Vijay Jyothi: ಸ್ವರ್ಣಿಮ್ ವಿಜಯ ದಿವಸ್; ಕಾರವಾರದ ಕದಂಬ ನೌಕ ನೆಲೆ ತಲುಪಿದ ವಿಜಯ್ ಜ್ಯೋತಿ!

ಶುಕ್ರವಾರ ಕಾರವಾರದ ನೌಕಾನೆಲೆಗೆ ಆಗಮಿಸಿದ ಜ್ಯೋತಿಯನ್ನು ಭಾರತೀಯ ಸೇನೆ ಮತ್ತು ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ‘ಆಪರೇಷನ್ ವಿಜಯ್' ಸಮಯದಲ್ಲಿ ಸರ್ವೋಚ್ಚ ತ್ಯಾಗ ಮಾಡಿದವರ ಗೌರವಾರ್ಥವಾಗಿ ಕದಂಬ ನೌಕಾನೆಲೆಯಲ್ಲಿನ ವಿಜಯ ಸ್ಮಾರಕದ ಬಳಿಕ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು.

ವಿಜಯ ಜ್ಯೋತಿಯನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು.

ವಿಜಯ ಜ್ಯೋತಿಯನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು.

  • Share this:
ಕಾರವಾರ: ‘ಸ್ವರ್ಣಿಮ್ ವಿಜಯ್ ವರ್ಷ'ದ (Swarnim Vijay Year) ಅಂಗವಾಗಿ 2020ರ ಡಿಸೆಂಬರ್ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಬೆಳಗಿದ್ದ ‘ವಿಜಯ ಜ್ಯೋತಿ’ಯು (Vijay Jyothi) ಶುಕ್ರವಾರ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆ ಆಗಮಿಸಿತು. ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜ್ಯೋತಿಯನ್ನು ಗೌರವಯುತವಾಗಿ ಸ್ವಾಗತಿಸಿಕೊಂಡರು. ಡಿಸೆಂಬರ್ 1971ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಮತ್ತು ಐತಿಹಾಸಿಕ ವಿಜಯವನ್ನು ಪಡೆದುಕೊಂಡವು. ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಮತ್ತು ಮಹಾಯುದ್ಧ 2ರ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಕಾರಣವಾಯಿತು. 2020ರ ಡಿಸೆಂಬರ್ 16ರಿಂದ ರಾಷ್ಟ್ರವು ಭಾರತ- ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು ಈ ಬಾರಿ ‘ಸ್ವರ್ಣಿಮ್ ವಿಜಯ್ ವರ್ಷ್' ಎಂಬ ಹೆಸರಿನಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿದೆ.

ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರಿಗೆ ಗೌರವ ಸಲ್ಲಿಸಲು ಮತ್ತು ವಿಜಯದ ಆಚರಣೆಯ ಸಂಕೇತವಾಗಿ ಭಾರತೀಯ ರಕ್ಷಣಾ ಪಡೆಗಳಿಂದ ‘ಸ್ವರ್ಣಿಮ್ ವಿಜಯ್ ವರ್ಷ'ವೆಂದು ಆಚರಿಸಲು ಪ್ರಧಾನಿ ಮೋದಿಯವರು ಕರೆ ನೀಡಿ, ಒಂದು ವರ್ಷದ ಕಾರ್ಯಕ್ರಮಗಳಿಗೆ ಡಿಸೆಂಬರ್ 16ರಂದು ‘ವಿಜಯ ಜ್ಯೋತಿ’ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು. ಈ ವಿಜಯದ ಜ್ಯೋತಿಯು ಭಾರತದ ಉದ್ದಗಲಕ್ಕೆ ಸಂಚರಿಸುತ್ತಿದ್ದು, ಡಿಸೆಂಬರ್ 15ರಂದು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಶುಕ್ರವಾರ ಕಾರವಾರದ ನೌಕಾನೆಲೆಗೆ ಆಗಮಿಸಿದ ಜ್ಯೋತಿಯನ್ನು ಭಾರತೀಯ ಸೇನೆ ಮತ್ತು ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ‘ಆಪರೇಷನ್ ವಿಜಯ್' ಸಮಯದಲ್ಲಿ ಸರ್ವೋಚ್ಚ ತ್ಯಾಗ ಮಾಡಿದವರ ಗೌರವಾರ್ಥವಾಗಿ ಕದಂಬ ನೌಕಾನೆಲೆಯಲ್ಲಿನ ವಿಜಯ ಸ್ಮಾರಕದ ಬಳಿಕ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು.

ಇನ್ನು 24ರವರೆಗೆ ಯುದ್ಧವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಈ ಜ್ಯೋತಿ ಇರಲಿದ್ದು, ಈ ನಡುವೆ ವಿವಿಧ ಶಾಲೆಗಳಲ್ಲಿ, ಕಾರವಾರದ ಎನ್‌ಸಿಸಿ ಘಟಕದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಐಎನ್‌ಎಸ್ ಚಾಪೆಲ್ ವಾರ್ಷಿಪ್ ಮ್ಯೂಸಿಯಂ ಬಳಿಯ ಮೇಜರ್ ರಘೋಬಾ ರಾಣೆಯ ಪ್ರತಿಮೆಯ ಬಳಿ 22ರಂದು ಸಮಾರಂಭಗಳನ್ನು ಆಯೋಜಿಸಲಾಗಿದ್ದು, ಅಂದು ಅವರ ಪತ್ನಿ ಉಪಸ್ಥಿತರಿರಲಿದ್ದಾರೆ. 24ರಂದು ‘ವಿಜಯ ಜ್ಯೋತಿ’ಯು ಕಾರವಾರದಿಂದ ಬೆಳಗಾವಿಗೆ ಹೊರಡಲಿದೆ.

ಇದನ್ನು ಓದಿ: Elephant Attack: ಮಲೆನಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ; ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು, ಕಾಫಿ ಬೆಳೆಗಾರರು!

ವಿವಿಧ ಕಾರ್ಯಕ್ರಮಗಳು

ಭಾರತ- ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು ಈ ಬಾರಿ ಆಚರಿಸಲಾಗಿದ್ದು 'ಸ್ವರ್ಣಿಮ್ ವಿಜಯ್ ವರ್ಷ್' ಎಂಬ ಹೆಸರಿನಲ್ಲಿ ದೇಶದಾದ್ಯಂತ ಆಚರಣೆಗೊಳ್ಳುತ್ತಿದೆ. ಇದರ ಅಂಗವಾಗಿ ರಾಷ್ಟ್ರದಾದ್ಯಂತ ವಿವಿಧ ಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಭಾಗವಾಗಿಯೇ ಕೆಲವು ದಿನಗಳ ಹಿಂದೆ ಸ್ವರ್ಣಿಮ್ ವಿಜಯ ಅಭಿಯಾನದ ಬೈಕ್ ರ್ಯಾಲಿಗೆ ಕಾರವಾರ ಕದಂಬ ನೌಕಾನೆಲೆಯಲ್ಲಿರುವ ಐಎನ್ಎಸ್ ವಿಕ್ರಮಾದಿತ್ಯದ ಮೇಲಿನಿಂದ ಚಾಲನೆ ನೀಡಲಾಗಿತ್ತು. ನೌಕಾಪಡೆಯ ಸುಮಾರು 50 ಸಿಬ್ಬಂದಿ 11 ಬೈಕ್ ಹಾಗೂ ಎರಡು ಬೆಂಗಾವಲು ವಾಹನಗಳ ಮೂಲಕ ನವದೆಹಲಿಯವರೆಗೆ 6 ಸಾವಿರ ಕಿಲೋ ಮೀಟರ್ ರ್ಯಾಲಿ ಕೈಗೊಂಡಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: