ಹಾಸನ; ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆ ಯಾವ ರೀತಿ ನಡೆದಿದೆ ಎಂಬುದು ಜನತೆಗೆ ಗೊತ್ತಿದೆ. ಮೊದಲನೇ ಕೋಟಾ, ಎರಡನೇ ಖೋಟಾ ಅಂತಾ ಹಣ ಹಂಚಿರುವುದು ಮಾಧ್ಯಮಗಳಲ್ಲೇ ಸುದ್ದಿ ಬಂದಿದೆ. ಮಾಧ್ಯಮಗಳಲ್ಲಿ ಅಕ್ರಮ ಸುದ್ದಿ ಬಿತ್ತರವಾದರೂ ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲಾ. ಸರ್ಕಾರದ ಹಿಡಿತಕ್ಕೆ ಸಿಲುಕಿ ಚುನಾವಣಾ ಆಯೋಗ ನಲುಗುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಆರೋಪ ಮಾಡಿದರು.
ಆಜೀವ ಪರ್ಯಂತ ಅಧ್ಯಕ್ಷರು ಅನ್ನೋ ಹಂತಕ್ಕೆ ಬಿಜೆಪಿ ತಲುಪಿದೆ. ಶಿರಾ ಕ್ಷೇತ್ರದ ಒಂದು ಊರಿನಲ್ಲಿ ಅಭ್ಯರ್ಥಿಯನ್ನೇ ಊರೊಳಗಡೆ ಬಿಟ್ಟಿಲ್ಲ. ಆದರೂ ಆ ಊರಿನಲ್ಲಿ ಶೇ, 80 ರಷ್ಟು ಮತಗಳು ಲೀಡ್ ಇದೆ ಅಂತಾ ಹೇಳ್ತಾರೆ. ಆಡಳಿತ ಯಂತ್ರವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಒಂದು ಓಟಿಗೆ 5 ಸಾವಿರ ಮೂರು ಸಾವಿರ ಅಂತಾ ಹಂಚಿದ ಮೇಲೆ ಯಾಕೆ ಚುನಾವಣೆ ಮಾಡಬೇಕು. ಚುನಾವಣೆಗೂ ಮೊದಲೇ 20 ಸಾವಿರ ಮತದಿಂದ ಗೆಲ್ಲುತ್ತೇವೆ ಅಂತಾ ಹೇಳುತ್ತಾರೆ. ಚುನಾವಣಾ ಆಯೋಗ ರಾಜ್ಯದಲ್ಲಿ ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಗುಪ್ತಚರ ಇಲಾಖೆಯನ್ನು ಏನು ಚುನಾವಣೆ ಸಮೀಕ್ಷೆ ಮಾಡಲು ಬಿಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಸಿಎಂ ಮತ್ತು ಸಿಎಂ ಮಗ ಇಬ್ಬರೂ ಎರಡು ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಅಂತಾ ಹೇಳ್ತಾರೆ. ಈ 25 ಸಾವಿರ ಮತ ಪಡೆಯೋಕೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಅಂತಾ ಹೇಳ್ಬೇಕು. ಅವರು ದುಡ್ಡು ಹಂಚಿದ್ದಾರೆ. ಅದಕ್ಕೆ ಎಷ್ಟು ಮತ ಬರುತ್ತೆ ಅಂತಾ ಗೊತ್ತಿರುತ್ತೆ. ಎಷ್ಟು ದುಡ್ಡು ಹಂಚಿದ್ದೀವಿ ಅಂತಾ ಸಿಎಂ ಮತ್ತು ಸಿಎಂ ಮಗ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಇದನ್ನು ಓದಿ: ದೆಹಲಿಯಲ್ಲಿ ಇಂದು ರಾತ್ರಿಯಿಂದ ನ. 30ರವರೆಗೂ ಪಟಾಕಿ ಮಾರಾಟ, ಬಳಕೆ ನಿಷೇಧ
ಸೋಲು ಗೆಲುವು ಇದ್ದೇ ಇರುತ್ತದೆ. ಸೋತರೂ ದೇವೇಗೌಡರು ಕಂಗೆಡಲ್ಲ. ಚುನಾವಣೆಯಲ್ಲಿ ನೇರವಾಗಿ ಹಣ ಹಂಚಿದ್ದಾರೆ. ಒಂದನೇ ಕೋಟಾ 200, ಎರಡನೇ ಕೋಟಾ 500 ಅಂತಾ ಚುನಾವಣೆಯಲ್ಲಿ ಹಣ ಹಂಚಿದ್ದಾರೆ. 2004 ರಲ್ಲಿ ಚುನಾವಣೆಯಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ಜೆಡಿಎಸ್ ಸೊನ್ನೆ ಅಂತಾ ಬಂತು. 2004 ರಲ್ಲಿ ಜೆಡಿಎಸ್ 58 ಸ್ಥಾನ ಗೆದ್ದಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಇಷ್ಟೊತ್ತಿಗೆ ನಡೆಯಬೇಕಿತ್ತು. ಯಾವ ಯಾವ ಇಲಾಖೆಯಿಂದ ಎಷ್ಟೆಷ್ಟು ಕಲೆಕ್ಟ್ ಆಗ್ಬೇಕು ಅಂತಾ ಲೆಕ್ಕಾಚಾರ ಮಾಡ್ತಿದ್ದಾರೆ. ಕಲೆಕ್ಟ್ ಆದ್ಮೇಲೆ ಗ್ರಾಪಂ, ಚುನಾವಣೆ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ವರದಿ: ಅಶೋಕ್ ಕುಮಾರ್ ಬಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ