CoronaVirus: ಕೋವಿಡ್​ ರೋಗಿಗಳಿಗೆ ಧೈರ್ಯ ತುಂಬಿದ ಕೊಪ್ಪಳದ ಗವಿಮಠದ ಸ್ವಾಮೀಜಿ

ಒಟ್ಟು 100 ಜನ ರೋಗಿಗಳಿಗೆ ಚಿಕಿತ್ಸೆ ನೀಡುವ ಈ ಆಸ್ಪತ್ರೆಯಲ್ಲಿ ಈಗ ಸೋಂಕಿತರು ದಾಖಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯವರ ರೆಫರ್ ಮಾಡಿರುವ ಸೋಂಕಿತರು ಗವಿಮಠದ ಆಸ್ಪತ್ರೆಗೆ ದಾಖಲಾಗಬಹುದಾಗಿದೆ. ಇಲ್ಲಿ ಗವಿಮಠದ ಆಯುರ್ವೇದ ಮಹಾವಿದ್ಯಾಲಯದ ವೈದ್ಯರು, ನರ್ಸ್ ಗಳು ಸಹ ಸೇವೆ ಮಾಡುತ್ತಿದ್ದಾರೆ.

ಕೊರೋನಾ ರೋಗಿಗಳಿಗೆ ಧೈರ್ಯ ತುಂಬುತ್ತಿರುವ ಗವಿಮಠದ ಸ್ವಾಮೀಜಿ.

ಕೊರೋನಾ ರೋಗಿಗಳಿಗೆ ಧೈರ್ಯ ತುಂಬುತ್ತಿರುವ ಗವಿಮಠದ ಸ್ವಾಮೀಜಿ.

  • Share this:
ಕೊಪ್ಪಳ: ಮಹಾಮಾರಿ ಕೊರೊನಾ ಸೋಂಕು ತಗುಲಿದಾಗ ಸೋಂಕಿತರಿಗೆ ಧೈರ್ಯ, ಆತ್ಮಸ್ಥೈರ್ಯ ಮುಖ್ಯ, ಧೈರ್ಯ ಕಳೆದುಕೊಂಡೆ ಬಹುತೇಕರು ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸೋಂಕಿತರಿಗೆ ಧೈರ್ಯ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಇಂಥ ಕೆಲಸವನ್ನು ಕೊಪ್ಪಳದ ಗವಿಮಠದ ಇಂದಿನ ಸ್ವಾಮೀಗಳಾದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ಕೊಪ್ಪಳ ಗವಿಮಠ ಈ ಭಾಗದ ಜನರಿಗೆ ಆರಾದ್ಯದೈವ. ಗವಿಮಠದ ಈಗಿನ ಸ್ವಾಮೀಗಳ ಪ್ರವಚನ, ಅವರ ಸಮಾಜಿಕ ಕಾರ್ಯಗಳಿಂದಾಗಿ ಇಡೀ ನಾಡಿನಲ್ಲಿ ಗವಿಮಠದ ಸ್ವಾಮಿಗಳು ಪ್ರಸಿದ್ದಿ ಪಡೆದಿದ್ದಾರೆ. ಅವರ ಪ್ರವಚನಗಳು, ಅವರು ನುಡಿಗಳು ಈಗ ಇಡೀ ರಾಜ್ಯದ ಜನತೆ ಚೇತೋಹಾರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸ್ವಾಮೀಜಿಗಳು ಈಗ ಕೊವಿಡ್ ಪೇಷಂಟ್ ಗಾಗಿ ಉಚಿತ ಆಸ್ಪತ್ರೆ ಆರಂಭಿಸಿದ್ದಾರೆ.

ಜಿಲ್ಲಾಡಳಿತದ ಸಹಯೋಗದಲ್ಲಿ ಆರಂಭಿಸಿರುವ ಕೊವಿಡ್ ಆಸ್ಪತ್ರೆಯು ಸ್ವಾಮೀಜಿಗಳ ಕಾರ್ಯಕ್ಕೆ ಸಿಎಂ ಸೇರಿದಂತೆ ಹಲವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈಗಿರುವ ಸರಕಾರಿ ಹಾಗು ಖಾಸಗಿ ಆಸ್ಪತ್ರೆಯ ಬೆಡ್ ಗಳು ಫುಲ್ ಆದವು, ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮುಂದೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಅವಶ್ಯವಿತ್ತು. ಈ ಸಂದರ್ಭದಲ್ಲಿ ಗವಿಮಠದ ಸ್ವಾಮೀಜಿಗಳು ತಾವೇ ಮುಂದೆ ಬಂದು ಅವರ ಮಠದ ವೃದ್ದಾಶ್ರಮವನ್ನು ಕೊವಿಡ್ ಆಸ್ಪತ್ರೆಯ ನ್ನಾಗಿ ಆರಂಭಿಸಿದ್ದಾರೆ.

ಒಟ್ಟು 100 ಜನ ರೋಗಿಗಳಿಗೆ ಚಿಕಿತ್ಸೆ ನೀಡುವ ಈ ಆಸ್ಪತ್ರೆಯಲ್ಲಿ ಈಗ ಸೋಂಕಿತರು ದಾಖಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯವರ ರೆಫರ್ ಮಾಡಿರುವ ಸೋಂಕಿತರು ಗವಿಮಠದ ಆಸ್ಪತ್ರೆಗೆ ದಾಖಲಾಗಬಹುದಾಗಿದೆ. ಇಲ್ಲಿ ಗವಿಮಠದ ಆಯುರ್ವೇದ ಮಹಾವಿದ್ಯಾಲಯದ ವೈದ್ಯರು, ನರ್ಸ್ ಗಳು ಸಹ ಸೇವೆ ಮಾಡುತ್ತಿದ್ದಾರೆ. ಇಲ್ಲಿ ದಾಖಲಾಗಿರುವ ಸೋಂಕಿತರಿಗೆ ಉಚಿತ ಚಿಕಿತ್ಸೆ ಹಾಗು ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಆಸ್ಪತ್ರೆ ಆರಂಭಿಸಿದ ದಿನವೇ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ, ಸ್ವಾಮೀಜಿಗಳಿಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಮಧ್ಯೆ ನಿನ್ನೆಯವರೆಗೂ ಗವಿಮಠದ ಕೊವಿಡ್ ಆಸ್ಪತ್ರೆಗೆ 35 ಜನರು ದಾಖಲಾಗಿದ್ದರು, ಸೋಂಕಿತರ ಮಾನಸಿಕವಾಗಿ ಕುಗ್ಗಿದ್ದರು. ಸೋಂಕಿತರ ವಾರ್ಡ್ ಗಳಲ್ಲಿ ಸೋಂಕಿತರ ಸಂಬಂಧಿಗಳಿಗೆ ಅವಕಾಶವಿಲ್ಲ. ಇಂಥ ಸಂದರ್ಭದಲ್ಲಿ ಒಂಟಿತನ ಹಾಗು ಸೋಂಕಿನ ಭಯದಿಂದ ಧೈರ್ಯ ಕಳೆದುಕೊಳ್ಳುವವರೆ ಹೆಚ್ಚು. ಅದಕ್ಕಾಗಿ ಸ್ವಾಮೀಜಿಗಳು ಸೋಂಕಿತರೊಂದಿಗೆ ವಿಡಿಯೋ ಸಂವಾದ ಮಾಡುತ್ತಿದ್ದಾರೆ. ಸೋಂಕಿತರ ಬಳಿಯಲ್ಲಿರುವ ಮೊಬೈಲ್ ಮೂಲಕ ಸೋಂಕಿತರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಆರೋಗ್ಯ ವಿಚಾರಣೆಯೊಂದಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಇದನ್ನೂ ಓದಿ: Coronavirus India Updates: ದೇಶದಲ್ಲಿ ತುಸು ತಗ್ಗಿದ ಕೊರೋನಾ ಅಬ್ಬರ; ನಿನ್ನೆ 3,11,170 ಪ್ರಕರಣಗಳು ಪತ್ತೆ

ಸಾಮಾನ್ಯವಾಗಿ ಆರೋಗ್ಯದಲ್ಲಿ ಏರುಪೇರಾದಾಗ ಮಠ ಮಾನ್ಯಗಳಿಗೆ ಹೋಗಿ ದೇವರ ದರ್ಶನ, ದೇವರಿಗೆ ತಮ್ಮ ಆರೋಗ್ಯ ಭಾಗ್ಯ ಕರುಣಿಸಲು ಬೇಡಿಕೊಳ್ಳುತ್ತಾರೆ, ಸೋಂಕಿತರು ಸಹ ದೇವರ ಧಾನ್ಯ ಮಾಡುತ್ತಾರೆ, ಇಂಥ ಸಂದರ್ಭದಲ್ಲಿ ನಡೆದಾಡುವ ದೇವರು ಎಂದು ಕರೆಯುವ ಕೊಪ್ಪಳದ ಗವಿಶ್ರೀಗಳು ಸೋಂಕಿತರೊಂದಿಗೆ ಮಾತನಾಡುತ್ತಿರುವದರಿಂದ ಅವರಲ್ಲಿ ಸೋಂಕಿನ ನೋವಿನ ಮಧ್ಯೆಯೂ ಉಲ್ಲಾಸ, ನೆಮ್ಮದಿ ಮಾನಸಿಕವಾಗಿ ಗಟ್ಟಿಯಾಗುತ್ತಿದ್ದಾರೆ.

ಸಾಕಷ್ಟು ಜನ ಸ್ವಾಮೀಜಿಗಳ ಮಾತುಗಳಿಂದ ತಮ್ಮಲ್ಲಿ ಧನ್ಯತಾ ಭಾವ ಮೂಡಿಸಿಕೊಂಡು ನೆಮ್ಮದಿಯಾಗಿದ್ದಾರೆ. ಈ ಮಧ್ಯೆ ಸೋಂಕಿತರಿಗೆ ಊಟಕ್ಕೆ ಏನು ಬೇಕು ಎಂದು ಕೇಳುವ ಸ್ವಾಮೀಜಿಗಳು ಸೋಂಕಿತರೊಬ್ಬರು ರೊಟ್ಟಿ ತಿನ್ನಬೇಕು ಎಂದಾಗ ಈಗ ಅವರೊಂದಿಗೆ ಎಲ್ಲಾ ಸೋಂಕಿತರಿಗೂ ಬಿಸಿ ಬಿಸಿ ರೊಟ್ಟಿ ಊಟಕ್ಕೆ ನೀಡಲಾಗುತ್ತಿದೆ. ಕೊಪ್ಪಳ ಗವಿಮಠದ ಕೊವಿಡ್ ಆಸ್ಪತ್ರೆ ಸ್ವಾಮಿಗಳ ಧೈರ್ಯದ ಮಾತುಗಳಿಂದಾಗಿ ಈಗ ಧಾರ್ಮಿಕ ಕೇಂದ್ರದಲ್ಲಿ ಸೋಂಕಿತರು ಇರುವಂಥ ಭಾವ ಮೂಡಿ ಬೇಗ ಗುಣಮುಖರಾಗುತ್ತಿದ್ದಾರೆ.
Published by:MAshok Kumar
First published: