HOME » NEWS » District » SWAMIJI DONE ANUSTANA ON THE TREE THAT CORONA WILL COME UNDER CONTROL END OF NINEDAY FASTING ANUSTAN SAKLB HK

ಕೊರೋನಾ ಸಾಯಲಿ ಎಂದು ಮರದ ಮೇಲೆ ಅನುಷ್ಠಾನ ; ಒಂಬತ್ತು ದಿನಗಳ ನಿರಾಹಾರ ಅನುಷ್ಠಾನ ಅಂತ್ಯ

news18-kannada
Updated:November 27, 2020, 7:46 PM IST
ಕೊರೋನಾ ಸಾಯಲಿ ಎಂದು ಮರದ ಮೇಲೆ ಅನುಷ್ಠಾನ ; ಒಂಬತ್ತು ದಿನಗಳ ನಿರಾಹಾರ ಅನುಷ್ಠಾನ ಅಂತ್ಯ
ಮಹಾದೇವ ಸ್ವಾಮೀಜಿ
  • Share this:
ಕಲಬುರ್ಗಿ(ನವೆಂಬರ್​.27): ಕೊರೋನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಿದೆ. ಇಂತಹ ಮಹಾಮಾರಿ ಬ್ರಹ್ಮಾಂಡ ಬಿಟ್ಟು ತೊಲಗಲಿ, ಕೊರೋನಾ ವೈರಸ್ ಸಾಯಲಿ ಎಂದು ಪ್ರಾರ್ಥಿಸಿದ ಸ್ವಾಮೀಜಿಯೊಬ್ಬರು ಮರದ ಮೇಲೆ ಅನುಷ್ಠಾನ ಮಾಡಿದ್ದಾರೆ. 70 ರ ಇಳಿ ವಯಸ್ಸಿನಲ್ಲಿಯೂ ಅನ್ನ ಆಹಾರ ತ್ಯಜಿಸಿ ಒಂಬತ್ತು ದಿನಗಳ ಕಾಲ ಅನುಷ್ಠಾನ ಪೂರೈಸಿದ್ದಾರೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಮರದ ಮೇಲೆ 70 ವರ್ಷದ ವೃದ್ಧ ಕೈಗೊಂಡಿದ್ದ ಅನುಷ್ಠಾನ ಅಂತ್ಯಗೊಂಡಿದೆ. ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ ಮಹದೇವ ಮುತ್ಯಾ ಒಂಬತ್ತು ದಿನಗಳಿಂದ ಮೊಗಲಾ ಗ್ರಾಮದಲ್ಲಿ ಅನುಷ್ಠಾನ ಕೈಗೊಂಡಿದ್ದರು. ಸಾಮಾನ್ಯವಾಗಿ ಬಹುತೇಕ ಸ್ವಾಮೀಜಿಗಳು ನೆಲದ ಮೇಲೆ ಅನುಷ್ಠಾನ ಕೈಗೊಂಡರೆ, 70 ವರ್ಷದ ಮಹದೇವ ಮುತ್ಯಾ ಮಾತ್ರ ಮರದ ಮೇಲೆಯೇ ಅನುಷ್ಠಾನ ಕೈಗೊಂಡಿದ್ದರು. ಕೊರೋನಾ ದೂರವಾಗಲಿ, ಲೋಕ ಕಲ್ಯಾಣವಾಗಲಿ, ಮಕ್ಕಳು, ಮರಿಗೆ ತೊಂದರಯಾಗದಿರಲಿ, ದನಕರುಗಳು ರೋಗದಿಂದ ಬಳಲಿ ಸಾಯುವುದು ನಿಲ್ಲಲಿ, ರೈತರ ಬೆಳೆಯೂ ಸಮೃದ್ಧವಾಗಿ ಬರಲಿ ಎಂದು ಪ್ರಾರ್ಥಿಸಿ ಅನುಷ್ಠಾನ ಕುಳಿತಿರುವುದಾಗಿ ಸ್ವಾಮೀಜಿಗಳು ತಿಳಿಸಿದ್ದಾರೆ.

ಮುಖ್ಯವಾಗಿ ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನಾ ಸಾಯಲಿ ಎಂದು ಅನುಷ್ಠಾನ ಮಾಡುತ್ತಿರುವುದಾಗಿ ಮುತ್ಯಾ ತಿಳಿಸಿದ್ದಾರೆ. ಮಲ, ಮೂತ್ರ ವಿಸರ್ಜನೆ ಕೂಡಾ ಮಾಡದೇ ಸ್ವಾಮೀಜಿ, ಮರದ ಮೇಲೆ ಕುಳಿತಿದ್ದರು. ಇಂದು ಅನುಷ್ಠಾನ ಅಂತ್ಯಗೊಳಿಸಿದ ಮುತ್ಯಾ, ಮರದ ಮೇಲಿನಿಂದ ಕೆಳಗೆ ಇಳಿದಿದ್ದಾರೆ. ಬಸವಕಲ್ಯಾಣ, ಚಿತ್ತಾಪುರ ಸೇರಿ ಹಲವಾರು ಊರುಗಳಿಂದ ಆಗಮಿಸಿದ ಭಕ್ತರು, ಮಹಾದೇವ ಮುತ್ಯಾನಿಂದ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಹಿಂದೆ ಮೊಗಲಾ ಗ್ರಾಮಕ್ಕೆ ಬಂದು ಹೋಗಿದ್ದ ಮುತ್ಯಾ, ನಂತರ ಕೆಲ ದಿನಗಳ ಹಿಂದೆ ಮತ್ತೆ ಬಂದಿದ್ದರು. ಗ್ರಾಮದಲ್ಲಿ ಅನುಷ್ಠಾನಕ್ಕೆ ಕೂಡುವುದಾಗಿ ಹೇಳಿದ್ದರು.

ಸ್ವಾರ್ಥ ಉದ್ದೇಶದಿಂದ ಅನುಷ್ಠಾನ ಕೂಡುತ್ತಿದ್ದಾರೆಂದು ನಾವು ಸುಮ್ಮನಿದ್ದೆವು. ಮುತ್ಯಾನ ಕಠೋರ ನಿಷ್ಠೆ ನೋಡಿದ ನಂತರ ಅನುಷ್ಠಾನಕ್ಕೆ ಅಗತ್ಯವಿರೋ ಸಿದ್ಧತೆಗಳನ್ನು ಮಾಡಿಕೊಟ್ಟೆವು. ಅನುಷ್ಠಾನ ಕುಳಿತ ಜಾಗದಲ್ಲಿ ಭಜಯನೆಯನ್ನೂ ಮಾಡಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ್ದೆವು. ತಮ್ಮ ಊರಲ್ಲಿಯೇ ಮುತ್ಯಾ ಅನುಷ್ಠಾನ ಮಾಡಿದ್ದು, ನಮ್ಮೆಲ್ಲರಿಗೂ ಒಳ್ಳೆಯದಾಗಲಿದೆ ಎಂದು ಮೊಗಲಾ ಗ್ರಾಮದ ನಿವಾಸಿ ಶರಣು ಸಾಹುಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ: ಯೋಗೇಶ್ವರ್ ಗೆ ತಿರುಗೇಟು ನೀಡಿದ ಹೆಚ್ ಡಿ ಕುಮಾರಸ್ವಾಮಿ 

ಅನುಷ್ಠಾನ ಅಂತ್ಯಗೊಳಿಸಿರುವ ಮಹಾದೇವ ಮುತ್ಯಾ, ಹಾಲು ಸ್ವೀಕರಿಸಿದ್ದಾರೆ. ಜೊತೆಗೆ ಪ್ರಸಾದವನ್ನೂ ಸ್ವೀಕರಿಸಿದ್ದಾರೆ. ಕೇವಲ ಮೊಗಲಾ ಗ್ರಾಮವೊಂದರಲ್ಲಿಯೇ ಅಲ್ಲದೆ, ಬೇರೆ ಕಡೆಯೂ ಮರದ ಮೇಲೆ ಅನುಷ್ಠಾನ ಕುಳಿತಿದ್ದುದಾಗಿ ಮಹಾದೇವ ಮುತ್ಯಾ ತಿಳಿಸಿದ್ದಾರೆ. ತನ್ನ ತಾಯಿ ತನ್ನ ತೂಕದ ಬೆಳ್ಳಿ ಕೊಡುವುದಾಗಿ ಹೇಳಿದ್ದರು. ಆದರೆ ಅದರಂತೆ ಕೊಟ್ಟಿಲ್ಲ. ಹೀಗಾಗಿ ನಾನು ಮರದ ಮೇಲೆಯೇ ಅನುಷ್ಠಾನ ಕೂಡುತ್ತಿದ್ದೇನೆ. ಮರದ ಮೇಲೆ ಕುಳಿತುಕೊಳ್ಳುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಅನುಷ್ಠಾನ ಅಂತ್ಯಗೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದ ಭಕ್ತರಿಗೆ ಮೊಗಲಾ ಗ್ರಾಮದ ನಿವಾಸಿಗಳು ಸ್ವಯಂಪ್ರೇರಣಿಯಿಂದ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಬಂದ ಭಕ್ತರು ಮುತ್ಯಾರಿಗೆ ಕಾಣಿಕೆ ಅರ್ಪಿಸಿ, ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದ್ದಾರೆ.
Published by: G Hareeshkumar
First published: November 27, 2020, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories