ಕೆಎಲ್​ಇ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಹೃದಯ ಕಸಿ ಚಿಕಿತ್ಸೆ; ಕನ್ನಡಿಗನಿಗೆ ಮಹಾರಾಷ್ಟ್ರ ವ್ಯಕ್ತಿಯ ಹೃದಯ ಮರುಜೋಡಣೆ!

 ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಗಡಿ ಗಲಾಟೆ ಮಧ್ಯೆಯೂ ಕನ್ನಡಿಗನ ದೇಹದಲ್ಲಿ ಮರಾಠಿಗ ಹೃದಯ ಮಿಡಿಯುತ್ತಿದೆ. ದೇಹ ದಾನ, ನೇತ್ರ ದಾನದಂತೆ ಹೃದಯ ದಾನಕ್ಕೂ ಜನರು ಸ್ವಯಂಪ್ರೇರಣೆಯಾಗಿ ಮುಂದೆ ಬರಬೇಕಿದೆ.

ವೈದ್ಯರು ಮತ್ತು ಚಿಕಿತ್ಸೆಗೆ ಒಳಗಾದ ಬಾಲಕ

ವೈದ್ಯರು ಮತ್ತು ಚಿಕಿತ್ಸೆಗೆ ಒಳಗಾದ ಬಾಲಕ

  • Share this:
ಬೆಳಗಾವಿ (ಮಾರ್ಚ್ 23); ಕನ್ನಡಿಗನಿಗೆ ಮಹಾರಾಷ್ಟ್ರ ವ್ಯಕ್ತಿಯ ಹೃದಯವನ್ನು ಯಶಸ್ವಿಯಾಗಿ ಮರುಜೋಡಣೆ ಮಾಡಲಾಗಿದೆ. ಹೃದಯ ಕಸಿಗೆ ಒಳಗಾದ 17 ವರ್ಷದ ಬಾಲಕ ಸದ್ಯ ಆರೋಗ್ಯವಾಗಿದ್ದಾನೆ. ಬೆಳಗಾವಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ದೇಹ ದಾನ, ನೇತ್ರ ದಾನದಂತೆ ಹೃದಯ ದಾನ ಮಾಡುವ ಮೂಲಕ  ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ರೋಗಿಗಳ ಜೀವ ಉಳಿಸಲು ಜನರು ಮುಂದೆ ಬರಬೇಕಿದೆ.

ಜೀವ ಉಳಿಸಲು ದೇಹದ ಅಂಗಾಗಳ ದಾನವೂ ಮುಖ್ಯವಾಗಿದೆ. ಸದಾ ಬೆಳಗಾವಿಯಲ್ಲಿ ಗಡಿ ಗಲಾಟೆ ಸದ್ದು ಮಾಡುತ್ತದೆ. ಆದರೆ ಇವತ್ತು ಕನ್ನಡಿಗರು- ಮರಾಠಿಗರ ಮಧ್ಯೆ ಭಾವೈಕ್ಯತೆ ಬಾಂಧವ್ಯ ಗಟ್ಟಿಗೊಳಿಸುವ ಕಾರ್ಯಕ್ಕೆ ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಸಾಕ್ಷಿಯಾಗಿದೆ. ಬೆಳಗಾವಿಯ KLE ಸಂಸ್ಥೆ ಆಸ್ಪತ್ರೆ ವೈದ್ಯಕೀಯ ತಂಡವೂ ಎರಡನೇ ಬಾರಿಗೆ ಹೃದಯ ಕಸಿ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಿದ್ದಾರೆ. ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ  17 ವರ್ಷದ ಬಾಲಕ ಬದುಕುಳಿದಿದ್ದು, ಆರೋಗ್ಯದಿಂದಿದ್ದಾನೆ.

ಬಾಲಕನಿಗೆ ಹೃದಯ ಕಸಿ ಚಿಕಿತ್ಸೆಯಿಂದ ಮಾತ್ರ ಬದುಕಿಸಲು ಸಾಧ್ಯವಿತ್ತು. ಇದನ್ನು ಅರಿತ ವೈದ್ಯಕೀಯ ತಂಡವು ಮಹಾರಾಷ್ಟ್ರ ಮೂಲಕ ವ್ಯಕ್ತಿ ಹೃದಯವನ್ನು ಕರ್ನಾಟಕದ ಯುವಕನಿಗೆ ಮರುಜೋಡಣೆ ಮಾಡಲು ನಿರ್ಧರಿಸಿದ್ದರು. ಅದರಂತೆ ಹೃದಯ ದಾನ ಮಾಡಲು ಆ ಮಹಾರಾಷ್ಟ್ರ ಮೂಲದ ವ್ಯಕ್ತಿಯ ಕುಟುಂಬ ಮುಂದೆ ಬಂದಿತು. ತಕ್ಷಣವೇ ತಡ ಮಾಡದೇ ವೈದ್ಯಕೀಯ ತಂಡವು 17 ವರ್ಷದ ಯುವಕನಿಗೆ ಯಶಸ್ವಿಯಾಗಿ ಹೃದಯವನ್ನು ಮರುಜೋಡಣೆ ಮಾಡಿ, ಆತನ ಪ್ರಾಣವನ್ನು ಉಳಿದಿದ್ದಾರೆ.

ಇದನ್ನು ಓದಿ: ಮೈಸೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 13 ಮಂದಿಯ ಬಂಧನ: ಬೈಕ್ ಸವಾರನ ಸಾವು ಖಂಡಿಸಿ ಪ್ರತಿಭಟನೆ

ಬೆಳಗಾವಿಯ ಕೆ ಎಲ್ ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಯುವಕ ಫೆಬ್ರವರಿ 8 ರಂದ ದಾಖಲಾಗಿದ್ದನು.  ಫೆಬ್ರವರಿ 26 ರಂದು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ಅಂದರೆ ಸತತ 6 ಗಂಟೆಗಳ ಕಾಲ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಅಂದ್ರೆ 2018ರಲ್ಲಿ ಮೊದಲ ಹೃದಯ ಕಸಿಯನ್ನ ಆಸ್ಪತ್ರೆ ವೈದ್ಯಕೀಯ ತಂಡ ಯಶಸ್ವಿಯಾಗಿ ಕೈಗೊಂಡಿತ್ತು. ಹೃದಯ ಕಸಿ ಒಳಗಾದ ಯುವಕ ಡಯಲೇಟೆಡ್ ಕಾರ್ಡಿಯೋಮಪತಿ ಎಂಬ ಹೃದಯ ಕಾಯಿಲೆಯಿಂದ ಬಳಲುತ್ತಿದ್ದನು. ಇದರಿಂದ ಹೃದಯ ಅಶಕ್ತವಾಗಿ ರಕ್ತ ಪಂಪ್ ಮಾಡುತ್ತಿರಲಿಲ್ಲ. ಇದರ ಪರಿಣಾಮವಾಗಿ ಉಸಿರಾಟದ ತೊಂದರೆಯಾಗಿದ್ದರಿಂದ ಕೃತಕ ಆಮ್ಲಜನಕ ಸಹಾಯ ಪಡೆದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದನು. ಸದ್ಯ ಹೃದಯ ತಜ್ಞ ಡಾ.ವೀರೇಶ ಮಾನ್ವಿ, ಮುಖ್ಯಸ್ತ್ರ ಚಿಕಿತ್ಸಕ ಡಾ.ರಿಚರ್ಡ್ ಸಾಲ್ಡಾನಾ ತಂಡವು ಯಶಸ್ವಿಯಾಗಿ ಹೃದಯ ಕಸಿ ಮಾಡುವ ಮೂಲಕ ಯುವಕನಿಗೆ ಹೊಸ ಜೀವನವನ್ನ ನೀಡಿದ್ದಾರೆ.

ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಗಡಿ ಗಲಾಟೆ ಮಧ್ಯೆಯೂ ಕನ್ನಡಿಗನ ದೇಹದಲ್ಲಿ ಮರಾಠಿಗ ಹೃದಯ ಮಿಡಿಯುತ್ತಿದೆ. ದೇಹ ದಾನ, ನೇತ್ರ ದಾನದಂತೆ ಹೃದಯ ದಾನಕ್ಕೂ ಜನರು ಸ್ವಯಂಪ್ರೇರಣೆಯಾಗಿ ಮುಂದೆ ಬರಬೇಕಿದೆ.
Published by:HR Ramesh
First published: