Udupi: ಹಿಜಾಬ್​ಗೆ ಟಕ್ಕರ್​ ಕೊಡಲು ಕೇಸರಿ ಶಾಲು, ಉಡುಪಿಯಲ್ಲಿ ಸಾರ್ಫ್ಕ್​ ಹಾಕಿ ಕಾಲೇಜು ವಿದ್ಯಾರ್ಥಿಗಳ ಮೆರವಣಿಗೆ

ಕಾಲೇಜು ವಿದ್ಯಾರ್ಥಿಗಳಿ ತಮ್ಮ ಕಾಲೇಜು ಸಮವಸ್ತ್ರದ ಮೇಲೆ ಸ್ಕಾರ್ಫ್‌ಗಳನ್ನು ಧರಿಸಿ ಮೆರವಣಿಗೆ ನಡೆಸಿದ್ರು. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ರು.

ಕೇಸರಿ ಶಾಲು ಹಾಕಿ ಮೆರವಣಿಗೆ

ಕೇಸರಿ ಶಾಲು ಹಾಕಿ ಮೆರವಣಿಗೆ

  • Share this:
ಉಡುಪಿ (ಫೆ.5):  ಕುಂದಾಪುರದ ಹಿಜಾಬ್ (Hijab) - ಕೇಸರಿ ಶಾಲು (Saffron Scarves) ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಈ ನಡುವೆ ಉಡುಪಿಯ ಕುಂದಾಪುರದಲ್ಲಿ ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ದಾರೆ. ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ವಿದ್ಯಾರ್ಥಿಗಳು (Students) ಕೇಸರಿ ಶಾಲು ಧರಿಸಿ ಪ್ರತಿಭಟನೆ (Protest) ನಡೆಸಿದರು. ಹಿಂದೂ ವಿದ್ಯಾರ್ಥಿನಿಯರೂ ಸಹ ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜಿಗೆ ಬಂದರು. ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕುಂದಾಪುರದ ಕಾಲೇಜಿನ ವಿದ್ಯಾರ್ಥಿನಿಯರೂ ಮೆರವಣಿಗೆ ನಡೆಸಿದರು. ಹಿಜಾಬ್ ಕಳಚುವ ತನಕ ಕೇಸರಿ ಶಾಲು ತೊಡುತ್ತೇವೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಬೇಡ ಎಂದು ಜೈ ಶ್ರೀರಾಮ್, ಹರಹರ ಮಹಾದೇವ ಘೋಷಣೆ ಕೂಗಿದರು.

ಉಡುಪಿಯಲ್ಲಿ ಕೇಸರಿ ಶಾಲು ಧರಿಸಿ ಮೆರವಣಿಗೆ

ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಕರ್ನಾಟಕದಲ್ಲಿ ಕೆಲವು ಮುಸ್ಲಿಂ ಬಾಲಕಿಯರ ತೀವ್ರ ಪ್ರತಿಭಟನೆ ನಡುಸುತ್ತಿದ್ದಾರೆ. ಇದೀಗ ವಿದ್ಯಾರ್ಥಿಗಳ ಗುಂಪು ಮತ್ತೆ ಕೇಸರಿ ಸ್ಕಾರ್ಫ್ ಧರಿಸಿ ತಮ್ಮ ಕಾಲೇಜಿಗೆ ಮೆರವಣಿಗೆ ನಡೆಸಿದರು. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕಾಲೇಜು ವಿದ್ಯಾರ್ಥಿಗಳಿ ತಮ್ಮ ಕಾಲೇಜು ಸಮವಸ್ತ್ರದ ಮೇಲೆ ಸ್ಕಾರ್ಫ್‌ಗಳನ್ನು ಧರಿಸಿ ಮೆರವಣಿಗೆ ನಡೆಸಿದ್ರು. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ರು.

ಚಿಕ್ಕಮಗಳೂರಲ್ಲೂ ಕೇಸರಿ ಶಾಲು ಧರಿಸಿ ಪ್ರತಿಭಟನೆ

ಚಿಕ್ಕಮಗಳೂರಲ್ಲೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರಿನ IDSG ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ರು. ಹಿಜಬ್​ ಧರಿಸಲು ಅವಕಾಶ ಕೊಡಬಾರದು ಅಂತ ಆಗ್ರಹಿಸಿದ್ರು. ಜಾತಿ, ಧರ್ಮ ಬದಿಗಿಟ್ಟು ಕಾಲೇಜಿನಲ್ಲಿ ಎಲ್ಲರೂ ಒಂದೇ ರೀತಿ ಇದ್ದು ಪಾಠ ಕಲಿಯಬೇಕು. ಹೀಗಾಗಿ ಯಾರಿಗೂ ಹಿಜಬ್​ ಹಾಕಲು ಅವಕಾಶ ಕೊಡದಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Hijab ಹಾಕೋದಾದ್ರೆ ಮದರಸಾಗೆ ಹೋಗಿ; ಸಿದ್ದರಾಮಯ್ಯ ಅಲ್ಲ ಸಿದ್ದರಹೀಮ್ ಅಯ್ಯ: MP Pratap Simha ಹೇಳಿಕೆ

ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಯ್ತು

ಹಿಜಬ್​​ ವಿಚಾರಕ್ಕೆ ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗ್ತಿದೆ. ಈ ಘಟನೆ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳ ಶಿಕ್ಷಣ ಹಾದಿಯಲ್ಲಿ ಹಿಜಾಬ್​ ಅನ್ನು ತರುವ ಮೂಲಕ, ನಾವು ದೇಶದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ತಾಯಿ ಸರಸ್ವತಿ ಎಲ್ಲರಿಗೂ ಜ್ಞಾನ ನೀಡಲಿ. ಆಕೆ ಯಾರಿಗೂ ಭೇದ-ಭಾವ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರ ತಿರುಗೇಟು

ಇನ್ನು ರಾಹುಲ್​​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್​ ನಾಯಕರು ಶಿಕ್ಷಣವನ್ನು ಕೋಮುವಾದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ ಮಾಲೀಕರಾದ ರಾಹುಲ್ ಗಾಂಧಿ ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶಿಕ್ಷಣ ಪಡೆಯಲು ಹಿಜಾಬ್ ಅತ್ಯಗತ್ಯವಾಗಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸುವುದಿಲ್ಲ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಮಾತನಾಡೋರು ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ: Sunil Kumar

ಏನಿದು ಹಿಜಾಬ್​ ವಿವಾದ?

ಕುಂದಾಪುರದ ಕಾಲೇಜು ಒಂದರ ಸುಮಾರು 40 ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದಕ್ಕೆ ಅವರಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿಲಾಗಿದೆ. ಆದರೆ, ವಿದ್ಯಾರ್ಥಿಗಳು ನಾವು ಈ ಹಿಂದಿನಿಂದಲೂ ಹಿಜಾಬ್​ ಧರಿಸಿ ಬರುತ್ತಿದ್ದೂ, ಇದೀಗ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ಅವಕಾಶ ನೀಡುವಂತೆ ರೇಶಮ್ ಎಂಬ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಭಾರತೀಯ ಸಂವಿಧಾನದ 14 ಮತ್ತು 25 ನೇ ವಿಧಿ ಅಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
Published by:Pavana HS
First published: