HOME » NEWS » District » STUDENTS FROM THIS REMOTE TRIBAL VILLAGE IN UDUPI DISTRICT OF KARNATAKA SPEAK ENGLISH THANKS TO THEIR TEACHER THIMMAPPA WHO TEACHES THEM THROUGH PHONETICS SKTV STG

Spoken English: ಈ ಕನ್ನಡ ಶಾಲೆಯ ಎಲ್ಲಾ ಮಕ್ಕಳು ಇಂಗ್ಲಿಷ್ ಮಾತಾಡ್ತಾರೆ, ಆದ್ರೆ ಎಬಿಸಿಡಿ ಕಲಿತಿಲ್ಲ.. !

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕ ಮಕ್ಕಳು ಮುಂದೆ ಉನ್ನತ ವಿದ್ಯಾಭ್ಯಾಸ ಮಾಡುವಾಗಲೋ, ಕೆಲಸಕ್ಕೆ ಸೇರಿಕೊಂಡಾಗಲೋ ಇಂಗ್ಲಿಷ್​ನಲ್ಲಿ ಸಲೀಸಾಗಿ ಬರೆಯುತ್ತಾರೆ..ಆದ್ರೆ ಇಂಗ್ಲಿಷ್​ನಲ್ಲಿ ಸರಾಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆತ್ಮವಿಶ್ವಾಸದ ಜೊತೆಗೆ ಉಚ್ಛರಣೆ ಬಗ್ಗೆಯೂ ಅವರಿಗೆ ಕೀಳರಿಮೆ ಇರುತ್ತದೆ.. ಇದನ್ನು ಹೋಗಲಾಡಿಸೋಕೆ ತಿಮ್ಮಪ್ಪ ಮೇಷ್ಟ್ರ ಈ ಪ್ಲಾನ್ ಸಖತ್ ಸಕ್ಸಸ್ ಆಗಿದೆ..

Trending Desk
Updated:June 25, 2021, 12:38 PM IST
Spoken English: ಈ ಕನ್ನಡ ಶಾಲೆಯ ಎಲ್ಲಾ ಮಕ್ಕಳು ಇಂಗ್ಲಿಷ್ ಮಾತಾಡ್ತಾರೆ, ಆದ್ರೆ ಎಬಿಸಿಡಿ ಕಲಿತಿಲ್ಲ.. !
ಶಾಲೆಯ ಬೋರ್ಡ್
  • Share this:

English Speaking: ಭಾರತದಾದ್ಯಂತ ಇರುವ ಖಾಸಗಿ ಹಾಗೂ ಇಂಟರ್‌ನ್ಯಾಷನಲ್ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಪ್ರಾಯೋಗಾತ್ಮಕ ಕಲಿಕೆಗೆ ಒತ್ತು ನೀಡುತ್ತಿವೆ. ಕೇವಲ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಪ್ರಯೋಗಾತ್ಮಕ ಕಲಿಕೆ ಮತ್ತು ಕೈ ಕಲಿಕೆಗೆ ಒತ್ತು ನೀಡುತ್ತಿವೆ. ಇದೀಗ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದರ ಅಳವಡಿಕೆಗೆ ಪ್ರಾಶಸ್ತ್ಯ ನೀಡುತ್ತಿವೆ. ಆದರೆ ಈಗಾಗಲೇ ಹಲವು ಸರ್ಕಾರಿ ಶಾಲಾ ಶಿಕ್ಷಕರು ಈ ನೀತಿಯನ್ನು ಸುಮಾರು ವರ್ಷಗಳ ಹಿಂದೆಯೇ ಅಳವಡಿಸಿಕೊಂಡು ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಪುತ್ತೂರಿನ ಮಲೆತೋಡಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ತಿಮ್ಮಪ್ಪ ಕೊಡ್ಲಾಡಿ ಈಗಾಗಲೇ ಪ್ರಯೋಗಾತ್ಮಕ ಕಲಿಕೆ ಅಳವಡಿಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಇವರ ಈ ಶಾಲೆಯು ಈಗಾಗಲೇ ವಿಶಿಷ್ಟವಾದ ಕಲಿಕಾ ವಿಧಾನಗಳು, 10 ವರ್ಷಗಳ ಅವಧಿಯಲ್ಲಿ ಸ್ವತಃ ಅವರೇ ವಿನ್ಯಾಸಗೊಳಿಸಿದ ವಿವಿಧ ಕಲಿಕೆ ವಿಧಾನಗಳಿಂದ ಉತ್ತಮ ಹೆಸರು ಪಡೆದಿದೆ. ಇಲ್ಲಿನ ಹೆಚ್ಚಿನ ವಿಷಯಗಳಿಗೆ ಪ್ರಯೋಗಾತ್ಮಕ ಕಲಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದು, ಆದರೆ ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಕಾ ವಿಧಾನವನ್ನು ಇಷ್ಟಪಡುತ್ತಾರೆ.


ಇಂಗ್ಲೀಷ್ ಕಲಿಕೆಗೆ ಪ್ರಯೋಗಾತ್ಮಕ ಕಲಿಕೆ ಯಾಕೆ ಅಳವಡಿಸಿಕೊಂಡಿದ್ದೀರಾ ಎಂದು ಕೇಳಿದರೆ, ಸುಮಾರು ವಿದ್ಯಾರ್ಥಿಗಳು ಇಂಗ್ಲೀಷ್‍ಗೆ ಹೆದರಿ, ಇಂಗ್ಲೀಷ್ ಕಲಿಯುವುದು ಕಷ್ಟ ಎಂಬ ಪೂರ್ವಗ್ರಹಪೀಡಿತರಾಗಿ ಪ್ರೌಢಶಾಲೆ ಅಥವಾ ಕಾಲೇಜು ಹಂತದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಆದರೆ ನಾವು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಇಂಗ್ಲೀಷ್ ಅನ್ನು ಸರಿಯಾದ ರೀತಿಯಲ್ಲಿ ಕಲಿಸಲು ಪ್ರಯತ್ನಿಸಿದ್ದೇವೆಯೇ? ಇದೊಂದು ಗಂಭಿಕರ ವಿಷಯ. ಹಾಗಾಗಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಇಂಗ್ಲೀಷ್ ಕಲಿಸಬೇಕು, ವಿದ್ಯಾರ್ಥಿಗಳಿಗೆ ಬೇಸರ ಬರಬಾರದು ಎಂಬ ದೃಷ್ಟಿಯಿಂದ ಈ ಹಾದಿ ಆರಿಸಿಕೊಂಡೆ ಎಂದು ಉತ್ತರಿಸಿದರು.ಇದನ್ನೂ ಓದಿ: Kitchen Hacks: ಫ್ರಿಡ್ಜ್​​ನಲ್ಲಿ ಈ ಆಹಾರ ಪದಾರ್ಥಗಳನ್ನು ಇಡಬಾರದು..! ಯಾಕೆ ಗೊತ್ತಾ?

ತಿಮ್ಮಪ್ಪ ಅವರು ರಾತ್ರೋರಾತ್ರಿ ಈ ಮಾದರಿ ಕಲಿಕೆಯನ್ನು ರೂಪಿಸಲಿಲ್ಲ. ಇದನ್ನು ಅವರು ಶಿಕ್ಷಣ ಸಂಸ್ಥೆಗಳು ಅಥವಾ ಇತರೆ ಖಾಸಗಿ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ ಪ್ರಯೋಗಾತ್ಮಕ ಕಲಿಕೆ ಹಾಗೂ ಅದರ ಮಹತ್ವವನ್ನು ಅರಿತುಕೊಂಡರು. ನಂತರ ತಮ್ಮದೇ ಆಲೋಚನೆಯನ್ನು ಬೆರೆಸಿ ಇನ್ನಷ್ಟು ಹೊಸ ರೂಪ ನೀಡಿ ಈ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
students from this remote tribal village in udupi district of karnataka speak english thanks to their teacher thimmappa who teaches them through phonetics
ಶಿಕ್ಷಕ ತಿಮ್ಮಪ್ಪ

ನಾನು ಇಂಗ್ಲೀಷ್ ಕಲಿಕೆಯನ್ನು ವರ್ಣಮಾಲೆಯಿಂದ ಪ್ರಾರಂಭಿಸುವುದಿಲ್ಲ ಎಂದು ಹೇಳಿದಾಗ ಇನ್ನೊಬ್ಬರು ಭಾಷೆಯ ಮೂಲ ಅಂಶವನ್ನು ಹೇಗೆ ಕಲಿಸುತ್ತೀರಿ ಎಂದು ಕೇಳಿದಾಗ, ನಾನು ಮೊದಲು ಅಕ್ಷರದ ಉಚ್ಛಾರಣೆ ಶಬ್ದದ ಮೂಲಕ ಶಿಕ್ಷಣ ಆರಂಭಿಸುತ್ತೇನೆ. ಅವರು ಶಬ್ದದಲ್ಲಿ ಸ್ಪಷ್ಟವಾದ ಬಳಿಕ ಅಕ್ಷರ ಕಲಿಸುತ್ತೇನೆ ಎಂದು ಹೇಳಿದರು. ನಾವು ಮೊದಲು ಶಬ್ದಗಳನ್ನು ಕಲಿಸಿದರೆ ಮಕ್ಕಳು ವೇಗವಾಗಿ ಕಲಿಯುತ್ತಾರೆ. ನಂತರ ಮಕ್ಕಳು ಕಾಗುಣಿತ ಬರೆಯುವುದನ್ನು ಸುಲಭವಾಗಿ ಕಲಿಯುತ್ತಾರೆ. ಉದ್ದ ಮತ್ತು ಸಂಕೀರ್ಣವಾದ ಕಾಗುಣಿತಗಳನ್ನು ಸಹ ಮಕ್ಕಳು ಸುಲಭವಾಗಿ ಬರೆಯುತ್ತಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Kitchen Hacks: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಅದನ್ನು ಸರಿ ಮಾಡೋಕೆ ಸಿಂಪಲ್ ಟ್ರಿಕ್ಸ್ ಇಲ್ಲಿದೆ !

ಎಲ್ಲಾ ಶಾಲೆಗಳಲ್ಲಿ ಆ್ಯಪಲ್, ಎಲಿಫೆಂಟ್ ಎಂಬ ಚಿತ್ರವಿರುವ ಪೋಸ್ಟರ್ ಇದ್ದರೆ, ತಿಮ್ಮಪ್ಪ ಅವರ ತರಗತಿಯ ಗೋಡೆ ಮೇಲೆ ಶಬ್ದದ ಚಿತ್ರಗಳು ಹಾಗೂ ಪಕ್ಷಿ-ಪ್ರಾಣಿಗಳಿವೆ. ಉದಾಹರಣೆಗೆ, ಈ ಪದವು 'ಕ್ವಾಕ್' ಆಗಿದ್ದರೆ, ಪೋಸ್ಟರ್‍ನಲ್ಲಿ 'ಕ್ಯೂ' ಅಕ್ಷರಗಳು ಮತ್ತು ಬಾತುಕೋಳಿಯ ಫೋಟೋ ಇರುತ್ತದೆ. ಇಡೀ ಶಾಲೆಯು ಕಲಿಕೆಯ ತರಗತಿಯಾಗಿ ಪರಿವರ್ತಿತಗೊಂಡಿದ್ದು, ಸುಂದರವಾದ ವರ್ಣಚಿತ್ರಗಳು ಮತ್ತು ತಿಳಿವಳಿಕೆ ಪೋಸ್ಟರ್ಗ‌ಳನ್ನು ಹೊಂದಿದೆ. ನನ್ನ ವಿದ್ಯಾರ್ಥಿಗಳು ಇಂಗ್ಲೀಷ್ ಪುಸ್ತಕ ಎಷ್ಟೇ ದೊಡ್ಡದಿದ್ದರೂ ಓದುತ್ತಾರೆ. ಏಕೆಂದರೆ ನಾನು ಅವರಿಗೆ ಶಬ್ದಗಳು ಹಾಗೂ ಪೊನೆಟಿಕ್ಸ್ ಕಲಿಸಿದ್ದೇನೆ. ಇದು ಅವರಿಗೆ ಇಂಗ್ಲೀಷ್ ಅನ್ನು ಸುಲಭವಾಗಿಸಿದೆ. ಇನ್ನು ಮುಂದಿನ ಹಂತದಲ್ಲಿ ಇಂಗ್ಲೀಷ್ ಪಾಠಗಳ ಮೂಲಕ ವ್ಯಾಕರಣ ಕಲಿಸುತ್ತೇವೆ. ಕೊನೆಯಲ್ಲಿ ಪಾಠ, ವ್ಯಾಕರಣದ ವಿಷಯದಲ್ಲಿ ಅವರು ಕಲಿತದ್ದನ್ನು ನೆನಪಿಸಿಕೊಳ್ಳಲು ನಾವು ವಿವರವಾಗಿ ವಿಶ್ಲೇಷಣೆ ನೀಡುತ್ತೇವೆ ಎಂದು ವಿವರಿಸಿದರು.


ತರಗತಿಯೊಳಗೆ ಇದು ಸಂಭವಿಸಿದರೂ, ಶಾಲಾ ಕಾರಿಡಾರ್‌ಗಳಲ್ಲಿ ಮಕ್ಕಳು ಹೊರಗಿರುವಾಗ ತಮ್ಮ ಬಿಡುವಿನ ವೇಳೆಯಲ್ಲಿ ಮೋಜಿನ ರೀತಿಯಲ್ಲಿ ಕಲಿಯುತ್ತಾರೆ. ಇದನ್ನು ಸಾಧಿಸಲು, ಅವರು ಇಂಗ್ಲೀಷ್‌ನಲ್ಲಿ ಬಳಸುವ ಅಧಿಕ-ಆವರ್ತನದ ಪದಗಳ ಪೋಸ್ಟರ್‌ಗಳನ್ನು ತಯಾರಿಸಿದ್ದಾರೆ ಮತ್ತು ಅವುಗಳನ್ನು ಕಾರಿಡಾರ್‌ಗಳ ಉದ್ದಕ್ಕೂ ತೂಗುಹಾಕಿದ್ದಾರೆ. ಮಕ್ಕಳಿಗೆ ಸ್ವಲ್ಪ ಬಿಡುವು ಸಿಕ್ಕರೂ ಅಥವಾ ಶಾಲೆ ಪ್ರಾರಂಭವಾಗುವ ಮೊದಲೇ, ಈ ಪದಗಳನ್ನು ಜೋರಾಗಿ ಓದಲು ಪ್ರೋತ್ಸಾಹಿಸಲಾಗುತ್ತದೆ. ನಾನು ಈ ವಿಧಾನವನ್ನು ಕನ್ನಡ ಕಲಿಕೆಗೂ ಅಳವಡಿಸಿಕೊಂಡಿದ್ದೇನೆ. ತರಗತಿಗಳಿಗೆ ಹಾಜರಾಗುವುದರ ಹೊರತಾಗಿ, ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಿ ಕೆಲವು ಪ್ರಮುಖ ಶಾಲಾ ಸಭೆಗಳು ಅಥವಾ ಶಾಲಾ ಅಭಿವೃದ್ಧಿ ಮಾನಿಟರಿಂಗ್ ಸಮಿತಿ (ಎಸ್‍ಡಿಎಂಸಿ) ಸಭೆಗಳ ಬಗ್ಗೆ ವರದಿ ಮಾಡುವಲ್ಲಿ ತೊಡಗಿಸಿಕೊಂಡಿದ್ದೇನೆ. ಈ ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಾಗಿ ಚರ್ಚಿಸಿದ ವಿಷಯಗಳ ಬಗ್ಗೆ ಸಾರಾಂಶವನ್ನು ಬರೆದು ಮರುದಿನ ವರದಿಯನ್ನು ಸಲ್ಲಿಸಬೇಕು.Youtube Video

ಮಲೆತೋಡಿ ಶಾಲೆಯಲ್ಲಿ ತಿಮ್ಮಪ್ಪ ಸೇರಿದಂತೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿ 35 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರು ಸಾಕು. ಅಲ್ಲದೇ ಅತಿಥಿ ಶಿಕ್ಷಕರು ಸಹ ಇಲ್ಲಿಗೆ ಬರುತ್ತಿರುತ್ತಾರೆ. ಆದರೂ, ಕಳೆದ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಶಾಲೆಯಲ್ಲಿ ನಾವು ಬಳಸುವ ವಿಧಾನಗಳನ್ನು ಬಳಸಿಕೊಂಡು ನಮ್ಮ ವಿದ್ಯಾರ್ಥಿಗಳಿಗೆ ಕಲಿಸುವುದು ಕಷ್ಟಕರವಾಗಿದೆ. ಶೀಘ್ರದಲ್ಲೇ ಸಹಜ ಸ್ಥಿತಿ ಮರುಕಳಿಸಿ ಶಾಲೆಗಳು ತೆರೆದುಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ. ಇಲ್ಲದಿದ್ದರೆ, ವಿದ್ಯಾರ್ಥಿಗಳು ಪ್ರಮುಖ ಕಲಿಕೆಯಿಂದ ವಂಚಿತರಾಗಬೇಕಾಗುತ್ತದೆ ಎಂದು ಅವರು ಹೇಳಿದರು.


Published by: Soumya KN
First published: June 25, 2021, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories