MLA Arvind Bellad: ನೊಂದ ಕುಟುಂಬಕ್ಕೆ ಇದೇನಾ ಸಾಂತ್ವನ: ಹೆಣ ತರೋ ಜಾಗದಲ್ಲಿ 6 ಜನರನ್ನ ಕರೆದುಕೊಂಡು ಬರಬಹುದು- ಬೆಲ್ಲದ್

ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು, ಶವ‌ ಇಡುವ ಜಾಗದಲ್ಲೇ 8 ಜನರನ್ನು ಕರೆ ತರಬಹುದು ಎಂದು ಶಾಸಕ ಅರವಿಂದ ಬೆಲ್ಲದ್​ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಶಾಸಕ ಅರವಿಂದ ಬೆಲ್ಲದ್​

ಶಾಸಕ ಅರವಿಂದ ಬೆಲ್ಲದ್​

  • Share this:
ಧಾರವಾಡ (ಮಾ.3): ಉಕ್ರೇನ್​ನಲ್ಲಿ ಜೀವಂತವಾಗಿ ಇದ್ದವರನ್ನೇ ತರುವುದು ಕಷ್ಟ ಆಗಿದೆ,  ಇನ್ನು ಶವ‌ ತರೋದು ಎಲ್ಲಿಂದ ಸಾಧ್ಯ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು, ಶವ‌ ಇಡುವ ಜಾಗದಲ್ಲೇ 8 ಜನರನ್ನು ಕರೆ ತರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮಗನನ್ನು ಕಳೆದುಕೊಂಡು ನವೀನ್​ ಪೋಷಕರು ಕಣ್ಣೀರು ಹಾಕ್ತಿದ್ದಾರೆ ಇಂತಹ ಸಮಯದಲ್ಲಿ ಶಾಸಕ ಅರವಿಂದ್​ ಬೆಲ್ಲದ್​ ಇಂತಹ ಕೇಳಿಕೆ ನೀಡಿರೋದು ಎಷ್ಟು ಸರಿ. ಆಡಿ, ಬೆಳೆಸಿದ ಮಗನ ಮುಖವನ್ನು ಕೊನೆ ಬಾರಿ ನೋಡಲು ಪೋಷಕರು ಕಾದು ಕುಳಿತ್ತಿದ್ದಾರೆ. ಹಾವೇರಿಯಲ್ಲಿರೋ ನವೀನ್​ ಮನೆಗೆ ಗಣ್ಯರ ದಂಡೇ ಹರಿದು ಬರ್ತಿದ್ದು, ಪೋಷಕರಿಗೆ ಸಾಂತ್ವನ ಹೇಳ್ತಿದ್ದಾರೆ. ಆದ್ರೆ ಶಾಸಕ ಬೆಲ್ಲದ್ ನೀಡಿರೋ ಬೇಜವಾಬ್ದಾರಿ ಹೇಳಿಕೆ ನವೀನ್​ ಪೋಷಕರನ್ನ ಮತ್ತಷ್ಟು ಕುಗ್ಗಿಸಿದೆ.

‘ಹೆಣ ತರುವ ಜಾಗದಲ್ಲಿ 8 ಜನರನ್ನು ಕರೆತರಬಹುದು‘

ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್​ ಶವ ತರಲು ಪ್ರಯತ್ನ ಮಾಡುತಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನ ತೊರಿಸುತಿದ್ದಾರೆ. ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ‌ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 8 ಜನರನ್ನ ಕರೆದುಕೊಂಡು ಬರಬಹುದು ಅಂತ ಶಾಸಕ ಅರವಿಂದ್​ ಬೆಲ್ಲದ್ ಹೇಳಿದರು.

‘ಯಾಕೆ ಅಲ್ಲಿಗೆ MBBS ಮಾಡಲು ಹೋಗ್ತಾರೆ‘?

ಖಾರ್ಕಿವ್​ನಲ್ಲಿದ್ದವರು ರೊಮಾನಿಯಾಗೆ ಬಂದಿದ್ದಾರೆ ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅಲ್ಲಿ‌ ನಮ್ಮ‌‌ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ‌‌ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ಕರೆತರುವ‌ ಕೆಲಸ ಬೇಗ ಆಗಲಿದೆ. ನಮ್ಮ‌ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್ ಗೆ ಹೋಗುತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಕೆಗೆ ಹೆಚ್ಚು  ಹಣ ಖರ್ಚಾಗುತ್ತೆ. ನಮ್ಮಲ್ಲ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆ. ಇವರು MBBS ಸೀಟ್ ಅಭಾವ‌ ಸೃಷ್ಟಿ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ: Kharkivನಲ್ಲಿ 200 ಮಂದಿ ಕನ್ನಡಿಗರ ಪರದಾಟ, ವಿದ್ಯಾರ್ಥಿಗಳಿಗೆ ಫೋನ್​ ಮಾಡಿ ಧೈರ್ಯ ತುಂಬಿದ CM ಬೊಮ್ಮಾಯಿ

ಸಚಿವ ಶಿವರಾಮ್ ಹೆಬ್ಬಾರ ಪ್ರತಿಕ್ರಿಯೆ

ಉಕ್ರೇನ್‌ ದಲ್ಲಿನ ಭಾರತ ವಿದ್ಯಾರ್ಥಿಗಳ ರಕ್ಷಣೆ ವಿಚಾರವಾಗಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಪ್ರತಿಕ್ರಿಯೆ ನೀಡಿದ ಸಚಿವರು, ಕೇಂದ್ರ ಸರ್ಕಾರ ಅಪರೇಷನ್ ಗಂಗಾ ಆರಂಭ ಮಾಡಿದೆ. 42 ವಿಮಾನಗಳನ್ನು ಕಳುಹಿಸಿದ್ದಾರೆ. ಆ ದೇಶದಲ್ಲಿನ ವಿಮಾನ ಇಳಿಸಲು ಅವಕಾಶ ಇಲ್ಲ. ಪಕ್ಕದ ದೇಶಗಳಲ್ಲಿ ಇಳಿಸಬೇಕಿದೆ. ಹೀಗಾಗಿ ಅಲ್ಲಿಗೆ ವಿದ್ಯಾರ್ಥಿಗಳು  ಬಂದು ಮುಟ್ಟಬೇಕಿದೆ. ದೇಶದ ನಾಲ್ವರು ಮಂತ್ರಿಗಳು ನಾಲ್ಕು ದಿಕ್ಕಿನಲ್ಲಿದ್ದಾರೆ. ಆದರೂ ದುರದುಷ್ಟವಶಾತ್ ನವೀನ ಸಾವೀಗೀಡಾಗಿದ್ದಾನೆ. ನಾನು ಹಾವೇರಿ ಉಸ್ತುವಾರಿ ಹೊಂದಿದವನು. ಮೃತ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಬಂದಿದ್ದೇನೆ. ಅವನ ಶವ ತರಲು ಪ್ರಯತ್ನ ನಡೆದಿದೆ. ಎಷ್ಟರ ಮಟ್ಟಿಗೆ ಸಾಧ್ಯ ಗೊತ್ತಾಗುತ್ತಿಲ್ಲ ಎಂದರು.

ಇದನ್ನೂ ಓದಿ: Russia-Ukraine War: ‘ನಾವು ಪುಟಿನ್​ರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದಾ?,‘ ಭಾರತೀಯರನ್ನ ರಕ್ಷಿಸಲು ಚೀಫ್ ಜಸ್ಟೀಸ್ ಪ್ರಶ್ನೆ

ಉಕ್ರೇನ್​ನಲ್ಲಿ ಯುದ್ಧ ಭೀಕರವಾಗಿದೆ

ಉಕ್ರೇನ್ ನಲ್ಲಿ ಯುದ್ಧದ ಭೀತಿ ಬಹಳ ಜೋರಿದೆ. ಹೆಣ ಬಿದ್ದ ಸ್ಥಳದಲ್ಲಿ ಹೋಗಿ ಮತ್ತೋರ್ವ ಹೆಣ ಆಗೋಕೆ ಯಾರು ತಯಾರಿಲ್ಲ. ಅಂತಹ ವಿಚಿತ್ರವಾದ ಪರಿಸ್ಥಿತಿಯಲ್ಲಿ ಆ ಪ್ರದೇಶ ಇದೆ. ಆದರೆ ಇನ್ನೂ ಪ್ರಯತ್ನ ಸಾಗಿದೆ. ಮಗುವನ್ನು ಜೀವಂತವಾಗಿ ಮನೆಗೆ ತರಲು ಆಗಿಲ್ಲ. ಮನೆಯವರಿಗೆ ಆತನ ಮುಖ‌ ನೋಡುವ ಭಾಗ್ಯವನ್ನು ಭಗವಂತ ಕರುಣಿಸಬೇಕಿದೆ ಎಂದರ ಸಚಿವರ ಹೆಬ್ಬಾರ ಹೇಳಿದರು. ಇದೇ ಸಂದರ್ಭದಲ್ಲಿ ನವೀನ ಶವದ ಬಗ್ಗೆ ಅರವಿಂದ ಬೆಲ್ಲದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಹೆಬ್ಬಾರ್, ಅವರ ಹೇಳಿಕೆ ನಾನು ಗಮನಿಸಿಲ್ಲ. ಗಮನಿಸದೇ ಪ್ರತಿಕ್ರಿಯೆ ಕೊಡಲಾರೆ ಎಂದ್ರು
Published by:Pavana HS
First published: