ಕಲಬುರ್ಗಿಯಲ್ಲಿ ಪೋಷಕರ ಬುದ್ಧಿಮಾತಿಗೆ ಮನೆಬಿಟ್ಟ ವಿದ್ಯಾರ್ಥಿ ; ಕಲ್ಲಿನ ಗಣಿಗೆ ಜಿಗಿದು ಆತ್ಮಹತ್ಯೆ

ಅಭಿಷೇಕ್ ವಾಡಿ‌ ಪಟ್ಟಣದ ಪಿಲಕಮ್ಮಾ ಏರಿಯಾ ನಿವಾಸಿಯಾಗಿದ್ದಾನೆ. ಅಭಿಷೇಕ್ ಎಸ್ ಎಸ್ ಎಲ್ ಸಿ ಎಲ್ಲಿ ಶೇ 81 ರಷ್ಟು ಅಂಕ ಪಡೆದು ಪಾಸ್ ಆಗಿದ್ದ. ಎರಡು ದಿನಗಳ ಹಿಂದೆ ಕಾಣೆಯಾದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ(ಸೆಪ್ಟೆಂಬರ್​ 02): ಪಾಳುಬಿದ್ದ ಕಲ್ಲಿನ ಗಣಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು 16 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. 

ಅಭಿಷೇಕ್ ವಾಡಿ‌ ಪಟ್ಟಣದ ಪಿಲಕಮ್ಮಾ ಏರಿಯಾ ನಿವಾಸಿಯಾಗಿದ್ದಾನೆ. ಅಭಿಷೇಕ್ ಎಸ್ ಎಸ್ ಎಲ್ ಸಿ ಎಲ್ಲಿ ಶೇ 81 ರಷ್ಟು ಅಂಕ ಪಡೆದು ಪಾಸ್ ಆಗಿದ್ದ. ಎರಡು ದಿನಗಳ ಹಿಂದೆ ಕಾಣೆಯಾದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಪೋಷಕರೊಂದಿಗೆ ಜಗಳವಾಡಿ  ಅಭಿಷೇಕ್ ಮನೆಬಿಟ್ಟು ಹೋಗಿದ್ದ ಎನ್ನಲಾಗಿದೆ.

ಇದನ್ನೂ ಓದಿ : ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಿ ; ಅಶೋಕ್ ಚಂದರಗಿ ಆಗ್ರಹ

ಪೋಷಕರ ಬುದ್ಧವಾದದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿ ಮನೆಯಿಂದ ಹೊರಟು ಹೋಗಿದ್ದ ಎನ್ನಲಾಗಿದೆ. ಕೊನೆಗೆ ವಿದ್ಯಾರ್ಥಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎಸ್ಎಸ್​​ಎಲ್​​ಸಿ ಯಲ್ಲಿ ಉತ್ತಮ ಫಲಿತಾಂಶ ಬಂದರೂ ಸಣ್ಣ ವಿಷಯಕ್ಕೆ ವಿದ್ಯಾರ್ಥಿ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗ್ರಾಮೀಣ ಪೊಲೀಸರಿಂದ ಮನೆಗಳ್ಳನ ಬಂಧನ

ಕಲಬುರ್ಗಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿ ಓರ್ವ ಮನೆಗಳ್ಳನನ್ನು ಬಂಧಿಸಿದ್ದಾರೆ. ರಾಹುಲ್ ಕಾಂಬಳೆ ಬಂಧಿತ ಆರೋಪಿ. ರಾಹುಲ್ ಕಲಬುರ್ಗಿಯ ದೀನದಯಾಳ ಕಾಲೋನಿ ನಿವಾಸಿ. ಬಂಧಿತನಿಂದ 50 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣ, ಮೊಬೈಲ್ ಸೇರಿ 2.55 ಲಕ್ಷ ರೂಪಾಯಿ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ಶಿವಲಿಂಗೇಶ್ವರ ಕಾಲೋನಿ ಮತ್ತಿತರ ಕಡೆ ಮನೆಗಳ್ಳತನ ಮಾಡಿದ್ದ ಆರೋಪಿ. ಯಾರೂ ಇಲ್ಲದ ಮನೆಗಳನ್ನು ಪತ್ತೆ ಹಚ್ವಿ ಅವುಗಳಿಗೆ ಕನ್ನ ಹಾಕುತ್ತಿದ್ದ. ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Published by:G Hareeshkumar
First published: