HOME » NEWS » District » STUDENTS ALLOWED TO TRAVEL IN BMTC BUSES USING OLD BUS PASS SNVS

Bus Pass - ಹಿಂದಿನ ವರ್ಷದ ಬಸ್ ಪಾಸ್​ನಲ್ಲೇ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ

2019-20ನೇ ಸಾಲಿನಲ್ಲಿ ಕೊಡಲಾಗಿದ್ದ ಸ್ಮಾರ್ಟ್​ಕಾರ್ಡ್ ಬಸ್ ಪಾಸ್, ಶಾಲೆ ಶುಲ್ಕದ ರಸೀದಿ ಮತ್ತು ಗುರುತಿನ ಚೀಟಿ ತೋರಿಸಿ SSLC ಮತ್ತು PUC ವಿದ್ಯಾರ್ಥಿಗಳು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

news18-kannada
Updated:January 1, 2021, 10:14 AM IST
Bus Pass - ಹಿಂದಿನ ವರ್ಷದ ಬಸ್ ಪಾಸ್​ನಲ್ಲೇ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ
ಮೆಜೆಸ್ಟಿಕ್ ಬಸ್ ನಿಲ್ದಾಣ
  • Share this:
ಬೆಂಗಳೂರು(ಜ. 01): ಇಂದಿನಿಂದ ಎಸ್ಸೆಸ್ಸೆಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ತರಗತಿಗಳು ಆರಂಭವಾಗುತ್ತಿವೆ. ಬಹಳಷ್ಟು ವಿದ್ಯಾರ್ಥಿಗಳು ಬಸ್ಸುಗಳನ್ನೇ ಅವಲಂಬಿಸಿದ್ದು ಹೊಸ ವರ್ಷದಲ್ಲಿ ಮಕ್ಕಳಿಗೆ ಪಾಸ್ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸದ್ಯ ಓಡಾಡಲು ಅವಕಾಶ ಮಾಡಿಕೊಟ್ಟಿದೆ. 2019-20ನೇ ಸಾಲಿನಲ್ಲಿ ವಿತರಿಸಲಾಗಿದ್ದ ಸ್ವಾರ್ಟ್​ಕಾರ್ಡ್ ಬಸ್ ಪಾಸ್​ನಲ್ಲೇ ಈ ಎರಡು ತರಗತಿಯ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್​ನಲ್ಲಿ ಓಡಾಡಬಹುದಾಗಿದೆ. ಮುಂದಿನ ಆದೇಶದವರೆಗೂ ಈ ಸೌಲಭ್ಯ ಮುಂದುವರಿಯಲಿದೆ.

ಬಸ್​ನಲ್ಲಿ ನಿರ್ವಾಹಕರು ಕೇಳಿದಾಗ ಮಕ್ಕಳು ತಮ್ಮ ಹಿಂದಿನ ವರ್ಷದ ಬಸ್ ಪಾಸ್ ಜೊತೆಗೆ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಹಾಗೂ ಶುಲ್ಕ ಪಾವತಿಸಿದ ರಸೀದಿಯನ್ನ ತೋರಿಸಬೇಕಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹೊಸ ವರ್ಷದ ಕೊಡುಗೆ ನೀಡಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್​ಗೆ ಹೋಗುತ್ತಿದ್ದೀರಾ? ಆನ್​ಲೈನ್ ಟಿಕೆಟ್ ಸೇರಿದಂತೆ ವಿವಿಧ ನಿಯಮಗಳು ತಿಳಿದಿರಲಿ

ಇದೇ ವೇಳೆ, ಒಂಬತ್ತು ತಿಂಗಳ ಬಳಿಕ ರಾಜ್ಯಾದ್ಯಂತ ಶಾಲೆ ಮತ್ತು ಕಾಲೇಜು ಬಾಗಿಲು ತೆರೆದಿವೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಇವತ್ತು ಮೊದಲ ದಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದರ ಮಧ್ಯೆ ಬಾಗಿಲು ತೆರೆದಿರುವ ಎಲ್ಲಾ ಶಾಲೆ, ಕಾಲೇಜುಗಳಲ್ಲೂ ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸ್ ಇತ್ಯಾದಿ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
Published by: Vijayasarthy SN
First published: January 1, 2021, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories