ಮಂಡ್ಯ: ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಚಂದ್ರವನ ಆಶ್ರಮದ ಐತಿಹಾಸಿಕ ಹಾಗೂ ಪುರಾತನ ಕಾಶಿ ಚಂದ್ರ ಮೌಳೇಶ್ವರನ ದೇಗುಲದಲ್ಲಿ ವಿಸ್ಮಯ ಜರುಗುತ್ತದೆ. ಸೂರ್ಯನ ಪ್ರಥಮ ರಶ್ಮಿ ಈ ದೇಗುಲದ ಗರ್ಭಗುಡಿಯ ಶಿವಲಿಂಗದ ಮೇಲೆ ಸ್ಪರ್ಶ ಮಾಡುವ ವಿಸ್ಮಯ ಮಕರ ಸಂಕ್ರಾತಿಯ ದಿನ ಈ ದೇಗುಲದಲ್ಲಿ ನಡೆಯುತ್ತಿದ್ದು ಭಕ್ತರು ಈ ಅಪರೂಪದ ದೃಶ್ಯ ನೋಡ ಲು ಇಲ್ಲಿಗೆ ಬರುತ್ತಾರೆ.
ಹೌದು! ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿರುವ ಪುರಾಣ ಪ್ರಸಿದ್ದ ಐತಿಹಾಸಿಕ ಕಾಶಿ ಚಂದ್ರಮೌಳೇಶ್ಚರ ದೇಗುಲದಲ್ಲಿ ಪ್ರತಿ ವರ್ಷ ಮಕರ ಸಂಕ್ರಾತಿಯಂದು ಇಲ್ಲಿ ಒಂದು ವಿಸ್ಮಯ ನಡೆಯುತ್ತದೆ. ಈ ದೇಗುಲದ ಗರ್ಭಗುಡಿಯಲ್ಲಿರುವ ಶಿವ ಲಿಂಗದ ಮೇಲೆ ಸೂರ್ಯ ನ ಪ್ರಥಮ ರಶ್ಮಿ ಸ್ಪರ್ಶ ಮಾಡುತ್ತದೆ. ಈ ದೃಶ್ಯ ನಯನ ಮನೋಹರವಾಗಿದ್ದು ಈ ದೃಶ್ಯ ನೋಡಲು ನೂರಾರು ಭಕ್ತರು ಈ ದೇಗುಲಕ್ಕೆ ಮುಂಜಾನೆಯೇ ಆಗಮಿಸಿ ಈ ವಿಸ್ಮಯದ ದೃಶ್ಯ ನೋಡಿ ಕಣ್ತುಂಬಿಕೊಂಡರು. ಈ ಬಾರಿಯೂ ಕೂಡ ಚಂದ್ರವನ ಆಶ್ರ ಮದ ಈ ದೇಗುಲದಲ್ಲಿ ಜರುಗುವ ಈ ವಿಸ್ಮಯ ನೋಡಲು ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಇದನ್ನು ಓದಿ: makara sankranti: ಮೋಡದ ಮರೆಯಲ್ಲಿ ಗವಿಗಂಗಾಧರ ಸ್ಮರ್ಶಿಸಿದ ಸೂರ್ಯ ರಶ್ಮಿ
ಇನ್ನು ದಕ್ಷಿಣ ಕಾವೇರಿ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಶಿವ ದೇಗುಲದ ಗರ್ಭಗುಡಿಯಲ್ಲಿ ನೆಲೆಸಿರುವ ಈ ಶಿವಲಿಂಗ ಕಾಶಿಯಿಂದ ತರಲಾಗಿದ್ದು, ಸ್ಚತಃ ಕಣ್ವ ಋಷಿಗಳು ಈ ಶಿವಲಿಂಗ ಸ್ಥಾಪಿಸಿದರೆಂಬ ಐತಿಹ್ಯ ಇದೆ. ಅಂದಿನಿಂದ ಇಂದಿನವರೆಗೂ ಈ ದೇಗುಲದಲ್ಲಿ ಈ ವಿಸ್ಮಯ ನಡೆಯುತ್ತಿದೆ. ಸೂರ್ಯ ನ ರಶ್ಮಿಯೂ ಪ್ರತಿ ವರ್ಷ ಇಲ್ಲಿನ ಶಿವಲಿಂಗದ ಮೇಲೆ ಬೀಳುತ್ತಿದೆ. ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಆರಂಭಿಸುವ ವೇಳೆ ಈ ವಿಸ್ಮಯ ಜರುಗುತ್ತಲಿದ್ದು, ಭಕ್ತರನ್ನು ಮತ್ತಷ್ಟು ವಿಸ್ಮಯಗೊಳಿಸುತ್ತಿದೆ. ಈ ಆಶ್ರಮದ ಪೀಠಾಧ್ಯಕ್ಷರಾದ ತ್ರಿನೇಂತ್ರ ಮಹಂತ ಮಹಾ ಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಸಂಕ್ರಾತಿಯ ಪೂಜಾ ಕೈಂಕರ್ಯಗಳು ನಡೆದವು. ದೇವರ ದರ್ಶನ ನೋಡಲು ಬಂದಿದ್ದ ಭಕ್ತರು ಸೂರ್ಯ ರಶ್ಮಿಯ ವಿಸ್ಮಯ ಕಣ್ತುಂಬಿಕೊಂಡ ಬಳಿಕ ಭಕ್ತರಿಗೆ ಸ್ವಾಮೀಜಿ ಎಳ್ಳು ಬೆಲ್ಲ ನೀಡಿ ಆಶೀರ್ವದಿಸಿದರು. ಬಳಿಕ ಗೋಪೂಜೆ ನೆರೆವೇರಿಸಿ ಗೋಮಾತೆಗೆ ಪ್ರಸಾದ ಅರ್ಪಿಸಿ ಈ ಬಾರಿ ಇಡೀ ವಿಶ್ವದ ಸಕಲರನ್ನು ಕೋವಿಡ್ ಮಹಾಮಾರಿಯಿಂದ ರಕ್ಷಣೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿರುವುದಾಗಿ ಮಠದ ಸ್ವಾಮೀಜಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ