• Home
  • »
  • News
  • »
  • district
  • »
  • ರಸ್ತೆ ಅಭಿವೃದ್ದಿ ನೆಪದಲ್ಲಿ ವಿಜಯನಗರ ಕಾಲದ ಶಿಲಾಶಾಸನ ನಾಶ

ರಸ್ತೆ ಅಭಿವೃದ್ದಿ ನೆಪದಲ್ಲಿ ವಿಜಯನಗರ ಕಾಲದ ಶಿಲಾಶಾಸನ ನಾಶ

 ಶಿಲಾಶಾಸನ

ಶಿಲಾಶಾಸನ

ಕಪಿಲೇಶ್ವರ ದೇಗುಲ ಪಕ್ಕದಲ್ಲಿನ ಬಂಡೆಯನ್ನು ಒಡೆದು ಅದರ ಮೇಲಿದ್ದ ಬಹು ಮುಖ್ಯವಾದ ಶಿಲಾಶಾಸನವೊಂದು ಇಲ್ಲವಾಗಿದೆ. ಅಕ್ಕ ತಂಗಿಯರ ಗುಡಿಗಳು ಧರೆಗೆರಗುತ್ತಿವೆ. ಇಲ್ಲಿನ ಸೂರ್ಯ ಸೇರಿದಂತೆ ವಿವಿಧ ವಿಗ್ರಹಗಳು ಕಾಣೆಯಾಗಿವೆ.

  • Share this:

ನೆಲಮಂಗಲ(ಸೆಪ್ಟೆಂಬರ್​. 28): ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿರುವ ಮಣ್ಣೆ ಗ್ರಾಮವು ಗಂಗರಸರ ನೆಲೆಯಾಗಿತ್ತು ಎನ್ನುವ ಗತಿಸಿದ ಇತಿಹಾಸದ ಗರ್ಭದೊಳಗೆ ಹುದುಗಿರುವ ಅದೆಷ್ಟೋ ಐತಿಹಾಸಿಕ ಹಿನ್ನೆಲೆಯನ್ನು ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಇನ್ನೂ ಪೂರ್ಣವಾಗಿ ತೆರೆದು ನೋಡಲಾಗಿಲ್ಲ. ಆದರೆ, ಮಣ್ಣೆ ಮುಖ್ಯರಸ್ತೆಯ ಕೆರೆಯ ಸನಿಹವಿರುವ ಕಪಿಲೇಶ್ವರ ದೇವಸ್ಥಾನದ ಪಕ್ಕದ ಬಂಡೆಯ ಮೇಲಿದ್ದ ವಿಜಯನಗರ ಸಾಮ್ರಾಜ್ಯ ಕಾಲದ ಶಿಲಾ ಶಾಸನವಿದ್ದ ಬಂಡೆಯನ್ನು ಸಣ್ಣರಸ್ತೆ ನಿರ್ಮಿಸಿಕೊಳ್ಳುವ ಸಲುವಾಗಿ ಒಡೆದು ಹೊಡೆದು ಹಾಕಿದ್ದಾರೆ. ಅಂದಿನ ಮಾನ್ಯಖೇಟ, ಮಾನ್ಯಪುರ ಮಣ್ಣೆಯು ಗಂಗರಸರ ಪ್ರೀತಿಯ ರಾಜನೆಲೆವೀಡು ರಾಜಧಾನಿಯಾಗಿತ್ತು ಎಂಬ ಮಾಹಿತಿಯನ್ನು ಜೀವಂತ ವಾಗಿರಸಬೇಕಿದೆ. ಅದೆಷ್ಟೋ ಸಂಗತಿಗಳ ಬಗೆಗೆ ಉತ್ಖನನ ಕಾರ್ಯಾರಂಭ ವಾಗಬೇಕಿದೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಸಂಗತಿಗಳನ್ನಾದರೂ ಉಳಿಸುವ ಕಾರ್ಯವಾಗಬೇಕಿದೆ. ಇಲ್ಲಿ ಉತ್ಖನನ ಮಾಡಿದರೆ ಬಹುಶಃ ಇತಿಹಾಸದ ಮಹತ್ವವಾದ ಪಳೆಯುಳಿಕೆಗಳು ಲಭ್ಯವಾಗುವ ಸಾಧ್ಯತೆಯಿದ್ದು, ಮಾನ್ಯಪುರದ ಮೇಲೆ ಹೊಸ ಬೆಳಕು ಮೂಡಿಸುವುದು ಚರಿತ್ರೆಗಷ್ಟೇ ಅಲ್ಲಾ ನಮ್ಮ ಮುಂದಿನ ಪ್ರಜೆ ಗಳಿಗೂ ಅತ್ಯಗತ್ಯವೆಂಬುದು ಹಲವಾರು ಹಿರಿಯ ಸಾಹಿತ್ಯಾಸಕ್ತರುಗಳ ಅಭಿಪ್ರಾಯವಾಗಿದೆ.


ಇಲ್ಲಿ ಅಂದಿನ ಗಂಗ ಮಾರಸಿಂಹನ ಸೇನಾಧಿಪತಿಯಾಗಿದ್ದಂತಹ ಶ್ರೀವಿಜಯನು ಜಿನೇಂದ್ರ ಭವನ (ಸೂಳೆಯರ ಗುಡಿ) ನಿರ್ಮಿಸಿದ್ದು ಈ ಭವನವು ತುಂಬಾ ಶಿಥಿಲಾವಸ್ಥೆಯಲ್ಲಿದೆ. ಅಂತೆಯೇ ಕಪಿಲೇಶ್ವರ ದೇಗುಲ ದಯನೀಯ ಸ್ಥಿತಿ ತಲುಪಿದೆ. ಈಗ ಇದರ ಪಕ್ಕದಲ್ಲಿನ ಬಂಡೆಯನ್ನು ಒಡೆದು ಅದರ ಮೇಲಿದ್ದ ಬಹು ಮುಖ್ಯವಾದ ಶಿಲಾಶಾಸನವೊಂದು ಇಲ್ಲವಾಗಿದೆ. ಅಕ್ಕ ತಂಗಿಯರ ಗುಡಿಗಳು ಧರೆಗೆರಗುತ್ತಿವೆ. ಇಲ್ಲಿನ ಸೂರ್ಯ ಸೇರಿದಂತೆ ವಿವಿಧ ವಿಗ್ರಹಗಳು ಕಾಣೆಯಾಗಿವೆ.


ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳಿಗೆ ಮಾಹಿತಿ ನೀಡಿರುವ ಹಿರಿಯ ಇತಿಹಾಸ ಸಂಶೋಧಕ ಡಾ. ಹೆಚ್.ಎಸ್.ಗೋಪಾಲರಾವ್ ತ್ವರಿತ ಕ್ರಮಕೈಗೊಂಡು ಮಣ್ಣೆಯಲ್ಲಿನ ಹಲವಾರು ಪಳೆಯುಳಿಕೆಗಳನ್ನು ರಕ್ಷಿಸುವತ್ತ ಮುತುವರ್ಜಿವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.


ಗಂಗರಸರು ರಾಜ್ಯವನ್ನಾಳಿದ ಮೇರು ಸಂಸ್ಥಾನಗಳಲ್ಲಿ ಒಬ್ಬರು, ರಾಜ್ಯದ ಉದ್ದಗಲಕ್ಕೂ ತಮ್ಮ ಸಾಮ್ರಾಜ್ಯವನ್ನ ವಿಸ್ತರಣೆ ಮಾಡುವಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ತಮ್ಮ ಸಾಮ್ರಾಜ್ಯವನ್ನ ನೆರೆ ರಾಜರುಗಳು ದಾಳಿಯಿಂದ ತಪ್ಪಿಸಿಕೊಳ್ಳಲು ತುಂಬಾ ಯೋಚಿಸಿದ ತಲಕಾಡು ಗಂಗರು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆಡಳಿತದ ರಾಜಧಾನಿಯನ್ನ ಬದಲಾವಣೆ ಮಾಡುತ್ತಾರೆ.


ಇದನ್ನೂ ಓದಿ : ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ


ಗಂಗರಸರ ಮೊದಲ ರಾಜಧಾನಿ ಮೈಸೂರಿನ ತಲಕಾಡು ಆದರೆ ಅವರ ಮತ್ತೊಂದು ರಾಜಧಾನಿ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ನೆಲಮಂಗಲ ತಾಲೂಕಿನ ಇಂದಿನ ಮಣ್ಣೆ ಗ್ರಾಮ. ಇತಿಹಾಸದ ಉಲ್ಲೇಖಗಳ ಪ್ರಕಾರ ಮಣ್ಣೆ ಗ್ರಾಮದ ಮೂಲ ಹೆಸರು ಮಾನ್ಯಾಪುರ ಅಥವಾ ಮಾನ್ಯಖೇಟ. ತಲಕಾಡಿನ ಗಂಗರು ಬಹುದಿನಗಳ ಕಾಲ ಮಾನ್ಯಪುರದಿಂದ ಆಡಳಿತ ನಡೆಸಿದ್ದು ಅನೇಕ ಕುರುಹುಗಳನ್ನ ಬಿಟ್ಟು ಹೋಗಿದ್ದಾರೆ. ಅಲ್ಲದೆ ಅನೇಕ ದೇವಾಲಯಗಳು, ಅಕ್ಕ ತಂಗಿ ಕೆರೆ, ಬಸವನ ವಿಗ್ರಹ ಸೇರಿದಂತೆ ಅನೇಕ ಶಿಲಾ ಶಾಸನಗಳನ್ನ ಗಂಗರ ಆಡಳಿತಕ್ಕೆ ಸಾಕ್ಷೀಕರಿಸಬಹುದು.


ಗಂಗರಸರ ರಾಜಧಾನಿ ಮಾನ್ಯಾಪುರದಲ್ಲಿ ವಿಜಯನಗರ ಅರಸರು ಉಲ್ಲೇಖಿಸಿದ್ದ ಶಿಲಾಶಾಸನವನ್ನ ರಸ್ತೆ ಅಭಿವೃದ್ದಿ ನೆಪದಲ್ಲಿ ನಾಶ ಮಾಡಿದ್ದಾರೆ.

Published by:G Hareeshkumar
First published: