ಭಕ್ತರಿಲ್ಲದೆ ತೀರ್ಥರೂಪಿಣಿಯಾದ ಕೊಡಗಿನ ಕುಲದೇವತೆ; ಎರಡು ನಿಮಿಷ ತಡವಾಗಿ ವಿಶ್ವ ದರ್ಶನ ನೀಡಿದ ಕಾವೇರಿ

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ತಂದವರಿಗೆ ಮಾತ್ರವೇ ತಲಕಾವೇರಿಗೆ ಎಂಟ್ರಿ ನೀಡುವುದಾಗಿ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಹೀಗಾಗಿ ಮುನ್ನೂರರಿಂದ 350 ಭಕ್ತರಷ್ಟೇ ಇದ್ದರು.

ಕಾವೇರಿ ತೀರ್ಥ.

ಕಾವೇರಿ ತೀರ್ಥ.

  • Share this:
ಕೊಡಗು: ಕನ್ನಡಿಗರ ಕುಲದೇವಿ ಮಾತೆ ಕಾವೇರಿ ತುಲಾ ಮಾಸದ ಕನ್ಯಾ ಲಗ್ನದಲ್ಲಿ ಅಕ್ಟೋಬರ್ 17 ರಂದು ಬೆಳಿಗ್ಗೆ 7 ಗಂಟೆ 5 ನಿಮಿಷಕ್ಕೆ ತೀರ್ಥರೂಪಿಣಿಯಾದಳು. ಅರ್ಚಕ ಗೋಪಾಲ್ ಆಚಾರ್ ನೇತೃತ್ಬದಲ್ಲಿ ಮಧ್ಯರಾತ್ರಿಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಅರ್ಚಕರ ತಂಡ ಬ್ರಹ್ಮಕುಂಡಿಕೆ ಬಳಿ ಕುಳಿತು ಕಾವೇರಿ ಮಾತೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ನೆರವೇರಿಸುತ್ತಿದ್ದರೆ, 7 ಗಂಟೆ 5 ನಿಮಿಷಕ್ಕೆ ತೀರ್ಥರೂಪಿಣಿಯಾದಳು. ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ತೀಥೋದ್ಭವ ಸಂಭವಿಸುವುದಾಗಿ ಅಂದಾಜಿಸಲಾಗಿತ್ತು. ಆದರೆ ಎರಡು ನಿಮಿಷ ತಡವಾಗಿ ಕಾವೇರಿ ಮಾತೆ ದರುಶನ ನೀಡಿದ್ದಾಳೆ.

ಕೊಡಗಿನ ನೂರಾರು ಭಕ್ತರು ಮಧ್ಯರಾತ್ರಿ ಎರಡು ಗಂಟೆಯಿಂದಲೇ ಕಾವೇರಿ ಮಾತೆಯನ್ನು ಭಜಿಸುತ್ತಾ ಬಾಗಮಂಡಲದಿಂದ ತಲಕಾವೇರಿ ವರೆಗೆ ಪಾದಯಾತ್ರೆ ನಡೆಸಿದರು. ಪಾದಯಾತ್ರೆ ಉದ್ದಕ್ಕೂ ದುಡಿಕೊಟ್ಟುಪಾಟ್ ಬಾರಿಸುತ್ತಾ ಕಾವೇರಿ ತಾಯಿಯನ್ನು ನೆನಯುತ್ತಾ ಆಗಮಿಸಿದ್ದರು. ಆದರೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ತಂದವರಿಗೆ ಮಾತ್ರವೇ ತಲಕಾವೇರಿಗೆ ಎಂಟ್ರಿ ನೀಡುವುದಾಗಿ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಹೀಗಾಗಿ ಮುನ್ನೂರರಿಂದ 350 ಭಕ್ತರಷ್ಟೇ ಇದ್ದರು.

ಪ್ರತೀ ವರ್ಷದಂತೆ ಆಗಿದ್ದರೆ, ತೀರ್ಥೋದ್ಭವದ ಸಂದರ್ಭದಲ್ಲಿ ಕನಿಷ್ಟ 20 ಸಾವಿರದಷ್ಟಾದರೂ ಭಕ್ತರು ನೆರೆಯುತ್ತಿದ್ದರು. ನಿರ್ಬಂಧವಿದ್ದರೂ ತಲಕಾವೇರಿಗೆ ಬಂದಿದ್ದ ಜಿಲ್ಲೆಯ ಭಕ್ತರನ್ನು ತಲಕಾವೇರಿಗೆ ಬಿಡದೆ ಗೇಟಿನಲ್ಲಿ ತಡೆಹಿಡಿಯಲಾಯಿತು. ಇದರಿಂದ ಕೆಲ ಹೊತ್ತು ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಜಾರ್ಖಂಡ್​: ಶಾಲೆಗೆ ತೆರಳಿದ್ದ 12 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ

ಕೊಡಗಿನ ಪದ್ಧತಿ ಬಗ್ಗೆ ಜಿಲ್ಲಾಧಿಕಾರಿಗೆ ಏನು ಅರಿವಿಲ್ಲ. ವರ್ಷಕ್ಕೊಮ್ಮೆ ಆಗುವ ತೀರ್ಥೋದ್ಭವಕ್ಕೂ ಬಿಡದೆ ತಮಗೆ ಎನಿಸಿದಂತೆ ಹೀಗೆ ಮಾಡುತ್ತಿರುವುದುರ ಎಷ್ಟು ಸರಿ. ಇದೇನು ಭಾರತವೇ ಇಲ್ಲ ಪಾಕಿಸ್ಥಾನವೇ ಎಂದು ಕೂಗಾಡಿದ್ರು. ಕೊನೆಗೆ ಸ್ಥಳಕ್ಕೆ ಬಂದ ಶಾಸಕ ಅಪ್ಪಚ್ಚು ರಂಜನ್ ಗೇಟಿನಲ್ಲಿ ತಡೆದು ನಿಲ್ಲಿಸಿದ್ದ ಜಿಲ್ಲೆಯ ಭಕ್ತರನ್ನು ತಲಕಾವೇರಿಗೆ ಬಿಡಿಸಿದರು.

ನಂತರ ಬಂದ ಉಸ್ತುವಾರಿ ಸಚಿವ ವಿ.ಸೋಮಣ್ಣ ತೀರ್ಥೋದ್ಭದಲ್ಲಿ ಭಾಗಹಿಸಿ, ಕಾವೇರಿ ಮಾತೆಗೆ ನಮಿಸಿದ್ರು. ಜನರ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಬೇಸರವಾಗಿದ್ದರೆ, ಸರ್ಕಾರದ ಪ್ರತಿನಿಧಿಯಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದ್ರು.
Published by:MAshok Kumar
First published: