• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • 8 ವಾರಗಳ ಕಾಲ ಬಳ್ಳಾರಿಗೆ ಹೋಗಲು ಜನಾರ್ದನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್​

8 ವಾರಗಳ ಕಾಲ ಬಳ್ಳಾರಿಗೆ ಹೋಗಲು ಜನಾರ್ದನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್​

ಜನಾರ್ಧನ ರೆಡ್ಡಿ Photo: DH

ಜನಾರ್ಧನ ರೆಡ್ಡಿ Photo: DH

ಬಳ್ಳಾರಿಗೆ ಭೇಟಿ ನೀಡಿದ ಪ್ರತಿಸಲವೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್​ ಷರತ್ತು ವಿಧಿಸಿದೆ. ಜನಾರ್ದನ ರೆಡ್ಡಿ ಜಾಮೀನು ಷರತ್ತಿನಲ್ಲಿಯೂ ಸುಪ್ರೀಂಕೋರ್ಟ್ ಮಾರ್ಪಾಟು ಮಾಡಿದ್ದು, ಜಾಮೀನು ಷರತ್ತು ಸಡಿಲಿಕೆ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಮುಂದೆ ಓದಿ ...
  • Share this:

    ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ರಾರಾಜಿಸಿದ್ದ ಗಣಿ ಧಣಿ, ಬಳ್ಳಾರಿ ರಿಪಬ್ಲಿಕ್​ನ ಗಾಲಿ ಜನಾರ್ದನ ರೆಡ್ಡಿ ದೀರ್ಘ ಕಾಲದಿಂದ ತವರು ಜಿಲ್ಲೆಯಿಂದ ಹೊರಗುಳಿದಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಳ್ಳಾರಿ ಪ್ರವೇಶಿಸದಂತೆ ಹೇರಿದ್ದ ನಿಷೇದಾಜ್ಞೆಯನ್ನು ಅಲ್ಪ ಕಾಲದ ಮಟ್ಟಿಗೆ ಸುಪ್ರೀಂ ಕೋರ್ಟ್​ ತೆರವುಗೊಳಿಸಿದೆ.


    ಬಳ್ಳಾರಿಗೆ ತೆರಳಲು 8 ವಾರಗಳ ಕಾಲ ಅನುಮತಿ ನೀಡುವಂತೆ ಜಾಮೀನು ಅರ್ಜಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದೆ.


    ಸಿಬಿಐ ಪರವಾಗಿ ವಕೀಲ ಮಾಧವಿ ದಿವಾನ್ ವಕಾಲತ್ತು


    ಜನಾರ್ಧನ ರೆಡ್ಡಿ ಅವರು ತಮ್ಮ ತವರು ಜಿಲ್ಲೆ ಬಳ್ಳಾರಿಗೆ ಹೋಗಲು ಅನುಮತಿ ನೀಡುವುದಕ್ಕೆ ಸಿಬಿಐ ನ್ಯಾಯಲಯದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿತ್ತು, ರೆಡ್ಡಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುವ ಬಳ್ಳಾರಿ ಅಕ್ರಮ ಗಣಿ ಪ್ರಕರಣದ 47 ಸಾಕ್ಷಿಗಳು ಬಳ್ಳಾರಿಯ ಸ್ಥಳೀಯ ವ್ಯಕ್ತಿಗಳು. ಆರೋಪಿಯು ಬೇರೆಯವರ ಜಾಗದಲ್ಲಿ ಅಂದರೆ ಕರ್ನಾಟಕದ ಗಡಿ ರೇಖೆಯನ್ನೇ ಅಳಿಸಿ ಹಾಕಿ ಗಣಿಗಾರಿಕೆ ಮಾಡಿದ್ದಾರೆ. ಈ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ. ಬೆದರಿಕೆಗೆ ಏನಾದರೂ ಸಾಕ್ಷಿಗಳು ಹೆದರಿದರೆ ಪ್ರಕರಣ ಬಿದ್ದುಹೋಗುವ ಸಾಧ್ಯತೆಯಿದೆ. ಸ್ಥಳೀಯ ಸಾಕ್ಷಿಗಳ ಪೈಕಿ ಓರ್ವ ವ್ಯಕ್ತಿ ಜನಾರ್ದನ ರೆಡ್ಡಿ ಬೆದರಿಕೆ ಹಾಕಿದ್ದಾರೆ ಎಂದು ಪತ್ರ ಬರೆದಿದ್ದಾರೆ ಎಂದು ಸಿಬಿಐ ಪರ ಅಡಿಷನಲ್ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.


    ‘ಮಾಜಿ ಸಚಿವ ಜನಾರ್ದನ ರೆಡ್ಡಿ ನ್ಯಾಯಾಧೀಶರಿಗೆ ಲಂಚದ ಆಮಿಷ ನೀಡಿ ಸಿಕ್ಕಿ ಬಿದ್ದಿದ್ದಾರೆ. ಇಂಥಹ ಕೃತ್ಯದಲ್ಲಿ ಭಾಗಿಯಾಗಿರುವ ಜನಾರ್ದನ ರೆಡ್ಡಿ ಅವರನ್ನು ಹೇಗೆ ನಂಬಲು ಸಾಧ್ಯ? ಎಂದು ನ್ಯಾಯಲಯದಲ್ಲಿ ವಾದ ಮಂಡಿಸಿದ್ದಾರೆ.


    ಸಾಕ್ಷಿಗಳೆಲ್ಲಾ ಉಲ್ಟಾ ಹೊಡೆದರೆ ಎನ್ನುವ ಭಯ ವ್ಯಕ್ತಪಡಿಸಿದ ಸಿಬಿಐ


    ಅವರು ಬಳ್ಳಾರಿಗೆ ಹೋಗಲು ಅನುಮತಿ ನೀಡಿದರೆ ಸಾಕ್ಷಿಗಳಿಗೆ ಲಂಚ ನೀಡಿ ಉಲ್ಟಾ ಸಾಕ್ಷಿ ಹೇಳುವಂತೆ ಮಾಡುತ್ತಾರೆ. ಇದು ಕೇಸ್ ಮೇಲೆ ಬಹಳ ಪರಿಣಾಮ ಬೀರುತ್ತದೆ. ನ್ಯಾಯಾಧೀಶರುಗಳನ್ನೇ ಸ್ವತಂತ್ರವಾಗಿ ಇರಲು ಬಿಡದ ಈ ವ್ಯಕ್ತಿ. ಇನ್ನು ಸಾಕ್ಷಿಗಳನ್ನೂ ಮುಕ್ತವಾಗಿ ಸಾಕ್ಷಿ ಹೇಳಲು ಬಿಡುವುದಿಲ್ಲ. ಇದು ಈ ಪ್ರಕರಣದ ಪ್ರಮುಖ ಅಂಶವಾಗಿದೆ. ಜಾಮೀನು ಷರತ್ತು ಮಾರ್ಪಡಿಸುವ ವಿಶ್ವಾಸ ಮೂಡಿಸಿಲ್ಲ. ಈಗಾಗಲೇ ಎಲ್ಲಾ ಪೂರಕ, ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೋರ್ಟ್ ವಿಚಾರಣೆ ಅವರ ಕಡೆಯಿಂದಲೇ ವಿಳಂಬವಾಗಿದೆ. ಇದರ ಅನುಕೂಲ ಪಡೆಯಲು ಜನಾರ್ಧನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.

     ಬಳ್ಳಾರಿಗೆ ಭೇಟಿ ನೀಡಿದ ಪ್ರತಿಸಲವೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್​ ಷರತ್ತು ವಿಧಿಸಿದೆ. ಜನಾರ್ದನ ರೆಡ್ಡಿಗೆ ಜಾಮೀನು ನೀಡುವ ಷರತ್ತಿನಲ್ಲಿಯೂ ಸುಪ್ರೀಂಕೋರ್ಟ್ ಕೊಂಚ ಮಾರ್ಪಾಟು ಮಾಡಿದ್ದು, ಜಾಮೀನು ಷರತ್ತು ಸಡಿಲಿಕೆ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಆದರೆ ಜಾಮೀನಿನ ಷರತ್ತಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಸಿಬಿಐ ನ್ಯಾಯಲಯದ ಎದುರು ಪ್ರತಿಪಾದಿಸಿತ್ತು. ಆದರೆ ಸಿಬಿಐಗೆ ಅನೇಕ ವಿಚಾರಗಳಲ್ಲಿ ಹಿನ್ನಡೆಯಾಗಿದೆ ಎಂದೇ ಹೇಳಬಹುದು.




    ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ಕೊಟ್ಟಾಗ ಕಡಪ, ಅನಂತಪುರ ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ, ಇದಲ್ಲದೆ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ನಿರ್ದೇಶನವನ್ನು ವಿಚಾರಣಾ ನ್ಯಾಯಲಯಗಳಿಗೆ ನೀಡಿದೆ.








    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.




    Published by:HR Ramesh
    First published: