ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾಪೀಡಿತ ಗರ್ಭಿಣಿಗೆ ಯಶಸ್ವಿ ಹೆರಿಗೆ; ಮಗುವಿಗೆ ಸೋಂಕಿನ ಶಂಕೆ?

ನವಜಾತ ಶಿಶು 2.7 ಕೆ.ಜಿ ತೂಕ ಇದ್ದರೂ ಶಿಶುವಿಗೆ ಉಸಿರಾಟದ ತೊಂದರೆ ಕಂಡು ಬಂದಿರುವುದರಿಂದ ಕೋವಿಡ್-19 ಟೆಸ್ಟ್​ಗೆ ಒಳಪಡಿಸಲಾಗಿದೆ ಎಂದು ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಪಿ ಎಸ್ ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ.

news18-kannada
Updated:July 4, 2020, 8:24 PM IST
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾಪೀಡಿತ ಗರ್ಭಿಣಿಗೆ ಯಶಸ್ವಿ ಹೆರಿಗೆ; ಮಗುವಿಗೆ ಸೋಂಕಿನ ಶಂಕೆ?
ಪ್ರಾತಿನಿಧಿಕ ಚಿತ್ರ.
  • Share this:
ಗದಗ : ಗದಗ ಜಿಲ್ಲೆಯಲ್ಲಿ ಈಗ ತಾನೇ ಹುಟ್ಟಿದ ಮಗುವಿಗೆ ಸಹ ಕೊರೋನಾ ಸೋಂಕಿನ ಶಂಕೆ ವ್ಯಕ್ತವಾಗಿದೆ. ಕೊರೋನಾ ಸೋ‌ಂಕಿತ ಮಹಿಳೆಗೆ ಹೆರಿಗೆ ನಂತರ ಮಗುವಿಗೆ ಸೋಂಕು ತಗಲಿರುವ ಶಂಕೆಯ ಮೇರೆಗೆ ಟೆಸ್ಟ್ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ತಾಯಿಯ ಗರ್ಭದಿಂದ  ಹೊರಗೆ ಬಂದು ನವಜಾತ ಶಿಶುವಿನ ಮಾರಕ ಕೊರೋನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿಯೇ ನವಜಾತ ಶಿಶುವಿನ ದ್ರವವನ್ನು ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ 23 ವರ್ಷದ ಪಿ-18282 ತುಂಬು ಗರ್ಭಿಣಿ ಗದಗನ ಜಿಮ್ಸ್ ಆಸ್ಪತ್ರೆ ದಾಖಲಾಗಿದ್ದಳು. ನಿನ್ನೆ ಗರ್ಭಿಣಿ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಇಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸೀಜರಿನ್ ಮಾಡುವ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಲಾಯಿತು.

ಇದನ್ನು ಓದಿ: ರಾಜ್ಯದಲ್ಲಿ ಒಂದೇ ದಿನ 42 ಸಾವು; 1,839 ಪ್ರಕರಣ ದಾಖಲು

ಗದಗ ಜಿಮ್ಸ್ ವೈದ್ಯರಾದ ಡಾ: ಶಿವನಗೌಡ, ಡಾ: ಶೃತಿ ಬಾವಿ, ಡಾ: ಅಜಯ ಬಸರೀಗಿಡದ ನೇತೃತ್ವದಲ್ಲಿ ಹೆರಿಗೆ ಮಾಡಗಿಯಿತು. ನವಜಾತ ಶಿಶು 2.7 ಕೆ.ಜಿ ತೂಕ ಇದ್ದರೂ ಶಿಶುವಿಗೆ ಉಸಿರಾಟದ ತೊಂದರೆ ಕಂಡು ಬಂದಿರುವುದರಿಂದ ಕೋವಿಡ್-19 ಟೆಸ್ಟ್​ಗೆ ಒಳಪಡಿಸಲಾಗಿದೆ ಎಂದು ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಪಿ ಎಸ್ ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ.
Published by: HR Ramesh
First published: July 4, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading