HOME » NEWS » District » STATE CYCLING ASSOCIATION VP SRIDHAR MARUTI GORE PASSES AWAY MVSV SNVS

Sridhar Maruthi Gore - ಸೈಕ್ಲಿಂಗ್ ಅಸೋಶಿಯೇಷನ್ ರಾಜ್ಯಾಧ್ಯಕ್ಷ ಶ್ರೀಧರ ಮಾರುತಿ ಗೋರೆ ನಿಧನ

ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಸೈಕ್ಲಿಂಗ್ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಹಾಗೂ ಅನೇಕ ಉತ್ಕೃಷ್ಟ ಸೈಕ್ಲಿಸ್ಟ್​ಗಳನ್ನ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಧರ್ ಮಾರುತಿರಾವ್ ಗೋರೆ ಇಂದು ಸೋಮವಾರ ನಿಧನರಾಗಿದ್ದಾರೆ.

news18-kannada
Updated:March 1, 2021, 3:38 PM IST
Sridhar Maruthi Gore - ಸೈಕ್ಲಿಂಗ್ ಅಸೋಶಿಯೇಷನ್ ರಾಜ್ಯಾಧ್ಯಕ್ಷ ಶ್ರೀಧರ ಮಾರುತಿ ಗೋರೆ ನಿಧನ
ಶ್ರೀಧರ್ ಮಾರುತಿರಾವ್ ಗೋರೆ
  • Share this:
ವಿಜಯಪುರ(ಮಾ. 01): ಸೈಕ್ಲಿಸ್ಟ್​ಗಳ ಕಣಜ, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸೈಕ್ಲಿಂಗ್ ಉತ್ತುಂಗಕ್ಕೇರಲು ಶ್ರಮಿಸಿದವರಲ್ಲಿ ಒಬ್ಬರಾಗಿದ್ದ ಶ್ರೀಧರ ಮಾರುತಿ ಗೋರೆ(65) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷ ಮತ್ತು ರಾಜ್ಯ ಒಲಂಪಿಕ್ಸ್ ಅಸೊಶಿಯೇಷನ್ ಉಪಾಧ್ಯಕ್ಷರೂ ಆಗಿದ್ದ ಶ್ರೀಧರ ಮಾರುತಿ ಮೋರೆ 5ನೇ ಬಾರಿಗೆ ಸೈಕ್ಲಿಂಗ್ ಅಸೋಶಿಯೇಷನ್ ರಾಜ್ಯಾಧ್ಯಕ್ಷರಾಗಿದ್ದರು. ಅವರು ಪತ್ನಿ, ಅಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಳೆದ ಸುಮಾರು 40 ವರ್ಷಗಳಿಂದ ಸೈಕ್ಲಿಂಗ್ ಮತ್ತು ಸೈಕ್ಲಿಸ್ಟ್​ಗಳ ಹಿತೈಷಿಯಾಗಿದ್ದ ಶ್ರೀಧರ ಮಾರುತಿ ಮೋರೆ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಜಯಪುರ ನಗರದಲ್ಲಿಯೂ ಹಲವಾರು ಬಾರಿ ರಾಷ್ಟ್ರೀಯ ರಸ್ತೆ ಮತ್ತು ಮೌಂಟೇನ್ ಬೈಕ್ ಸ್ಪರ್ಧೆಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದರು.  ಅಲ್ಲದೇ, ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಮುಂಚೆ ಸೈಕ್ಲಿಸ್ಟ್​ಗಳಿಗಾಗಿಗೆ ಕಾಂಕ್ರಿಟ್ ಟ್ರ್ಯಾಕ್ ಆರಂಭವಾಗಲು ಕೂಡ ಕಾರಣಿಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯವಷ್ಟೇ ಅಲ್ಲ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸೈಕ್ಲಿಂಗ್ ವಿಭಾಗದಲ್ಲಿ ಬಸವನಾಡಿನ ಸೈಕ್ಲಿಷ್ಠಗಳು ಸಾಧನೆ ಮಾಡಿ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿಯುವಲ್ಲಿ ಇವರ ಪಾತ್ರವೂ ಪ್ರಮುಖವಾಗಿತ್ತು.

ಹೋಟೇಲ್ ಉದ್ಯಮಿಯೂ ಆಗಿದ್ದ ಶ್ರೀಧರ ಮಾರುತಿ ಮೋರೆ ತಮ್ಮ ವಿಜಯಪುರ ಸೈನಿಕ ಶಾಲೆಯ ಎದುರು ಇರುವ ಬಡಾವಣೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಮನೆಯವರು ಅವರು ಇನ್ನೂ ಮಲಗಿರುವುದನ್ನು ಗಮನಿಸಿ ಎಬ್ಬಿಸಲು ಹೋಗಿದ್ದಾರೆ.  ಆದರೆ, ಅವರು ಸ್ಪಂದಿಸಿಲ್ಲ.  ತಕ್ಷಣ ವೈದ್ಯರನ್ನು ಕರೆಯಿಸಿದ್ದಾರೆ. ಕೂಡಲೇ ಬಂದ ವೈದ್ಯರು ಪರೀಕ್ಷಿಸಿ ನೋಡಿದಾಗ ಆವರು ಸಾವಿಗೀಡಾಗಿರುವುದು ದೃಢಪಟ್ಟಿದೆ. ವೈದ್ಯರ ಪ್ರಕಾರ ನಸುಕಿನ ಜಾವ 4 ರಿಂದ 5 ಗಂಟೆಯೊಳಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಶ್ರೀಧರ ಮಾರುತಿ ಗೋರೆ ಅವರ ಅಳಿಯ ಚೇತನ ಚವ್ಹಾಣ ನ್ಯೂ್ಸ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತವನ್ನು ಕತ್ತಲಲ್ಲಿ ಮುಳುಗಿಸಲು ಚೀನಾ ಪ್ಲಾನ್? 12 ಸರ್ಕಾರಿ ಘಟಕಗಳನ್ನ ಹ್ಯಾಕ್ ಮಾಡಿದ ಚೀನೀಯರು

ನಿನ್ನೆ ಸಭೆ ಮಾಡಿದವರು ಇಂದು ಇಲ್ಲ:

ಶ್ರೀಧರ ಮಾರುತಿ ಗೋರೆ ಅವರ ಸೈಕ್ಲಿಂಗ್ ಅಸೋಶಿಯೇಶನ್ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮಾರ್ಚ್ ತಿಂಗಳಲ್ಲಿ ಪೂರ್ಣವಾಗಲಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಸೈಕ್ಲಿಂಗ್ ಅಸೋಶಿಯೇಶನ್ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿದ ಅವರು, ಮುಂದಿನ ಅವಧಿಗೆ ತಾವು ಸ್ಪರ್ಧಿಸುವುದಿಲ್ಲ. ಬೇರೆಯವರಿಗೆ ಅವಕಾಶ ನೀಡುತ್ತೇನೆ. ನೀವೆಲ್ಲ ನಿಭಾಯಿಸಿಕೊಂಡು ಹೋಗಬೇಕು. ನಿಮ್ಮಲ್ಲಿ ಸೂಕ್ತರಾದವರು ಸ್ಪರ್ಧಿಸಿದರೆ ಅಧ್ಯಕ್ಷರಾಗುವುದು ಖಚಿತ. ಮುಂದಿನ ಅಧ್ಯಕ್ಷರು ಸೈಕ್ಲಿಂಗ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು. ಸೈಕ್ಲಿಸ್ಟ್​ಗಳ ಹಿತ ಕಾಯಲು ಬದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದ್ದರು. ಅಲ್ಲದೇ, ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅವರಿಂದ ಸಲಹೆಯನ್ನೂ ಪಡೆದಿದ್ದರು.

ನಿನ್ನೆ ಬೆಳಿಗ್ಗೆ 12ಕ್ಕೆ ಸೈನಿಕ ಶಾಲೆ ಎದುರು ಇರುವ ತಮ್ಮದೇ ಮಾಲಿಕತ್ವದ ಅಂಬಿಕಾ ಹೋಟೇಲಿನಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಕರೆಯಿಸಿ ಔಪಚಾರಿಕ ಸಭೆ ನಡೆಸಿದ್ದರು. ಸುಮಾರು 2-3 ಗಂಟೆ ನಡೆದ ಸಭೆಯಲ್ಲಿ ಈ ಸಭೆಯಲ್ಲಿ ಸೈಕ್ಲಿಂಗ್ ಸಂಸ್ಥೆ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷ ರಾಜು ಬಿರಾದಾರ, ರಾಜ್ಯ ಕಾರ್ಯದರ್ಶಿ, ಶ್ರೀಶೈಲ ಕುರ್ಣಿ, ರಾಜ್ಯ ಉಪಾಧ್ಯಕ್ಷ ರಮೇಶ ಪಾಟೀಲ, ಖಜಾಂಚಿ ಸಿ. ಕೆ. ಚನಾಳ ಪಾಲ್ಗೋಂಡಿದ್ದರು.  ಈ ಸಂದರ್ಭದಲ್ಲಿ ರಾಜು ಬಿರಾದಾರ ಅವರನ್ನು ಉದ್ದೇಶಿಸಿ ಅಧ್ಯಕ್ಷನಾಗಲು ಅರ್ಹರಿದ್ದೀರಿ. ಮುಂದೆ ಸಂಘಟನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಸೈಕ್ಲಿಸ್ಟ್​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿ ಕಾರ್ಮಿಕರು ತಮ್ಮ ಸಮಸ್ಯೆಯನ್ನು ಸಚಿವರ ಬಳಿ ಹೇಳಿಕೊಂಡಿದ್ದಕ್ಕೆ ಅಮಾನತು ಶಿಕ್ಷೆ!

ಇಂದು ಬೆಳಿಗ್ಗೆ ಅವರು ನಿಧನರಾಗಿರುವುದು ಸುದ್ದಿ ಕೇಳಿ ನಂಬಲಾಗಲಿಲ್ಲ. ಇಂದು ಅವರು ಇರುವುದಿಲ್ಲ ಎಂಬುದನ್ನು ಗ್ರಹಿಸಿಯೇ ನಿನ್ನೆ ಸಭೆ ನಡೆಸಿರಬೇಕು ಎಂದು ಸೈಕ್ಲಿಂಗ್ ಅಸೋಶಿಯೇಶನ್ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷ ರಾಜು ಬಿರಾದಾರ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಕಂಬನಿ ಮಿಡಿದಿದ್ದಾರೆ.

ಕ್ರೀಡಾ ಸಚಿವರಿಂದ ಅಂತಿಮ ದರ್ಶನ:  

ಈ ಮಧ್ಯೆ ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂ.ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ಅವರು ಶ್ರೀಧರ್ ಮಾರುತಿ ಗೋರೆ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಅಲ್ಲದೇ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: March 1, 2021, 3:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories