HOME » NEWS » District » SUGAR FACTORIES THAT DO NOT RESPOND TO FARMERS HARDSHIP MAK

ರೈತರ ಸಂಕಷ್ಟಕ್ಕೆ ಸ್ಪಂದಿಸದ ಸಕ್ಕರೆ ಕಾರ್ಖಾನೆಗಳು; ಬೆಳಗಾವಿಯಲ್ಲಿ ಕೋಟ್ಯಾಂತರ ರೂಪಾಯಿ ಬಾಕಿ..!

2019ರ ಡಿಸೆಂಬರ್, 2020ರ ಜನವರಿ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ್ದ ರೈತರಿಗೆ ಇನ್ನೂ ಬಾಕಿ ಹಣ ಪೂರೈಕೆಯಾಗಿಲ್ಲ. ಈ ಬಗ್ಗೆ ರೈತರು ಅನೇಕ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ, ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ.

news18-kannada
Updated:June 28, 2020, 7:17 AM IST
ರೈತರ ಸಂಕಷ್ಟಕ್ಕೆ ಸ್ಪಂದಿಸದ ಸಕ್ಕರೆ ಕಾರ್ಖಾನೆಗಳು; ಬೆಳಗಾವಿಯಲ್ಲಿ ಕೋಟ್ಯಾಂತರ ರೂಪಾಯಿ ಬಾಕಿ..!
ಬೆಳಗಾವಿ ಸಕ್ಕರೆ ಕಾರ್ಖಾನೆ.
  • Share this:
ಬೆಳಗಾವಿ; ಕೊರೋನಾ ವೈರಸ್ ಮಹಾಮಾರಿಯಿಂದ ಇಡೀ ದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರೈತ ಸಮುದಾಯದ ಮೇಲೆ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆಯಾಗಿದೆ. ಆದರೆ, ಬೆಳಗಾವಿಯಲ್ಲಿ ರೈತರ ಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಬೇಕಿದ್ದ ಸಕ್ಕರೆ ಕಾರ್ಖಾನೆಗಳು ಬಾಕಿ ಹಣ ಉಳಿಸಿಕೊಂಡಿರುವುದು ರೈತರ ಕಷ್ಟದ ಮೇಲೆ ಬರೆ ಎಳೆದಂತಾಗಿದೆ.

ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸಕ್ಕರೆ ಕಾರ್ಖಾನೆಗಳು ಸುಮಾರು 144 ಕೋಟಿ ರೂಪಾಯಿ ರೈತರ ಹಣ ಬಾಕಿ ಉಳಿಕೊಂಡಿವೆ ಎನ್ನಲಾಗುತ್ತಿದೆ.

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತವೆ. ಬಹತೇಕ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳ ಮಾಲೀಕತ್ವದಲ್ಲಿಯೇ ನಡೆಯುತ್ತಿವೆ. ಸಕ್ಕರೆ ಲಾಭಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಎಂದರೆ ತಪ್ಪಾಗಲಾರದು.

ಲಾಕ್‌ಡೌನ್ ನಿಂದ ರೈತರ ಸಮೂಹದ ಮೇಲೆ ಪರಿಣಾಮ ಬೀರಿದಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಕಾರ್ಖಾನೆಯ ಮಾಲೀಕರು ರೈತರ ಬಾಕಿ ಹಣ ಉಳಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 144 ಕೋಟಿ ರೂಪಾಯಿ ರೈತರ ಹಣ ಬಾಕಿ ಉಳಿದಿದೆ. ರೈತರು ಕಬ್ಬನ್ನು ಕಾರ್ಖಾನೆಗೆ ಪೂರೈಸಿದ 14 ದಿನದಲ್ಲಿಯೇ ಹಣ ಪಾವತಿಸಬೇಕು ಎನ್ನುವ ನಿಯಮವನ್ನು ಯಾವೊಂದು ಕಾರ್ಖಾನೆಗಳು ಪಾಲಿಸಲ್ಲ ಎಂಬ ಆರೋಪ ಸಹ ಇದೆ.

2019ರ ಡಿಸೆಂಬರ್, 2020ರ ಜನವರಿ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ್ದ ರೈತರಿಗೆ ಇನ್ನೂ ಬಾಕಿ ಹಣ ಪೂರೈಕೆಯಾಗಿಲ್ಲ. ಈ ಬಗ್ಗೆ ರೈತರು ಅನೇಕ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ, ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಬಾಕಿ ಹಣ ನೀಡುವಲ್ಲಿ ವಿಳಂಬ ಮಾಡಿದ ಕಾರ್ಖಾನೆಗಳ ಮಾಲೀಕರು ಇದಕ್ಕೆ ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ.

ಸದ್ಯ 144 ಕೋಟಿ ರೂಪಾಯಿ ಹಣ ಬೆಳಗಾವಿ ಜಿಲ್ಲೆಯಲ್ಲಿ ರೈತರ ಬಾಕಿ ಹಣ ಉಳಿದಿದೆ.  ಲೈಲಾ ಶುಗರ್ಸ್- 6.22 ಕೋಟಿ ರೂಪಾಯಿ, ಘಟಪ್ರಭಾ ಶುಗರ್ಸ್ ಗೋಕಾಕ್- 8.37 ಕೋಟಿ ರೂ, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಕೇಶ್ವರ- 9.74 ಕೋಟಿ ರೂ, ರಾಣಿ ಶುಗರ್ಸ್ ಎಂ  ಕೆ ಹುಬ್ಬಳ್ಳಿ- 22.53 ಕೋಟಿ, ರೇಣುಕಾ ಶುಗರ್ಸ್ ಅಥಣಿ- 17.95 ಕೋಟಿ ರೂ. ಸೋಮೇಶ್ವರ ಶುಗರ್ಸ್ ಬೈಲಹೊಂಗಲ- 9.87 ಕೋಟಿ ರೂ, ಉಗಾರ ಶುಗರ್ಸ್- 39.65 ಕೋ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದೆ.

ರಾಜ್ಯದ ಜವಳಿ ಸಚಿವ ಶ್ರೀಮಂತ ಪಾಟೀಲ್ ಮಾಲಿಕತ್ವದ ಅಥಣಿ ಶುಗರ್ಸ್ ಕೆಂಪವಾಡ- 24.41 ಕೋಟಿ ರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒಡೆತನದ ಸತೀಶ ಶುಗರ್ಸ್ ಗೋಕಾಕ್- 21.04 ಕೋಟಿ ರೂ, ಬೆಳಗಾವಿ ಶುಗರ್ಸ್ ಹುದಲಿ- 8.68 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿವೆ. ರೈತರ ಪರ ಇರಬೇಕಿದ್ದ ರಾಜಕಾರಣಿಗಳೇ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿರುವುದು ಸಾಮಾನ್ಯವಾಗಿ ಈ ಭಾಗದ ಕಬ್ಬು ಬೆಳೆಗಾರರ ಆಕ್ರೋಶಕ್ಕೂ ಕಾರಣವಾಗಿದೆ.ಇದನ್ನೂ ಓದಿ : Health Bulletien: ರಾಜ್ಯದಲ್ಲಿ ಕೊರೋನಾ ಬಾಂಬ್; ಒಂದೇ ದಿನ 918 ಪಾಸಿಟಿವ್ ಪ್ರಕರಣ, 11 ಸಾವು!
Youtube Video

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು ತಮ್ಮ ನಿತ್ಯದ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಬಾಕಿ ಹಣವನ್ನು ಸಕ್ಕರೆ ಆಯುಕ್ತರು ಬೆಳಗಾವಿ ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಕೊಡಿಸಬೇಕು ಎಂದು ರೈತರ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮತ್ತೆ ರೈತರು ಬೀದಿಗೆ ಇಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
First published: June 28, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories