ತುಮಕೂರು : ಸ್ವಚ್ಛತೆಯಲ್ಲಿ 48 ನೇ ಸ್ಥಾನದಲ್ಲಿದ್ದ ತುಮಕೂರು ಮಹಾನಗರ ಪಾಲಿಕೆ ಇದೀಗ 2 ನೇ ಸ್ಥಾನಕ್ಕೆ ಏರಿದೆ. ಇನ್ನೂ ಮೊದಲನೆ ಸ್ಥಾನಕ್ಕೆ ಬರಲು ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಮೇಯರ್ ಫರೀದಾ ಬೇಗಂ ಮನವಿ ಮಾಡಿದ್ದಾರೆ. ನಗರದ ಟೌನ್‌ಹಾಲ್ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ್- 2021 ರ ಅಂಗವಾಗಿ ಸೈಕ್ಲಾಥಾನ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, "ತುಮಕೂರು ಮಹಾನಗರ ಪಾಲಿಕೆ ಮೈಸೂರನ್ನು ಹಿಂದಿಕ್ಕಿ ಮೊದಲನೆಯ ಸ್ಥಾನಕ್ಕೆ ಬರುವವರೆಗೂ ನಾವು ವಿರಮಿಸುವುದಿಲ್ಲ. ಪಾಲಿಕೆಯ 35 ವಾರ್ಡಿನ ಸದಸ್ಯರೊಂದಿಗೆ ಐನೂರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿಗಳ ಜತೆಗೂಡಿ ಸ್ವಚ್ಚತೆಗೆ ನಗರದ ಪ್ರತಿಯೊಬ್ಬರೂ ಸಹಕರಿಸಿದರೆ ರೋಗ ಮುಕ್ತ ನಗರವನ್ನಾಗಿ ಮಾಡಬಹುದು" ಎಂದು ತಿಳಿಸಿದ್ದಾರೆ.
"ಸ್ವಚ್ಚತೆಗೆ ಸಂಬಂಧಿಸಿದಂತೆ ಪಾಲಿಕೆಯು ನೂತನವಾಗಿ ಬಿಡುಗಡೆ ಮಾಡಿರುವ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು" ಎಂದು ಫರೀದಾ ಬೇಗಂ ತಿಳಿಸಿದ್ದಾರೆ.
"ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆ ಸುಮಾರು 2000 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ . ಕೋವಿಡ್ -19 ವೈರಸ್ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ ಪರಿಣಾಮವಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: Bhagyavantharu: ನೂತನ ತಂತ್ರಜ್ಞಾನದ ಜೊತೆ ರಿಲೀಸ್ ಗೆ ಸಜ್ಜಾದ ಡಾ.ರಾಜ್ ಅಭಿನಯದ ಭಾಗ್ಯವಂತರು ಸಿನಿಮಾ
ಈಗಾಗಲೇ ಶೇ.90 ರಷ್ಟು ಕಾಮಗಾರಿಗಳು ಮುಗಿದಿವೆ . ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ . ಆಗ ತುಮಕೂರು ನಗರ ಅತ್ಯಂತ ಸುಂದರವಾಗಿ ಕಾಣಲಿದೆ . ಮೈಸೂರನ್ನು ತುಮಕೂರು ಹಿಂದಿಕ್ಕಿ ಸ್ವಚ್ಚತೆಯಲ್ಲಿ ಮೂದಲ ಸ್ಥಾನಕ್ಕೇರಲಿದೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ