ಭದ್ರಾ ಮೇಲ್ದಂಡೆ ನೀರು ಹರಿಸುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಉಗ್ರ ಹೋರಾಟ; ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ

ಶಾಸಕ ಶಿವಲಿಂಗೇಗೌಡ.

ಶಾಸಕ ಶಿವಲಿಂಗೇಗೌಡ.

  • Share this:
ಹಾಸನ; ಅರಸೀಕೆರೆ ಕೃಷ್ಣಾ ನದಿ ಪಾತ್ರಕ್ಕೆ ಸೇರುತ್ತೆ, ಕೆಸಿ ರೆಡ್ಡಿ ವರದಿ ಪ್ರಕಾರ ಭದ್ರಾ ಮೇಲ್ದಂಡೆ ನದಿ ಪಾತ್ರದಿಂದ ಅರಸೀಕೆರೆಗೆ ನೀರು ಕೊಡುವ ವಿಷಯ ಪ್ರಸ್ತಾಪವಾಗಿದೆ.  ಜೆಎಚ್ ಪಟೇಲ್ ಮತ್ತು ದೇವೇಗೌಡರು ಸಿಎಂ ಆಗಿದ್ದಾಗಲೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ನಮ್ಮ ಅರಸೀಕೆರೆಯಿಂದಲೇ ಚಿಕ್ಕಮಗಳೂರಿಗೆ ಪೈಪ್ ಲೈನ್ ಹೋಗುತ್ತೆ. ಕಣಕಟ್ಟೆ ಮೂಲಕ ಚಿಕ್ಕಮಗಳೂರಿಗೆ ಭದ್ರಾ ಮೇಲ್ದಂಡೆಯಿಂದ ನೀರು ಹರಿಸುತ್ತಿದ್ದಾರೆ. ಡಿಪಿಆರ್ ನಲ್ಲಿ ಅರಸೀಕೆರೆಯ 28 ಕೆರೆಗಳು ಸೇರಿವೆ. ಡಿಪಿಆತನಾರ್ ನಲ್ಲಿ ಸೇರಿದರೂ ಎಲ್ಲಾ ಕೆರೆಗಳನ್ನು ಕೈಬಿಟ್ಟಿದ್ದಾರೆ. ಕೇವಲ ಒಂದೇ ಒಂದು ಕೆರೆ ಮಾತ್ರ ಈ ಯೋಜನೆಗೆ ಸೇರಿಸಿದ್ದಾರೆ. ಕಂಟ್ರೋಲ್ ಮಾಸ್ಟರ್ ಸಿಟಿ ರವಿ ಯೋಜನೆ ಬದಲಾವಣೆ ಮಾಡಿಸಿದ್ದಾರೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕಿಡಿಕಾರಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಸಿಎಂಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಕೆರೆಗಳಿಗೆ ನೀರು ಕೊಡಿಸುತ್ತೇನೆ ಅಂತಾ ಹೇಳಿ ಸಿಎಂ ಈವರೆಗೂ ಕೆಲಸ ಮಾಡಿಲ್ಲಾ. ಭದ್ರಾ ಮೇಲ್ದಂಡೆ ನೀರು ಕೊಡುವಂತೆ ಪಕ್ಷಾತೀತವಾಗಿ ಸಮಿತಿ ರಚಿಸಿ ಉಗ್ರ ಹೋರಾಟ ಮಾಡುತ್ತೇವೆ. ಮೈತ್ರಿ ಸರ್ಕಾರದ ಮಾಸ್ಟರ್ ಪ್ಲಾನ್ ಅನ್ನು ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಪಕ್ಷದವರು ಚುನಾವಣೆಗೆ ನಿಲ್ಲುವಂತಿಲ್ಲ. ಕೇವಲ ಆಡಳಿತ ಪಕ್ಷದವರೇ ಚುನಾವಣೆಗೆ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಕೆರೆಗಳಿಗೆ ನೀರು ಕೊಡಿಸುವ ಕೆಲಸ ಮಾಡಿಲ್ಲ. ಭದ್ರಾ ಮೇಲ್ದಂಡೆ ನೀರನ್ನು ಅರಸೀಕೆರೆ ತಾಲೂಕಿಗೆ ಕೊಡಿಸುವಂತೆ ಪಕ್ಷಾತೀತವಾಗಿ ಒಂದು ಸಮಿತಿ ರಚಿಸಿ ಉಗ್ರವಾದ ಹೋರಾಟ ಮಾಡುವುದಾಗಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದರು.

ಇದನ್ನು ಓದಿ: ಎನ್​ಡಿಎ ಜೊತೆಗೆ ಜೆಡಿಎಸ್ ವಿಲೀನ ಇಲ್ಲ; ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಕೆರೆಗಳಿಗೆ ನೀರು ಕೊಡಿಸುತ್ತೇನೆ ಎಂದು ಹೇಳಿ ಈವರೆಗೂ ಕೆಲಸ ಮಾಡಿಲ್ಲ. ಭದ್ರಾ ಮೇಲ್ದಂಡೆ ನೀರು ಕೊಡುವಂತೆ ಪಕ್ಷಾತೀತವಾಗಿ ಸಮಿತಿ ರಚಿಸಿ ಉಗ್ರ ಹೋರಾಟದ ಹಾದಿ ಹಿಡಿಯಲಾಗುವುದು. ನಂತರ ಮಾಜಿ ಪ್ರಧಾನಿ ದೇವೇಗೌಡರು ಗಮನ ಸೆಳೆಯಲಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಒಟ್ಟು 523 ಸದಸ್ಯರಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಇಲ್ಲಿ ಒಟ್ಟು 35 ಪಂಚಾಯಿತಿ ಇದ್ದು. ಇದರಲ್ಲಿ ಬಾಣವರ ಪಂಚಾಯಿತಿ ಚುನಾವಣೆ ನಡೆದಿಲ್ಲ. 32 ಪಂಚಾಯಿತಿ ನಮ್ಮ ಬೆಂಬಲಿತ ಅಭ್ಯರ್ಥಿಗಳೇ ಗೆದ್ದಿದ್ದಾರೆ ಎಂದು ತಿಳಿಸಿದರು.

ವರದಿ - ಡಿಎಂಜಿಹಳ್ಳಿಅಶೋಕ್
Published by:HR Ramesh
First published: