HOME » NEWS » District » TAIWAN BASED WATERMELON GROW RAMANAGARA DISTRICT FARMERS GET MORE PROFIT RHHSN ATVR

ತೈವಾನ್ ಮೂಲದ ಕಲ್ಲಂಗಡಿ ಬೆಳೆದು ಲಾಭ ಪಡೆದ ರಾಮನಗರದ ರೈತರು; ಮತ್ತಷ್ಟು ಬೆಳೆ ಬೆಳೆಯಲು ಸಜ್ಜು!

ವಿದೇಶಿ ಮೂಲದ ಕಲ್ಲಂಗಡಿ ತಳಿಯನ್ನ ಕರ್ನಾಟಕ ರಾಜ್ಯದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದೊಡ್ಡಬಳ್ಳಾಪುರ, ಸೇರಿದಂತೆ ಈಗ ರಾಮನಗರ ಜಿಲ್ಲೆಯಲ್ಲಿಯೂ ಪರಿಚಯಿಸಿ ಯಶಸ್ವಿ ಮಾಡಲಾಗಿದೆ. ಜೊತೆಗೆ ತೈವಾನ್ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದಿರುವ ರೈತರು ಸಹ ಉತ್ತಮ ಆದಾಯ ಮಾಡಿ ಸಂತಸದಲ್ಲಿದ್ದಾರೆ.

news18-kannada
Updated:March 19, 2021, 3:26 PM IST
ತೈವಾನ್ ಮೂಲದ ಕಲ್ಲಂಗಡಿ ಬೆಳೆದು ಲಾಭ ಪಡೆದ ರಾಮನಗರದ ರೈತರು; ಮತ್ತಷ್ಟು ಬೆಳೆ ಬೆಳೆಯಲು ಸಜ್ಜು!
ತೈವಾನ್ ಮೂಲದ ಕಲ್ಲಂಗಡಿ ಹಣ್ಣು.
  • Share this:
ರಾಮನಗರ: ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕೆಂಪುಬಣ್ಣದ ಕಲ್ಲಂಗಡಿ ಹಣ್ಣನ್ನು ನೋಡಿರುತ್ತೇವೆ, ತಿಂದೂ ಇರುತ್ತೇವೆ. ಆದರೆ ಇಲ್ಲೊಂದು ಕಂಪನಿಯವರು ಬಣ್ಣಬಣ್ಣದ ರುಚಿಯುಳ್ಳ ಕಲ್ಲಂಗಡಿ ಹಣ್ಣನ್ನ ಪರಿಚಯಿಸುತ್ತಿದೆ. ಜೊತೆಗೆ ಕಂಪನಿಯಿಂದ ಬೀಜ ಪಡೆದ ರೈತರು ತಮ್ಮ ಭೂಮಿಯಲ್ಲಿ ಬೆಳೆದು ಮಾರಾಟ ಮಾಡಿ ಉತ್ತಮವಾಗಿ ಸಂಪಾದನೆ ಕೂಡ ಮಾಡಿದ್ದಾರೆ. ಈ ಬೇಸಿಗೆ ಕಾಲದಲ್ಲಿ ಎಲ್ಲ ಕಲ್ಲಂಗಡಿ ಹಣ್ಣಗೆ ಬಹುಬೇಡಿಕೆ ಇದ್ದೆ ಇರುತ್ತದೆ. ಆದರೆ, ತೈವಾನ್ ಮೂಲದ ಕಲ್ಲಂಗಡಿಗೆ ರಾಜ್ಯದಲ್ಲೂ ಬಹುಬೇಡಿಕೆ ಬಂದಿದ್ದು, ಈ ಬೆಳೆ ಬೆಳೆದ ರೈತರು ದುಪ್ಪಟ್ಟು ಆದಾಯ ಪಡೆದುಕೊಳ್ಳುತ್ತಿದ್ದಾರೆ.  ಈ ಕುರಿತಾಗಿ ನ್ಯೂಸ್ 18 ಜೊತೆಗೆ ರೈತರೇ ಮಾತನಾಡಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.

ಹೌದು, ರಾಮನಗರ ಜಿಲ್ಲೆಯ ವಿರೂಪಸಂದ್ರ ಗ್ರಾಮದ ಚಂದ್ರಶೇಖರಮೂರ್ತಿ ಎಂಬುವರ ಜಮೀನಿನಲ್ಲಿ ವಿವಿಧ ಬಣ್ಣದ ಕಲ್ಲಂಗಡಿ ಹಣ್ಣನ್ನ ಬೆಳೆಯಲಾಗಿದ್ದು, ಈಗಾಗಲೇ 2 ಎಕರೆಯಷ್ಟು ಹಣ್ಣನ್ನು ಕಟಾವ್ ಮಾಡಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾರಾಟ ಮಾಡಿ ಉತ್ತಮವಾಗಿ ಆದಾಯ ಪಡೆದಿದ್ದಾರೆ. ತೈವಾನ್ ಮೂಲದ ನೋನ್ ಯೂ ಸೀಡ್ಸ್ ಹೆಸರಿನ ಕಂಪನಿಯೊಂದು ತುಮಕೂರು ಭಾಗದಲ್ಲಿ ಪ್ರಧಾನ ಕಚೇರಿ ತೆರೆದಿದೆ. ಈ ಕಂಪನಿಯಿಂದ ಜನತ್, ಶರಾಯು, ಅರೋಹಿ, ವಿಶಾಲ ಹೆಸರಿನ ಬಣ್ಣಬಣ್ಣದ, ಅತ್ಯಂತ ರುಚಿಯುಳ್ಳ ಕಲ್ಲಂಗಡಿ ಹಣ್ಣಿನ ಬಿತ್ತನೆ ಬೀಜಗಳನ್ನು ನೀಡಲಾಗುತ್ತದೆ. ಸ್ವತ: ಇದೇ ಕಂಪನಿಯವರೇ ಬೀಜಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ರೈತರಿಗೆ ಮಾರಾಟ ಮಾಡಲಾಗುತ್ತದೆ. ಒಂದು ಕೆ.ಜಿ ಬಿತ್ತನೆ ಬೀಜಕ್ಕೆ 60 ರಿಂದ 65 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಒಂದು ಕೆ.ಜಿಯಿಂದ 5 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಅವಕಾಶವಿದೆ.

ಸಾಮಾನ್ಯವಾಗಿ ಕೆಂಪುಬಣ್ಣದ ಕಲ್ಲಂಗಡಿ ಹಣ್ಣನ್ನ ನಾವು ನೋಡಿರುತ್ತೇವೆ. ಆದರೆ ತೈವಾನ್ ಮೂಲದ ಕಂಪನಿಯೊಂದು ಹಳದಿ, ಹಸಿರು ಬಣ್ಣದ ಕಲ್ಲಂಗಡಿ ಹಣ್ಣನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎನ್ನುತ್ತಾರೆ ನೋನ್ ಯೂ ಸೀಡ್ಸ್ ಕಂಪನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥ ನಾರಾಯಣಸ್ವಾಮಿ. ಜನತ್ ಕೆಂಪಿದ್ದರೆ, ಅರೋಹಿ ಹಳದಿ ಬಣ್ಣದಾಗಿರುತ್ತದೆ.

ತೈವಾನ್ ಮೂಲದ ಕಲ್ಲಂಗಡಿ ಹಣ್ಣು.


ಇದನ್ನು ಓದಿ: ಹುಬ್ಬಳ್ಳಿಯ ಛಬ್ಬಿಯಲ್ಲಿ 2ನೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ಸಚಿವ ಆರ್.ಅಶೋಕ; ಸಿದ್ಧತೆಗೆ ಬಿಜಿಯಾದ ಜಿಲ್ಲಾಡಳಿತ

ಇನ್ನು ರಾಮನಗರದ ವಿರೂಪಸಂದ್ರ ಗ್ರಾಮದ ಚಂದ್ರಶೇಖರಮೂರ್ತಿ ಎಂಬುವರು ತಮ್ಮ 5 ಎಕರೆ ಭೂಮಿಯಲ್ಲಿ ಜನತ್ ಹಾಗೂ ಅರೋಹಿ ಮಾದರಿ ತಳಿಯ ಬೆಳೆಯನ್ನ ಬೆಳೆದಿದ್ದು, ಈಗಾಗಲೇ 2 ಟನ್‌ಗೂ ಹೆಚ್ಚು ಹಣ್ಣನ್ನ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾರಾಟ ಮಾಡಿದ್ದಾರೆ. ಒಂದು ಎಕರೆಗೆ 60 ರಿಂದ 80 ಸಾವಿರ ರೂಪಾಯಿ ಹಣ ಖರ್ಚಾಗಿದ್ದು, 2 ರಿಂದ 3 ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ ಎಂದು ಸ್ವತಃ ರೈತ ಚಂದ್ರಶೇಖರ ಮೂರ್ತಿ ಅವರೇ ತಿಳಿಸಿದ್ದಾರೆ.
Youtube Video
Youtube Video

ಒಟ್ಟಾರೆ ವಿದೇಶಿ ಮೂಲದ ಕಲ್ಲಂಗಡಿ ತಳಿಯನ್ನ ಕರ್ನಾಟಕ ರಾಜ್ಯದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದೊಡ್ಡಬಳ್ಳಾಪುರ, ಸೇರಿದಂತೆ ಈಗ ರಾಮನಗರ ಜಿಲ್ಲೆಯಲ್ಲಿಯೂ ಪರಿಚಯಿಸಿ ಯಶಸ್ವಿ ಮಾಡಲಾಗಿದೆ. ಜೊತೆಗೆ ತೈವಾನ್ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದಿರುವ ರೈತರು ಸಹ ಉತ್ತಮ ಆದಾಯ ಮಾಡಿ ಸಂತಸದಲ್ಲಿದ್ದಾರೆ.

ವಿಶೇಷ ವರದಿ: ಎ.ಟಿ.ವೆಂಕಟೇಶ್
Published by: HR Ramesh
First published: March 19, 2021, 6:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories