ಚಿಕ್ಕೋಡಿ(ಜುಲೈ.12): ಜಮೀನು ವಿವಾದಕ್ಕೆ ಸಂಭವಿಸಿದಂತೆ ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮತ್ತು ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ನಡುವೆ ನಡೆದ ಶೀತಲ ಸಮರದಲ್ಲಿ ತಹಶೀಲ್ದಾರ್ಗೆ ವರ್ಗಾವಣೆ ಶಿಕ್ಷೆ ಸಿಕ್ಕಿದೆ.
ತಾಲೂಕಿನ ಕಂಕಣವಾಡಿ ಗ್ರಾಮದ ಗೈರಾಣ (ಸರ್ಕಾರಿ ಜಾಗ) ದಲ್ಲಿ 1000 ರಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ ಮನೆಗಳನ್ನ ನಿರ್ಮಾಣ ಮಾಡಿಕೊಂಡು ಕಳೆದ 20 ಕ್ಕೂ ಹೆಚ್ಚು ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಆದರೆ, ಸ್ವತಃ ಶಾಸಕರೆ ಅಧಿವೇಶನದ ಸಮಯದಲ್ಲಿ ಜಾಗದ ಅತಿಕ್ರಮಣ ಕುರಿತು ಚುಕ್ಕಿ ಗುರುತಿನ ಪ್ರಶ್ನೆ ಕೇಳಿದಾಗ ವಿಭಾಗೀಯ ಕಛೇರಿ ಮೂಲಕ ಕಂಕಣವಾಡಿ ಗ್ರಾಮದ ಅತಿಕ್ರಮಣವಾಗಿರುವ ಸರಕಾರಿ ಜಮೀನನ್ನ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಯ ಮೂಲಕ ಜಾಗವನ್ನ ತೆರುವುಗೊಳಿಸಲು ಜಿಲ್ಲಾಡಳಿತ ತಹಶೀಲ್ದಾರ್ ಗೆ ಆದೇಶ ನೀಡಿತ್ತು. ಕೂಡಲೆ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅಕ್ರಮ ಮನೆಗಳಿಗೆ ನೋಟಿಸ್ ಜಾರಿ ಮಾಡಿದರು.
ನೋಟಿಸ್ ಜಾರಿ ಮಾಡುತ್ತಿದ್ದಂತೆ. ಶಾಸಕ ದುರ್ಯೋಧನ ಐಹೊಳೆ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದದ್ದಂತೆ ಸದ್ಯಕ್ಕೆ ಯಾವುದೆ ಕ್ರಮ ಜರುಗಿಸಬೇಡಿ ಎಂದು ತಹಶೀಲ್ದಾರ್ಗೆ ಶಾಸಕ ಐಹೊಳೆ ಸೂಚಿಸಿದ್ದರು. ಅದಾಗಿಯು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ 153 ಜನರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನ ದಾಖಲಿಸಿದ್ದರು. ಇದು ಶಾಸಕ ದುರ್ಯೋಧನ ಐಹೊಳೆ ಕೆಂಗಣ್ಣಿಗೆ ಕಾರಣವಾಗಿತ್ತು.
ಕೂಡಲೆ ಶಾಸಕ ದುರ್ಯೋಧನ ಐಹೊಳೆ ತಹಶೀಲ್ದಾರ್ ಭಜಂತ್ರಿ ಅವರನ್ನು ರಾಯಬಾಗದಿಂದ ವರ್ಗಾವಣೆ ಮಾಡಿ, ಮಾತ್ರ ಇಲಾಖೆಯಾದ ಸರ್ಕಾರದ ಸಚಿವಾಲಯಕ್ಕೆ ಮರಳಿ ಕಳಿಸಬೇಕು ಹಾಗೂ ಭಜಂತ್ರಿ ಜಾಗಕ್ಕೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಗ್ರೇಟ್ 1 ತಹಶೀಲ್ದಾರಾಗಿ ಕೆಲಸ ಮಾಡುತ್ತಿರುವ ಎನ್.ಬಿ ಗೆಜ್ಜೆ ಅವರನ್ನ ವರ್ಗಾವಣೆ ಮಾಡಬೇಕು ಎಂದು ಶಾಸಕ ಐಹೊಳೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಇನ್ನು ದುರ್ಯೋಧನ ಐಹೊಳೆ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಸ್ತು ಎಂದಿದ್ದು, ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯವರನ್ನು ವರ್ಗಾವಣೆ ಮಾಡಿ ಚಡಚಣದಲ್ಲಿ ಕೆಲಸ ಮಾಡುತ್ತಿದ್ದ ತಹಶೀಲ್ದಾರ್ ಗೆಜ್ಜೆಯವರನ್ನ ಇಲ್ಲಿಗೆ ವರ್ಗಾವಣೆ ಮಾಡಿ ಎರಡು ದಿನಗಳ ಹಿಂದೆ ಆದೇಶ ಮಾಡಿದೆ.
ಒಟ್ಟಿನಲ್ಲಿ ತಹಶೀಲ್ದಾರ್ ಭಜಂತ್ರಿ ಇಲಾಖೆ ಆದೇಶ ಪಾಲನೆಗೆ ಮುಂದಾಗಿ 153 ಜನರ ಮೇಲೆ ಪೊಲೀಸ್ ಕೆಸ್ ದಾಖಲಿಸಿದ್ದೆ ಈಗ ಮುಳುವಾಗಿದೆ. ಶಾಸಕರು ಬೇಡ ಅಂದರು ಪ್ರಕರಣದ ದಾಖಲಿಸಿದ್ದರಿಂದ ಶಾಸಕ ಐಹೊಳೆ ಗೆ ಮುಖಭಂಗ ಆಗಿತ್ತು.
ಅಲ್ಲದೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಕಂಕಣವಾಡಿ ಗ್ರಾಮಕ್ಕೆ ಭೇಟಿ ನೀಡಿ ಜನರ ಪರವಾಗಿ ನಿಲ್ಲುವ ಭರವಸೆ ಕೊಟ್ಟಿದ್ದರು. ಇವೆಲ್ಲ ಪ್ರಕರಣಗಳು ಶಾಸಕ ದುರ್ಯೋಧನ ಐಹೊಳೆಗೆ ನುಂನಲಾರದ ತುತ್ತಾಗಿ ಪರಿಣಮಿಸಿತ್ತು. ಕೊನೆಗೆ ತಹಶೀಲ್ದಾರ್ ವರ್ಗಾವಣೆಯಿಂದ ಪ್ರಕಾರಣ ತಾತ್ಕಾಲಿಕ ಅಂತ್ಯಕಂಡಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ