾನು. ಚನ್ನಪಟ್ಟಣದ ಜನ ಪ್ರೀತಿ ಕೊಟ್ಟಿರೋದು ನನಗೆ. ನನ್ನ ಕಾರ್ಯಕರ್ತರು ಹಲ್ಲು ಗಿಂಜಿಕೊಂಡು ಬರೋದು ನನ್ನ ಮೇಲಿನ ಪ್ರೀತಿಗೆ.
ಇವನ ಕಾರ್ಯಕರ್ತರು ಯಾಕೆ ಇವನ ಹತ್ತಿರ ಹೋಗಲ್ಲ. ಯಾರಾದರೂ ಬೆಳೆದರೆ ಅವರನ್ನ ಸರ್ವನಾಶ ಮಾಡಲು ಪ್ಲ್ಯಾನ್ ಮಾಡೋನು ಇವನು. ಆ ಮನುಷ್ಯನಿಗೆ ಚನ್ನಪಟ್ಟಣ ಕೈ ತಪ್ಪಿ ಹೋಗಿದೆ. ಜನ ತನ್ನನ್ನ ದೂರ ಇಟ್ಟಿದ್ದಾರೆಂದು ಭಯ ಬಂದಿದೆ. ಹುಣಸೂರಿಗೆ ಸೀರೆ ತಗೊಂಡು ಹೋದ, ಜನರ ಮತ ಪಡೆಯಲು. ಆದರೆ ಅಲ್ಲಿನ ಜನ ಓಡಿಸಿದರು ಇವನನ್ನ. ಜೊತೆಗೆ ಕೊರೋನಾ ಬಂದಾಗ ಏನ್ ಮಾಡ್ದ ಇವನು, 200 ರೂಪಾಯಿ ಕೊಟ್ಟು ಓಟ್ ಹಾಕಿಸಿಕೊಳ್ತಿನಿ ಅಂತಿದ್ದ. ಆದರೆ ಚನ್ನಪಟ್ಟಣದ ಪ್ರತಿ ಮನೆಗೂ ನನ್ನ ಕಾರ್ಯಕರ್ತರು ಅಕ್ಕಿ ಹಂಚಿದರು. ಹಾಗಾಗಿ ಚನ್ನಪಟ್ಟಣದ ಜನ ನಮ್ಮನ್ನ ಮರೆತಿಲ್ಲ, ನಾವು ಮರೆತಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
Published by: MAshok Kumar
First published: February 26, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories