ಬೀದರ್ : ಉಕ್ರೇನ್​​​ಗೆ ಓದಲು ಹೋದ ವಿದ್ಯಾರ್ಥಿ ಅನುಮಾನಾಸ್ಪದ ಸಾವು : ಮಾಹಿತಿ ಸಿಗದೆ ಪೋಷಕರ ಗೋಳಾಟ

ಆಗಸ್ಟ್ 28ರಂದು ಏಳು ಅಂತಸ್ತಿನ ಬಿಲ್ಡಿಂಗ್ ಮೇಲಿಂದ ಬಿದ್ದಿದ್ದ.  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 29 ಕ್ಕೆ ಮೃತಪಟ್ಟಿದ್ದಾನೆ ಎಂದು ಕಾಲೇಜಿನವರು ಅಂದೇ ತಿಳಿಸಿದ್ದಾರೆ

ಸಾವನ್ನಪ್ಪಿದ ವಿದ್ಯಾರ್ಥಿ ಅಮರ್

ಸಾವನ್ನಪ್ಪಿದ ವಿದ್ಯಾರ್ಥಿ ಅಮರ್

  • Share this:
ಬೀದರ್​(ಸೆಪ್ಟೆಂಬರ್​. 02): ವಿದೇಶದಲ್ಲಿ ನಮ್ಮ ಮಗ ಓದುತ್ತಿದ್ದಾನೆ. ಡಾಕ್ಟರ್ ಆಗುತ್ತಾನೆ. ನಮ್ಮ ಕಷ್ಟಗಳು ಇನ್ನು ಮೇಲೆ ಪರಿಹಾರವಾಗಲಿವೆ ಎಂದು ಕನಸು ಕಂಡಿದ್ದ ಪೋಷಕರಿಗೆ ಮಗನ ಸಾವು ಬರ ಸಿಡಿಲಿನಂತೆ ಎರಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕದಲಬಾದ್ ಗ್ರಾಮದ ವಿದ್ಯಾರ್ಥಿ ಅಮರ್ ಶಾಲಿವಾನ್ ಬಿರಾದಾರ್ (20) ಉಕ್ರೇನ್​​ನಲ್ಲಿ ಮೃತಪಟ್ಟಿದ್ದು, ನಾಲ್ಕು ದಿನಗಳಾದರೂ ಸರಿಯಾದ ಮಾಹಿತಿ ಸಿಗದೆ ಪಾಲಕರು ಗೋಳಾಡುತ್ತಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರದ ಬಳಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ. ಅಮರ್​​ (20) ಉಕ್ರೇನ್​​​ನಲ್ಲಿ ಎಂಬಿಬಿಎಸ್​ ಓದುತ್ತಿದ್ದ. ಈತ ನಾಲ್ಕು ದಿನಗಳ ಹಿಂದೆಯೇ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಕಾಲೇಜಿನಿಂದಲೇ ಸುದ್ದಿ ಬಂದಿದೆ. ಆದರೆ ಘಟನೆಯ ಬಗ್ಗೆ ನಿಖರವಾಗಿ ಮಾಹಿತಿ ಸಿಗುತ್ತಿಲ್ಲ. ಅಮರ್​ ಹತ್ತು ತಿಂಗಳ ಹಿಂದೆಯಷ್ಟೇ ಉಕ್ರೇನ್​​ಗೆ ತೆರಳಿದ್ದ. ಅಲ್ಲಿನ ಖರ್ಕವಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಅವನ ಸಾವು ಹೇಗಾಯಿತು? ಎನಾಯ್ತು ಅಂತ ಸಂಶಯಾಸ್ಪದವಾಗಿ ಉಳಿದಿದೆ.

ಇನ್ನೂ ಈ ಬಗ್ಗೆ ಶಾಸಕ ಈಶ್ವರ್ ಖಂಡ್ರೆ ಹಾಗೂ ಸಂಸದ ಭಗವಂತ ಖೂಬಾ ಅವರಿಗೂ ಮಾಹಿತಿ ನೀಡಿದ್ದು, ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಮಾಡಲಾಗಿದೆ. ಮೃತ ದೇಹ ಊರಿಗೆ ತರುವ ಪ್ರಕ್ರಿಯೆ ಜಾರಿಯಲ್ಲಿದೆ ಎನ್ನಲಾಗಿದೆ. ಮನೆಯಲ್ಲಿ ತಾಯಿ ತಂದೆ ಮಗನ ಸಾವಿನ ಸುದ್ದಿ ಕೇಳಿ ಸಂಪೂರ್ಣ ನೊಂದಿದ್ದಾರೆ. ಗ್ರಾಮದಲ್ಲಿಯೂ ಸಹ ಸಂಪೂರ್ಣವಾಗಿ ಮೌನ ಆವರಿಸಿದೆ.

ಇದನ್ನೂ ಓದಿ : ರಾಜ್ಯದ ವಿವಿಧೆಡೆಯೂ ಡ್ರಗ್ಸ್ ಮಾಫಿಯಾ ವಿಸ್ತರಣೆ - ಸಿಸಿಬಿಯಿಂದ ತನಿಖೆ ಚುರುಕು : ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್​​ ಸೂದ್

ಆಗಸ್ಟ್ 28ರಂದು ಏಳು ಅಂತಸ್ತಿನ ಬಿಲ್ಡಿಂಗ್ ಮೇಲಿಂದ ಬಿದ್ದಿದ್ದ.  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 29 ಕ್ಕೆ ಮೃತಪಟ್ಟಿದ್ದಾನೆ ಎಂದು ಕಾಲೇಜಿನವರು ಅಂದೇ ತಿಳಿಸಿದ್ದಾರೆ. ನಮಗೆ ಇದು ಆತ್ಮಹತ್ಯೆ ಅಂತ ಅನಿಸುತ್ತಿಲ್ಲ. ಅವನು ಸಾಯುವುದಕ್ಕೂ ಮುನ್ನ ಮೂರು ಗಂಟೆ ಮೊದಲು ತಂದೆಯ ಜೊತೆ ಮಾತನಾಡಿ ಭಾರತಕ್ಕೆ ವಾಪಾಸ್ ಬರುವುದಾಗಿ ತಿಳಿಸಿದ್ದ. ವಿದ್ಯಾರ್ಥಿ ಬಿಲ್ಡಿಂಗ್ ಮೇಲಿಂದ ಬಿದ್ದು ಮೃತಪಟ್ಟಿರುವುದಕ್ಕೆ  ಕಾರಣ ಏನು? ಆ ರೀತಿ ನಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತವನಲ್ಲ ಅಂತ‌ ಪೋಷಕರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ತನಿಖೆಯಾಗಿ ಮೃತ ದೇಹವನ್ನ ಮರಳಿ ಗ್ರಾಮಕ್ಕೆ ತರಲು ಸಹಕರಿಸಬೇಕೆಂದು ಸರ್ಕಾರಗಳನ್ನು ಬೇಡಿಕೊಂಡಿದ್ದಾರೆ.

ಓದಲು ಹೋದ ಮಗ ಈ ರೀತಿ ಕಂಡರಿಯದ ದೇಶದಲ್ಲಿ ಹೆಣವಾಗಿರುವುದು ದುರಂತವೇ ಸರಿ. ಇದರಿಂದ ಕದಲಾಬಾದ್ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಅಮರ್ ಸಾವಿಗೆ ಕಾರಣ ಏನೆಂಬುದನ್ನು ಪತ್ತೆಹಚ್ಚಬೇಕಿದೆ. ಅದಕ್ಕಿನ್ನ ಮೊದಲು ಆತನ ಮೃತದೇಹ ಸ್ವಗ್ರಾಮಕ್ಕೆ ತರಲು ಸರ್ಕಾರಗಳು ಮುಂದಾಗಬೇಕಿದೆ.
Published by:G Hareeshkumar
First published: