ಅತ್ಯಾಚಾರಿಗಳಿಗೆ ಬಿಹಾರದ ರೀತಿಯ ಕಾನೂನು ರಾಜ್ಯದಲ್ಲೂ ಬರಲಿದೆ: ಸಚಿವ ಸೋಮಣ್ಣ ಎಚ್ಚರಿಕೆ!

ಅವರ ಕಾಲದಲ್ಲಿ ಹಾಗೇ, ಇವರ ಕಾಲದಲ್ಲಿ ಹೀಗಾಗಿತ್ತು ನಾವು ಎಂದು ಉಡಾಫೆ ಹೇಳಿಕೆ ಕೊಡಲ್ಲ. ಆದರೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸಚಿವ ವಿ. ಸೋಮಣ್ಣ.

ಸಚಿವ ವಿ. ಸೋಮಣ್ಣ.

  • Share this:
ಕನಕಪುರ (ಆಗಸ್ಟ್​ 28): "ಅತ್ಯಾಚಾರದಲ್ಲಿ ತೊಡಗುವ ಆರೋಪಿಗಳಿಗೆ ಬಿಹಾರ ಹಾಗೂ ಬೇರೆ ರಾಜ್ಯದಲ್ಲಿರುವ ಕಾನೂನು ನಮ್ಮಲ್ಲಿಯೂ ಜಾರಿಯಾಗಲಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗುವರಿಗೆ ಕಠಿಣ ಶಿಕ್ಷೆಯಾಗಲಿದೆ" ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಕನಕಪುರದ ದೇಗುಲ ಮಠಕ್ಕೆ ಆಗಮಿಸಿದ್ದ ಸೋಮಣ್ಣ ಪ್ರಾರ್ಥನೆ ಸಲ್ಲಿಸಿದ ನಂತರ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, "ಮೈಸೂರಿನಲ್ಲಿನ ಪ್ರಕರಣ ನಡೆಯಬಾರದಿತ್ತು. ಆದರೆ ಈ ಪ್ರಕರಣವನ್ನು ನಾವು ತೀಕ್ಷ್ಣವಾಗಿ ತೆಗೆದುಕೊಂಡಿ ದ್ದೇವೆ. ಅವರ ಕಾಲದಲ್ಲಿ ಹಾಗೇ, ಇವರ ಕಾಲದಲ್ಲಿ ಹೀಗಾಗಿತ್ತು ನಾವು ಎಂದು ಉಡಾಫೆ ಹೇಳಿಕೆ ಕೊಡಲ್ಲ ನಾನು. ಆದರೆ ಈ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಹಾರ ಹಾಗೂ ಬೇರೆ ರಾಜ್ಯದ ಕಾನೂನು ನಮ್ಮಲ್ಲಿಯೂ ಜಾರಿಯಾಗಲಿದೆ ಈಗಾಗಲೇ ಆರೋಪಿಗಳನ್ನೂ ಬಂಧಿಸಲಾಗಿದೆ" ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೋಮಣ್ಣ "ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು, ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದಾರೆ. ಆದರೆ ಪೊಲೀಸ್ ಇಲಾಖೆ ವೈಫಲ್ಯ ಎಂದು ಹೇಳಲಾಗಲ್ಲ. ಯಾರ್ಯಾರ ಕಾಲದಲ್ಲಿ ಏನಾಯ್ತು ಎಂದು ನಾನು ಹೇಳಲ್ಲ. ಆದರೆ ಮುಂದಿನ ಯುವಪೀಳಿಗೆಯ ಹಿತದ್ಱಷ್ಟಿಯಿಂದ ಕಠಿಣ ಕಾನೂನು ರೂಪಿಸಲಾಗುತ್ತೆ" ಎಂದು ತಿಳಿಸಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರಿಂದ ದ್ವಿತೀಯ ಪಿಯು ತರಗತಿ ಆರಂಭ; ಮಾರ್ಗಸೂಚಿ ಏನು?

ಮಹಿಳೆಯರ ರಕ್ಷಣೆಗೆ ರಿವಾಲ್ವಾರ್ ಇಟ್ಟುಕೊಳ್ಳಲು ಅವಕಾಶ ಕೊಡಿ ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರಕ್ಕೆ ಮಾತನಾಡಿ, "ಅವಶ್ಯಕತೆ ಇರುವವರು ಕಾನೂನು ವ್ಯಾಪ್ತಿಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಸರ್ಕಾರ ಸಹ ಜನರ ಹಿತಕ್ಕಾಗಿ ಕೆಲಸ ಮಾಡಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: