ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ಸ್ವಯಂ ಪ್ರೇರಿತ ಬಂದ್

ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ವರ್ತಕರು, ಹಲವು ಸ್ವಯಂ ಸೇವಾ ಸಂಸ್ಥೆಗಳ ಸ್ವಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ದಿವಂಗತ ಅಧಿಕಾರಿ ಚಂದ್ರಮೌಳೇಶ್ವರ ಅವರಗೆ ಗೌರವ ಸಲ್ಲಿಸಿದರು. ಅಲ್ಲದೆ, ಈ ಕೊಲೆ ಸಂಬಂಧ ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

news18-kannada
Updated:July 12, 2020, 7:07 AM IST
ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ಸ್ವಯಂ ಪ್ರೇರಿತ ಬಂದ್
ಕೋಲಾರದಲ್ಲಿ ಹತ್ಯೆಗೀಡಾಗಿರುವ ತಹಶೀಲ್ದಾರ್‌.
  • Share this:
ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಿಷ್ಟಾವಂತ ಅಧಿಕಾರಿ ಎಂತಲೇ ಕರೆಸಿಕೊಂಡಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಜಮೀನಿನ ವಿಚಾರಕ್ಕಾಗಿ ನಿನ್ನೆ ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. ಆದರೆ, ಈ ಕೊಲೆ ಪೂರ್ವ ನಿಯೋಜಿತ ಸಂಚಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಇಂದು ಬಂಗಾರಪೇಟೆಯ ಜನ ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸಿದ್ದಾರೆ.

ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ವರ್ತಕರು, ಹಲವು ಸ್ವಯಂ ಸೇವಾ ಸಂಸ್ಥೆಗಳ ಸ್ವಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ದಿವಂಗತ ಅಧಿಕಾರಿ ಚಂದ್ರಮೌಳೇಶ್ವರ ಅವರಗೆ ಗೌರವ ಸಲ್ಲಿಸಿದರು. ಅಲ್ಲದೆ, ಈ ಕೊಲೆ ಸಂಬಂಧ ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಬೆಳಗ್ಗೆ 11 ಗಂಟೆಗೆ  ಬಂಗಾರಪೇಟೆ ಪಟ್ಟಣದಲ್ಲಿ ನೂರಾರು ಜನರಿಂದ ಶ್ರದ್ದಾಂಜಲಿ ಕಾಲ್ನಡಿಗೆ ಜಾಥಾವನ್ನೂ  ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಿ, ಬಂಗಾರಪೇಟೆ ತಾಲೂಕು ಕಚೇರಿ ಎದುರು ಒಟ್ಟಿಗೆ ಸೇರಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ  ನಾರಾಯಣಸ್ವಾಮಿ, "ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪೂರ್ವ ನಿಯೋಜಿತವಾಗಿದ್ದು, ಕೊಲೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು.

ಏಕೆಂದರೆ ಘಟನೆ ನಡೆದ ದಿನ, ತಹಶೀಲ್ದಾರ್‌ ಸ್ಥಳಕ್ಕೆ ಬರುವಂತೆ ಆರೋಪಿ ವೆಂಕಟಪತಿ ಪಟ್ಟು ಹಿಡಿದು ಕರೆಸಿದ್ದ. ಹಾಗೂ ಕೊಲೆ ನಡೆಯುವ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಇದರ ಹಿಂದೆ ಸಂಚು ನಡೆದಿರುವ ಅನುಮಾನ ಇದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ:

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸುವ ಸಲುವಾಗಿ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ನಿನ್ನೆ ಮಧ್ಯಾಹ್ನದ ವೇಳೆಗೆ ಕಳವಂಚಿ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭ ನಿವೃತ್ತ ಶಿಕ್ಷಕ ವೆಂಕಟಪತಿ ಎಂಬ ವ್ಯಕ್ತಿ ಚೂರಿಯಿಂದ ತಹಶೀಲ್ದಾರ್‌‌ಗೆ ಇರಿದಿದ್ದಾರೆ.

ರಾಮಮೂರ್ತಿ ಹಾಗೂ ಆರೋಪಿ ವೆಂಕಟಪತಿ ಎಂಬುವರ ನಡುವೆ ಜಮೀನು ವ್ಯಾಜ್ಯವಿದ್ದು, ರಾಮಮೂರ್ತಿ ಬಂಗಾರಪೇಟೆ ತಹಶೀಲ್ದಾರ್‌‌ಗೆ ಇಬ್ಬರ ಜಮೀನನ್ನು ಹದ್ದುಬಸ್ತು ಮಾಡುವಂತೆ ದೂರು ನೀಡಿದ್ದರು.ಇದನ್ನೂ ಓದಿ : ಕೋಲಾರದಲ್ಲಿ ತಹಶೀಲ್ದಾರ್‌ ಕೊಲೆ; ಜಮೀನು ವ್ಯಾಜ್ಯಕ್ಕೆ ಬಿತ್ತು ಸರ್ಕಾರಿ ಅಧಿಕಾರಿಯ ಹೆಣದೂರನ್ನು ಆಧರಿಸಿ ಇಂದು ತಹಶೀಲ್ದಾರ್ ಚಂದ್ರಮೌಳೇಶ್ವರ್, ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆ ಜೊತೆ ಗ್ರಾಮಕ್ಕೆ ಭೇಟಿ ನೀಡಿದ್ದರು. ನಂತರ ಸರ್ವೇ ನಡೆಸಿದ ಅವರು ವೆಂಕಟಪತಿ ಜಮೀನಿನಲ್ಲಿ ಕಲ್ಲು ಹೂಳಿಸಿದ್ದಾರೆ. ಇದಕ್ಕೆ ಕೋಪಗೊಂಡ ವೆಂಕಟಪತಿ ಏಕಾಏಕಿ ತಹಶೀಲ್ದಾರ್ ಎದೆ ಭಾಗಕ್ಕೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ತಹಶೀಲ್ದಾರ್ ಗೆ ತೀವ್ರ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published by: MAshok Kumar
First published: July 12, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading