HOME » NEWS » District » STATE GOVERNMENT WILL HOLD SOCIAL MEDIA HEADS MEETING SAYS MINISTER BASAVARAJA BOMMAI RH

ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಷಯಗಳ ನಿಯಂತ್ರಣಕ್ಕೆ ಶೀಘ್ರ  ಜಾಲತಾಣಗಳ ಮುಖ್ಯಸ್ಥರ ಸಭೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಶಂಕುಸ್ಥಾಪನೆ ಕಾರ್ಯ ಈ ತಿಂಗಳಾಂತ್ಯದೊಳಗೆ ನೆರವೇರಿಸಲಾಗುವುದು. ವರ್ಚುವಲ್ ಫ್ಲಾಟ್‍ಫಾರಂ ಮೂಲಕ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಗುಡ್‍ಲೈಫ್ ಮಿಲ್ಕ್ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕೆ.ಎಂ.ಎಫ್. ಸಭೆಯಲ್ಲಿ ಮಂಜೂರಾತಿ ದೊರೆಯಲಿದೆ ಎಂದರು.

news18-kannada
Updated:August 15, 2020, 8:53 PM IST
ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಷಯಗಳ ನಿಯಂತ್ರಣಕ್ಕೆ ಶೀಘ್ರ  ಜಾಲತಾಣಗಳ ಮುಖ್ಯಸ್ಥರ ಸಭೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ
  • Share this:
ಹಾವೇರಿ; ಕೋಮು ಸಾಮರಸ್ಯ ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ವಿಷಯಗಳ ಪೂರ್ವ ಪರಿಶೀಲನೆ ಕುರಿತಂತೆ ಚರ್ಚಿಸಲು ಎಲ್ಲ ಜಾಲತಾಣಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೇಸ್​ಬುಕ್, ವಾಟ್ಸಾಪ್, ಟ್ವಿಟರ್, ಇನ್ಸ್​ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯಗಳನ್ನು ಪೋಸ್ಟ್ ಮಾಡುವ ಮುನ್ನ ಆಯಾ ಕಂಪನಿಗಳು ಪರಿಶೀಲಿಸಿ, ಆ ಹಂತದಲ್ಲೇ ಕಡಿವಾಣ ಹಾಕುವ ಕುರಿತಂತೆ ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿರ್ಧರಿಲಾಗುವುದು. ಈ ಕುರಿತಂತೆ ಶೀಘ್ರವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ನೆರೆಯಂತಹ ವಿಪತ್ತು ನಿರ್ವಹಣೆಗೆ ರಾಜ್ಯದ ಬೇಡಿಕೆಯಂತೆ ನಾಲ್ಕು ಎನ್.ಡಿ.ಆರ್.ಎಫ್. ತಂಡಗಳ ಜೊತೆಗೆ ಹೆಚ್ಚುವರಿ ನಾಲ್ಕು ತಂಡ ಒಳಗೊಂಡಂತೆ ಎಂಟು  ತಂಡಗಳನ್ನು ಕಳುಹಿಸಲು ಕೇಂದ್ರ ಅನುಮತಿ ನೀಡಿದೆ. ಹಾಗೂ ಭೂ ಕುಸಿತ ಸೇರಿದಂತೆ ತೀವ್ರ ತರದ ವಿಪತ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಅಂತರ ರಾಜ್ಯ ವಿಪತ್ತು ನಿರ್ವಹಣೆಯ ಘಟಕಗಳ ಸ್ಥಾಪನೆಗೆ ಕೇಂದ್ರಕ್ಕೆ ಕೋರಲಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಇದರಿಂದ ನೆರೆ ಇತರ ತುರ್ತು ಸಂದರ್ಭಗಳಲ್ಲಿ ಅಕ್ಕಪಕ್ಕದ ರಾಜ್ಯಗಳ ಸಮನ್ವಯದಿಂದ ವಿಪತ್ತು ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೊರೋನಾ ನಿಯಂತ್ರಣಕ್ಕಾಗಿ ಆರ್.ಟಿ.ಪಿ.ಆರ್. ಹಾಗೂ ರ್ಯಾಪಿಡ್ ಆಂಟಿಜನ್ ಟೆಸ್ಟ್​ ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ. ಹೈ ಫ್ಲೋ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಐ.ಸಿ.ಯು ವಾರ್ಡ್‍ಗಳಲ್ಲಿ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕೊರೋನಾ ನಿರ್ಮೂಲನೆಗೆ ರೆಮಿಡಿಡಿಸಿವರ್ ಲಸಿಕೆ ಅತ್ಯುತ್ತಮ ಪರಿಣಾಮಕಾರಿಯಾಗಿದೆ.  ಒಂದು ಇಂಜೆಕ್ಷನ್​ಗೆ ಐದು ಸಾವಿರ ಬೆಲೆ ಇದೆ.  ರೆಮಿಡಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುವ ಮೂಲಕ ಕೋವಿಡ್ ಸೋಂಕಿತ ಬಡವರ ಜೀವ ಉಳಿಸಲು ಕ್ರಮಹಿಸಲಾಗುವುದು ಎಂದರು.

ಪಿ.ಎಂ.ಕೇರ್ ಯೋಜನೆಯಡಿ ರಾಜ್ಯಕ್ಕೆ 660 ನಾನ್‍ಇನ್‍ವೇಜಿವ್ ವೆಂಟಿಲೇಟರ್ ಪೂರೈಕೆಯಾಗಲಿದ್ದು, ಈ ಪೈಕಿ ಹಾವೇರಿ ಜಿಲ್ಲೆಗೆ 20 ರಿಂದ 25 ವೆಂಟಿಲೇಟರ್ ಪೂರೈಕೆಗೆ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಉನ್ನತೀಕರಣ ಕಾರ್ಯ ನಡೆದಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹಿನ್ನೆಲೆಯಲ್ಲಿ ಆರೋಗ್ಯದ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಹಾವೇರಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಶಂಕುಸ್ಥಾಪನೆ ಕಾರ್ಯ ಈ ತಿಂಗಳಾಂತ್ಯದೊಳಗೆ ನೆರವೇರಿಸಲಾಗುವುದು. ವರ್ಚುವಲ್ ಫ್ಲಾಟ್‍ಫಾರಂ ಮೂಲಕ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಗುಡ್‍ಲೈಫ್ ಮಿಲ್ಕ್ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕೆ.ಎಂ.ಎಫ್. ಸಭೆಯಲ್ಲಿ ಮಂಜೂರಾತಿ ದೊರೆಯಲಿದೆ. ಈ ಟೆಟ್ರಾ ಪ್ಯಾಕಿಂಗ್ ಘಟಕದ ಸ್ಥಾಪನೆಯಿಂದ ಹಾಲು ಬಹಳ ದಿನಗಳವರೆಗೆ ಹಾಳಾಗದಂತೆ ಇಡಬಹುದು. ಮಾರುಕಟ್ಟೆಗೆ ಅನುಕೂಲಕರವಾಗಿದೆ. ಕೈಗಾರಿಕಾ ಟೌನ್‍ಶಿಪ್ ಬಹಳ ಕಾಜಿಯಿಂದ ಮಾಡಲಾಗುತ್ತಿದೆ. 1000 ಎಕರೆ ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ. ಹಾಗೂ 400 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ  ಫ್ಲಾನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನು ಓದಿ: ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ ಧಾರವಾಡದ 10 ವಿತರಕರು, ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು.
Published by: HR Ramesh
First published: August 15, 2020, 8:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories