HOME » NEWS » District » STATE GOVERNMENT WAS GIVE GREEN SIGNAL TO ANNOUNCED CHELLURU IN NEW TALUK RHHSN NKCKB

ಚೇಳೂರು ತಾಲೂಕು ಘೋಷಣೆಗೆ ಸರ್ಕಾರ ಸಮ್ಮತಿ; ಗಡಿ ಹಂಚಿಕೆ, ಮೂಲಸೌಕರ್ಯದ ಬಗ್ಗೆ ಸಚಿವ ಸುಧಾಕರ್ ಚರ್ಚೆ

ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೊಸ ತಾಲ್ಲೂಕು ರಚನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಅವರು ಶುಕ್ರವಾರ ಸಂಬಂಧಿಸಿದ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಗಡಿ ಹಂಚಿಕೆ, ನೂತನ ತಾಲ್ಲೂಕಿಗೆ ಸೇರುವ ಗ್ರಾಮಗಳು, ಒಟ್ಟು ಜನಸಂಖ್ಯೆ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

news18-kannada
Updated:January 8, 2021, 3:49 PM IST
ಚೇಳೂರು ತಾಲೂಕು ಘೋಷಣೆಗೆ ಸರ್ಕಾರ ಸಮ್ಮತಿ; ಗಡಿ ಹಂಚಿಕೆ, ಮೂಲಸೌಕರ್ಯದ ಬಗ್ಗೆ ಸಚಿವ ಸುಧಾಕರ್ ಚರ್ಚೆ
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸಭೆ ನಡೆಸಿದ ಸಚಿವ ಕೆ.ಸುಧಾಕರ್.
  • Share this:
ಚಿಕ್ಕಬಳ್ಳಾಪುರ: ಸ್ವಚ್ಛತೆ, ಸುರಕ್ಷತೆ, ವಸತಿ ಮೊದಲಾದ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರವನ್ನು ಅತ್ಯುತ್ತಮ ನಗರವಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಗರಸಭೆಯ ಸದಸ್ಯರಿಗೆ ಕಿವಿಮಾತು ಹೇಳಿದರು. ನಗರಸಭೆಯಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಹೆಣ್ಣು ಮಧ್ಯರಾತ್ರಿಯಲ್ಲೂ ನಿರ್ಭೀತಿಯಿಂದ ಓಡಾಡುವಂತಾಗಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಈ ನಿಟ್ಟಿನಲ್ಲಿ ಹೆಚ್ಚು ಸಿಸಿಟಿವಿ ಅಳವಡಿಸುವುದು ಮೊದಲಾದ ಕ್ರಮಗಳಿಂದ ನಗರವನ್ನು ಸುರಕ್ಷಿತವಾಗಿಸಬೇಕು. ಈ ಎಲ್ಲ ಕ್ರಮಗಳ ಮೂಲಕ ಚಿಕ್ಕಬಳ್ಳಾಪುರವನ್ನು ಅತ್ಯುತ್ತಮ ನಗರವಾಗಿಸಬೇಕು ಎಂದರು.

ಕಸ ವಿಲೇವಾರಿಗೆ ಘಟಕ ನಿರ್ಮಿಸಲಾಗಿದೆ. 15 ವರ್ಷಗಳಿಂದ ವಿಲೇವಾರಿ ಮಾಡಿದ ಕಸ ಇಲ್ಲಿದೆ. ಅದನ್ನು ಕೂಡ ವೈಜ್ಞಾನಿಕವಾಗಿ ಸಂಸ್ಕರಿಸಲು ಕ್ರಮ ವಹಿಸಲಾಗಿದೆ. ನಗರಸಭೆಯ ಸದಸ್ಯರು ಎಲ್ಲರೂ ಸ್ಥಳ ಪರಿಶೀಲನೆ ಮಾಡಿ ಉದ್ಯಾನದ ರೀತಿಯಲ್ಲಿ ಕಸ ಘಟಕವನ್ನು ಅಭಿವೃದ್ಧಿಪಡಿಸಬೇಕು. ಕಸ ಘಟಕದಲ್ಲಿರುವ ಕಸವನ್ನು ಗೊಬ್ಬರವಾಗಿಸಿ ರೈತರಿಗೆ ನೀಡುವಂತಾಗಬೇಕು. ಹಸಿ ಕಸವನ್ನು ಮನೆಯವರೇ ಲಭ್ಯವಿರುವ ಜಾಗದಲ್ಲಿ ಗೊಬ್ಬರ ಮಾಡಬೇಕು. ಇಂತಹ ಕ್ರಮಗಳಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬಹಳ ಬಡಜನರಿಗೆ ನಿವೇಶನ, ಮನೆ ಇಲ್ಲ. ನಗರದ ನೂರಾರು ಎಕರೆಯಲ್ಲಿ ವಸತಿ ಯೋಜನೆ ರೂಪಿಸಲು ಕ್ರಮ ವಹಿಸಲಾಗಿದೆ. ಇಲ್ಲಿ ಲೇ ಔಟ್ ಕೂಡ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆಯ ಸದಸ್ಯರು ಪಾರದರ್ಶಕವಾಗಿ ಫಲಾನುಭವಿಗಳನ್ನು ಆರಿಸಬೇಕು. ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕಾಲಮಿತಿ ಹಾಕಿಕೊಂಡು ಕೆಲಸ ಮಾಡಬೇಕು. ಒಂದು ವರ್ಷದೊಳಗೆ, ಅಂದರೆ ಡಿಸೆಂಬರ್ 22 ರೊಳಗೆ 5,000 ಮನೆಗಳನ್ನು ನಿರ್ಮಿಸಬೇಕು. ಈ ಗುರಿಯನ್ನು ಇರಿಸಿಕೊಂಡು ಕಾರ್ಯನಿರ್ವಹಿಸಿ ಎಂದು ಹೇಳಿದರು.

ಇದನ್ನು ಓದಿ: ರಾಜ್ಯಕ್ಕೆ ಬರುತ್ತಿರುವ ಕೋವಿಡ್ ಲಸಿಕೆ ಎಷ್ಟು? ಸಂಗ್ರಹಕ್ಕೆ ಎಷ್ಟು ಸೌಕರ್ಯ ಸಿದ್ಧವಿದೆ?

ನಗರಸಭೆಯೇ ಸಂಪನ್ಮೂಲವನ್ನು ಕ್ರೋಢೀಕರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಸಮರ್ಪಕವಾಗಿ ಕಂದಾಯ ಸಂಗ್ರಹಿಸಬೇಕು. ಸ್ವಚ್ಛತಾ ಅಭಿಯಾನದಲ್ಲಿ ನಗರ 5 ರೊಳಗಿನ ಸ್ಥಾನಕ್ಕೆ ಬರಬೇಕು. ನಂತರ ಪ್ರಥಮ ಸ್ಥಾನದಲ್ಲಿ ಬರುವಂತಾಗಬೇಕು. ಈ ವರ್ಷ ಹಾಗೂ ಮುಂದಿನ ವರ್ಷ ಸರ್ಕಾರದಿಂದ ಅನುದಾನ ತರಲಾಗುವುದು. ಇದನ್ನು ಬಳಸಿ ಬಾಕಿ ಉಳಿದ ಕಾಮಗಾರಿಗಳನ್ನು ಮುಗಿಸಬೇಕು. ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಚೇಳೂರು ತಾಲ್ಲೂಕಿನ ಬೇಡಿಕೆ ಈಡೇರಿದ್ದು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೊಸ ತಾಲ್ಲೂಕು ರಚನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಅವರು ಶುಕ್ರವಾರ ಸಂಬಂಧಿಸಿದ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಗಡಿ ಹಂಚಿಕೆ, ನೂತನ ತಾಲ್ಲೂಕಿಗೆ ಸೇರುವ ಗ್ರಾಮಗಳು, ಒಟ್ಟು ಜನಸಂಖ್ಯೆ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಈಗಾಗಲೇ ಮೂವರು ಶಾಸಕರ ಜತೆ ಸಭೆ ನಡೆಸಿ ಕೈಗೊಂಡಿರುವ ನಿರ್ಣಯಗಳನ್ನು ಸಚಿವರು ಅನುಮೋದಿಸಿದರು. ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಸಹ ಜಿಲ್ಲಾಡಳಿತ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಒಪ್ಪಿರುವುದರಿಂದ ಪ್ರಸ್ತಾವನೆ ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಸಚಿವರು ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಚೇಳೂರು ಹೋರಾಟ ಸಮಿತಿ ಪ್ರತಿನಿಧಿಗಳು ಸಚಿವರನ್ನು ಅಭಿನಂದಿಸಿದರು. ಶಾಸಕರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Published by: HR Ramesh
First published: January 8, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories