ಬೆಂಗಳೂರು: ಕೊರೊನಾ 2ನೇ ಅಲೆ ಆರ್ಭಟಕ್ಕೆ ಕರುನಾಡು ನಲುಗಿ ಹೋಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಸಿಗದೆ ರಸ್ತೆಯಲ್ಲಿಯೇ ಜನರು ಸಾಯುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಸರ್ಕಾರ ಮಿನಿ ಹಾಸ್ಪಿಟಲ್ ತುರ್ತಾಗಿ ನಿರ್ಮಿಸಲು ನಿರ್ಧರಿಸಿದೆ. ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಸಿಗದೆ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣಬಿಡುತ್ತಿದ್ದಾರೆ. ಗುಣಲಕ್ಷಣವಿಲ್ಲದವರಿಗೆ ಬಿಬಿಎಂಪಿ 10 ಕೊರೋನಾ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಗುಣಲಕ್ಷಣವಿದ್ದು ಆಕ್ಸಿಜನ್ ಅಗತ್ಯವಿರುವ ಸೋಂಕಿತರಿಗೆ ಬೆಡ್ ಸಾಲುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಖಾಸಗಿ ಅಸ್ಪತ್ರೆಗಳು ಹಾಗೂ ಹೋಟೆಲ್ಗಳ ಸಹಕಾರದೊಂದಿಗೆ ಮಿನಿ ಆಸ್ಪತ್ರೆ ಶುರು ಮಾಡುತ್ತಿದೆ.
ಇನ್ಮುಂದೆ ಬೆಂಗಳೂರಿನಲ್ಲಿ ಹಣ ಪಾವತಿಸಿ Step down hospital ವ್ಯವಸ್ಥೆ ಪಡೆಯಬಹುದು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಿನಿ ಆಸ್ಪತ್ರೆ ಆರಂಭ ಮಾಡುತ್ತಿದ್ದು, ಹೋಟೆಲ್ನಲ್ಲಿಯೇ ಅಗತ್ಯ ಸೌಲಭ್ಯ ಇರಲಿದೆ. ಚಿಕಿತ್ಸೆಯ ಉಪಕರಣಗಳು, ವೈದ್ಯಕೀಯ ಸೌಲಭ್ಯ ಲಭ್ಯವಾಗಲಿದೆ. ಇನ್ನೆರಡು ದಿನದಲ್ಲಿ ಬೆಂಗಳೂರಿನ 5ಕ್ಕೂ ಹೆಚ್ಚು ಹೋಟೆಲ್ ನಲ್ಲಿ ಮಿನಿ ಹಾಸ್ಟಿಟಲ್ ಆರಂಭವಾಗಲಿದೆ.
ಯಾರಿಗೆ ಮಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ?
ಕೊರೋನಾ ಗುಣಲಕ್ಷಣ ಇರುವ ರೋಗಿಗಳಿಗೆ, ಸಣ್ಣ ಪ್ರಮಾಣದ ಆಕ್ಸಿಜನ್ ಅಗತ್ಯವಿರುವವರಿಗೆ, ನಿಶ್ಶಕ್ತರಾಗಿ ಅಸ್ವಸ್ಥರಾದವರಿಗೆ ಡ್ರಿಪ್ ಹಾಕಿಸಿಕೊಳ್ಳಲು ಮಿನಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತೆ. ಆಸ್ಪತ್ರೆಯಲ್ಲಿ 4 ದಿನ ಚಿಕಿತ್ಸೆ ಪಡೆದ ಸ್ಚಲ್ಪ ಚೇತರಿಸಿಕೊಂಡವರು ಇನ್ನು ಮೂರು ದಿನ ವೈದ್ಯರ ನಿಗಾದಲ್ಲಿರಬೇಕಾಗುತ್ತೆ. ಇಂಥ ಸಮಯದಲ್ಲಿ ಮಿನಿ ಆಸ್ಪತ್ರೆಗಳನ್ನು ಬಳಸಲಾಗುತ್ತೆ.
ಹೇಗಿರಲಿವೆ ಮಿಸಿ ಆಸ್ಪತ್ರೆಗಳು?
ಆಸ್ಪತ್ರೆಯಾಗಿ ಬದಲಾಗುವ ಹೋಟೆಲ್ಗಳಲ್ಲಿ ವೀಲ್ ಚೇರ್ ಹೋಗುವ ವ್ಯವಸ್ಥೆ ಇರಬೇಕು. ಕೊಠಡಿಗಳಲ್ಲಿ ಗಾಳಿ-ಬೆಳಕು ಇರಬೇಕು. ಡ್ರಿಪ್, ಮೆಡಿಸನ್, ಆಕ್ಸಿಜನ್, ನೆಬುಲೈಸೇನ್ ವ್ಯವಸ್ಥೆ ಇರಲಿದೆ. 10 ರೋಗಿಗೆ ಒಬ್ಬ ನರ್ಸ್, 50 ರೋಗಿಗೆ ಒಬ್ಬ ವೈದ್ಯರ ವ್ಯವಸ್ಥೆ ಇರಲಿದೆ. ಕೊರೊನಾ ಕೇರ್ ಸೆಂಟರ್ ನಲ್ಲಿ ಬೆಡ್ ಗಳಿರುತ್ತವೆ. ಆದರೆ ಅಲ್ಲಿ ರೋಗಿಗೆ ಅನಾರೋಗ್ಯ ಹೆಚ್ಚಾದರೆ ಚಿಕಿತ್ಸೆ ಸಿಗುವುದಿಲ್ಲ. ಇದಕ್ಕಾಗಿಯೇ ಹೋಟೆಲ್ಗಳನ್ನು 50ರಿಂದ 100 ಬೆಡ್ ಗಳ ಮಿನಿ ಆಸ್ಪತ್ರೆಯಾಗಿ ಮಾರ್ಪಾಟು ಮಾಡಲಾಗುತ್ತಿದೆ. ಮಿನಿ ಆಸ್ಪತ್ರೆಗೆ ಸರ್ಕಾರ ಈಗಾಗಲೇ ದರ ನಿಗದಿ ಮಾಡಿದೆ. ಎಕಾನಮಿ ಹೋಟೆಲ್ ಗಳಲ್ಲಿ 8 ಸಾವಿರ, 3 star ಹೋಟೆಲ್ಗಳಲ್ಲಿ 10 ಸಾವಿರ, 5 star ಹೋಟೆಲ್ ಗಳಲ್ಲಿ 12 ಸಾವಿರ ರೂ. ನಿಗದಿ ಮಾಡಿದೆ.
ಮಿಸಿ ಆಸ್ಪತ್ರೆಗಳಿಗೆ ಮಣಿಪಾಲ್, ಅಪೋಲೊ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಉತ್ಸುಕತೆ ತೋರಿವೆ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ ಪ್ರಸನ್ನ ತಿಳಿಸಿದರು. ಕೊರೊನಾ ಆರ್ಭಟಕ್ಕೆ ಬೆಂದಿರುವ ಬೆಂಗಳೂರಿನ ಜನತೆಗೆ ಮಿನಿ ಆಸ್ಪತ್ರೆ ಶುರುವಾಗುತ್ತಿರುವುದು ಒಳ್ಳೆಯದು. ಆದರೆ ಬಡರೋಗಿಗಳಿಗೆ stepdown hospital ನಲ್ಲಿ ಉಚಿತ ಸೇವೆ ಸಿಗುವಂತಾದರೆ ಬಹಳ ಅನುಕೂಲವಾಗಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ