ಬೆಳಗಾವಿಗೆ ಶಿಫ್ಟ್ ಆಗಬೇಕಿದ್ದ ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕೆ ಇಲಾಖೆಯಲ್ಲಿ ವಿಲೀನಕ್ಕೆ ಸರ್ಕಾರ ಯತ್ನ; ಕಬ್ಬು ಬೆಳಗಾರರ ಆಕ್ರೋಶ..!

ಸಂಪುಟ ಉಪ ಸಮಿತಿ ಪ್ರಸ್ತಾವ ಹಿನ್ನೆಲೆಯಲ್ಲಿ ಕಚೇರಿಯನ್ನು ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಮುಂದುವರೆಸಬೇಕು ಎಂದು ಸಚಿವ ಶಿವರಾಮ್ ಹೆಬ್ಬಾರ್ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ

ಸಚಿವ ಶಿವರಾಮ್​​ ಹೆಬ್ಬಾರ್​ ಜೊತೆ ಚರ್ಚಿಸುತ್ತಿರುವ ಕಬ್ಬು ಬೆಳೆಗಾರರು

ಸಚಿವ ಶಿವರಾಮ್​​ ಹೆಬ್ಬಾರ್​ ಜೊತೆ ಚರ್ಚಿಸುತ್ತಿರುವ ಕಬ್ಬು ಬೆಳೆಗಾರರು

  • Share this:
ಬೆಳಗಾವಿ(ಜೂ.22): ಬೆಳಗಾವಿ ಸುವರ್ಣ ಸೌಧಕ್ಕೆ ಶಿಫ್ಟ್ ಆಗಬೇಕಿದ್ದ ಕಚೇರಿಯನ್ನು ಬೇರೊಂದು ಇಲಾಖೆ ಜತೆಗೆ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಇದು ಬೆಳಗಾವಿ ಕಬ್ಬು ಬೆಳಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಸಚಿವರ ಕಾರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದರು.

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಜತೆಗೆ ಈ ಭಾಗ ರೈತರಿಗೆ ಅನಕೂಲಕವಾಗುವ ದೃಷ್ಠಿಯಿಂದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಾನಲಯದ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿ ಶಿಫ್ಟ್ ಮಾಡಬೇಕು ಎನ್ನುವ ಆಗ್ರಹವನ್ನು ರೈತರ ಮಾಡಿದ್ದರು. ಇದಕ್ಕೆ ಸ್ಪಂಧಿಸಿದ್ದ ಸರ್ಕಾರ ಕಚೇರಿಯನ್ನು ಬೆಳಗಾವಿ ಶಿಫ್ಟ್ ಮಾಡುವ ಬಗ್ಗೆ ನಿರ್ಣಾಯ ಕೈಗೊಂಡಿತ್ತು.

ಬೆಳಗಾವಿಗೆ ಸಕ್ಕರೆ ನಿರ್ದೇಶನಾಲಯ ಕಚೇರಿ ಶಿಫ್ಟ್ ಆಗುವ ಮೊದಲೇ ಸರ್ಕಾರ ಮತ್ತೊಂದು ನಿರ್ಧಾರವನ್ನು ಮಾಡಿದೆ. ಇದು ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳಗಾರರ ಆಕ್ರೊಶಕ್ಕೆ ಕಾರಣವಾಗಿದೆ. ಸಕ್ಕರೆ ನಿರ್ದೇಶನಾಲಯದಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ. ಹೆಚ್ಚುವರಿ ಹುದ್ದೆಗಳನ್ನು ರದ್ದು ಮಾಡಿ ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯೊಂದಿಗೆ ವೀಲಿನಕ್ಕೆ ಸಂಫುಟ ಉಪ ಸಮಿತಿ ಪ್ರವಾಸವನೆ ಸಲ್ಲಿಸಿದೆ.

ಸಂಪುಟ ಉಪ ಸಮಿತಿ ಪ್ರಸ್ತಾವ ಹಿನ್ನೆಲೆಯಲ್ಲಿ ಕಚೇರಿಯನ್ನು ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಮುಂದುವರೆಸಬೇಕು ಎಂದು ಸಚಿವ ಶಿವರಾಮ್ ಹೆಬ್ಬಾರ್ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರಿಂದ ಬೆಳಗಾವಿಗೆ ಕಚೇರಿ ಶಿಫ್ಟ್ ಆಗುವ ಯತ್ನಕ್ಕೆ ತಡೆ ಬಿದ್ದಂತೆ ಆಗಿದೆ.

ಇದನ್ನೂ ಓದಿ : ಕೆರೆಗೆ ಕಾರು ಉರುಳಿದರೂ ಪವಾಡ ಸದೃಶವಾಗಿ ಯುವತಿ ಪಾರು ; ಜೀವದಾನ ಮಾಡಿದ ಬಾಲಕಿಯ ವೀಡಿಯೋ ವೈರಲ್

ಇದು ಬೆಳಗಾವಿಯ ಕಬ್ಬು ಬೆಳಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಗೆ ರೈತರು ಮುತ್ತಿಗೆ ಹಾಕಿದರು. ಈ ವೇಳೆಯಲ್ಲಿ ಸಚಿವರು ನೀಡಿದ ಉತ್ತರದಿಂದ ರೈತರು ಸಮಾಧನವಾಗಲಿಲ್ಲ. ಸಚಿವರು ಏನನ್ನು ಸ್ಪಷ್ವವಾಗಿಲ್ಲ ಎಂದು ರೈತರ  ಮತ್ತೆ ಧರಣಿ ಮಾಡಿದರು.

ಸಕ್ಕರೆ ನಿರ್ದೇಶನಾಲಯ ವಿಲೀನಿದ ಹಿಂದೆ ರಾಜಕೀಯ ಹುನ್ನಾರವಾಗಿದೆ. ಬೆಳಗಾವಿಯಲ್ಲಿ ಅತಿ ಹೆಚ್ಚು ಕಬ್ಬು ಬೆಳಗಾರರು ಇದ್ದು, ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತವೆ. ಸರ್ಕಾರ ಅವಶ್ಯಕವಾಗಿ ಗೊಂದಲ ಮಾಡುತ್ತಿದ್ದಾರೆ. ಸಕ್ಕರೆ ನಿರ್ದೇಶನಾಲಯ ಯಾವುದೇ ಇಲಾಖೆಯ ಜತೆಗೆ ವಿಲೀನ ಮಾಡಿದರು ಕಚೇರಿ ಬೆಳಗಾವಿಯಲ್ಲಿ ಇರಬೇಕು ಎಂದು ರೈತ ಮುಖಂಡ ಸಿದ್ದಗೌಡ ಮೊದಗಿ ಹೇಳಿದರು.
First published: