SSLC Topper: ಅಂದು ಫೀಸ್ ಕಟ್ಟದ್ದಕ್ಕೆ ಹಾಲ್​ ಟಿಕೆಟ್ ನಿರಾಕರಿಸಿದ್ದ ಶಾಲೆ, ಇಂದು 10th ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಟಾಪರ್ ಆದ ತುಮಕೂರಿನ ಬಾಲಕಿ

ಸಚಿವರು ಆಕೆಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ಮುಖ್ಯ ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ಮನನೊಂದ ಗ್ರೀಷ್ಮಾ ನಾಯಕ್ ಆತ್ಮಹತ್ಯೆಗೆ ಯತ್ನ ಮಾಡಿದ್ದಳು ಎಂದೂ ವರದಿಯಾಗಿತ್ತು.

ಎಸ್​ಎಸ್​ಎಲ್​ಸಿ ಟಾಪರ್ ಗ್ರೀಷ್ಮಾ ನಾಯಕ್

ಎಸ್​ಎಸ್​ಎಲ್​ಸಿ ಟಾಪರ್ ಗ್ರೀಷ್ಮಾ ನಾಯಕ್

  • Share this:
ಶುಲ್ಕ ಪಾವತಿಸದ ಕಾರಣ ಗ್ರೀಷ್ಮಾ ನಾಯಕ್(Greeshma Nayak) ಎಂಬ ರಾಜ್ಯದ ಬಾಲಕಿಗೆ SSLC ಪರೀಕ್ಷೆ ಬರೆಯಲು ಹಾಲ್‌ ಟಿಕೆಟ್(Admission Ticket)‌ ಅನ್ನೇ ನೀಡಿರಲಿಲ್ಲ. ಆದರೆ, ತನ್ನ ಕಥೆಯ ಸುಖಾಂತ್ಯದಲ್ಲಿ ಪೂರಕ ಪರೀಕ್ಷೆ ಬರೆದ ಈಕೆ ಅದರಲ್ಲಿ ಟಾಪರ್‌( SSLC Topper) ಆಗಿ ಹೊರಹೊಮ್ಮಿದ್ದಾಳೆ. ಗ್ರೀಷ್ಮಾ ಸೆಪ್ಟೆಂಬರ್ 27 ಮತ್ತು 29ರಂದು ನಡೆದ ಪೂರಕ ಪರೀಕ್ಷೆಯಲ್ಲಿ 625ರಲ್ಲಿ 599 ಅಂಕಗಳನ್ನು ಪಡೆದಿದ್ದಾಳೆಂದು ಸೋಮವಾರ ಫಲಿತಾಂಶ ಪ್ರಕಟವಾದ ಬಳಿಕ ತಿಳಿದು ಬಂದಿದೆ. ಜುಲೈ ಮಧ್ಯಭಾಗದಲ್ಲಿ ತುಮಕೂರು(Tumkur) ಜಿಲ್ಲೆ ಕೊರಟಗೆರೆ(Koratagere) ಮೂಲದ ಗ್ರೀಷ್ಮಾಗೆ ಆಕೆಯ ಶಾಲೆ ಹಾಲ್‌ ಟಿಕೆಟ್‌ ನಿರಾಕರಿಸಿದ ಕಾರಣ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಳು.

ಸಾಂಕ್ರಾಮಿಕ ಸಮಯದಲ್ಲಿ ನಷ್ಟ ಅನುಭವಿಸಿದ ರೈತನ ಮಗಳಾದ ಈಕೆ 9ನೇ ತರಗತಿಯ ಶಾಲಾ ಶುಲ್ಕವನ್ನು ಪಾವತಿಸಿರಲಿಲ್ಲ. ಆದ್ದರಿಂದ ಮೂಡಬಿದ್ರೆಯ ಆಳ್ವಾಸ್‌ ಆಂಗ್ಲ ಮಾಧ್ಯಮ ಶಾಲೆ ಗ್ರೀಷ್ಮಾಗೆ 10ನೇ ತರಗತಿಗೆ ಪ್ರವೇಶ ನೀಡಲಿಲ್ಲ. ಈ ವಿಷಯ ಹರಡುತ್ತಿದ್ದಂತೆ ರಾಜ್ಯದ ಅಂದಿನ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಬಾಲಕಿಯ ಮನೆಗೆ ಭೇಟಿ ನೀಡಿದ್ದರು. ಆದರೆ, ಪರೀಕ್ಷೆ ಬರೆಯಲು ಅವಕಾಶ ನೀಡಲು ಯಾವುದೇ ಸಹಾಯ ಮಾಡಲಿಲ್ಲ.

ಆದರೆ, ಸಚಿವರು ಆಕೆಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ಮುಖ್ಯ ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ಮನನೊಂದ ಗ್ರೀಷ್ಮಾ ನಾಯಕ್ ಆತ್ಮಹತ್ಯೆಗೆ ಯತ್ನ ಮಾಡಿದ್ದಳು ಎಂದೂ ವರದಿಯಾಗಿತ್ತು. ನಂತರ ಪೂರಕ ಪರೀಕ್ಷೆಗೆ ಹಾಜರಾಗಿದ್ದಳು. ಇನ್ನೊಂದೆಡೆ, ಇದೇ ರೀತಿ ಶುಲ್ಕ ಪಾವತಿಸದ ಕಾರಣ ಹಾಲ್ ಟಿಕೆಟ್ ನಿರಾಕರಿಸಿದ ಹಲವಾರು ವಿದ್ಯಾರ್ಥಿಗಳ ನಿದರ್ಶನಗಳು ಬೆಳಕಿಗೆ ಬಂದಿದ್ದವು.

ಇನ್ನು, ಫಲಿತಾಂಶದ ಬಗ್ಗೆ ಮಿಶ್ರ ಭಾವನೆಗಳನ್ನು ಹೊಂದಿರುವುದಾಗಿ ಗ್ರೀಷ್ಮಾ ಹೇಳಿದ್ದಾಳೆ. ‘’ಆ ಸಮಯದಲ್ಲಿ ನಾನು ನಿಜವಾಗಿಯೂ ದುಃಖಿತನಾಗಿದ್ದೆ. ನಾನು ಹಿಂದೆ ಉಳಿದಿರುವಾಗ ನನ್ನ ಬ್ಯಾಚ್‌ನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದುವರಿಯುತ್ತಿರುವುದನ್ನು ನಾನು ನೋಡುತ್ತಿದ್ದೆ. ಈಗ, ನನಗೆ ಸಂತೋಷ ಮತ್ತು ದುಃಖ ಎರಡೂ ಆಗಿದೆ. ನಾನು ನಿಜವಾಗಿಯೂ ಚೆನ್ನಾಗಿ ಮಾಡಬಹುದೆಂದು ನನಗೆ ಸಂತೋಷವಾಗಿದೆ. ಇದೆಲ್ಲ ನಡೆದಿರುವುದಕ್ಕೆ ನನಗೆ ಬೇಸರವಾಗಿದೆ. ನನ್ನಂತಹ ಅನೇಕ ವಿದ್ಯಾರ್ಥಿಗಳು ನಿಜವಾದ ಪ್ರತಿಭೆ ಹೊಂದಿದ್ದರೂ ಅವಕಾಶಗಳನ್ನು ಪಡೆಯುತ್ತಿಲ್ಲ ಎಂದು ನನಗೆ ತಿಳಿದಿದೆ" ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ:Karnataka SSLC Exam Result: ಎಸ್​ಎಸ್​ಎಲ್​ಸಿ ಪೂರಕ ಫಲಿತಾಂಶ ಪ್ರಕಟ, ಶೇ.55.54ರಷ್ಟು ವಿದ್ಯಾರ್ಥಿಗಳು ಪಾಸ್

"ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಪ್ರತಿಯೊಬ್ಬ ವಿದ್ಯಾರ್ಥಿಯು ಅಧ್ಯಯನ ಮಾಡುವ ಅವಕಾಶ ಪಡೆಯಬೇಕು’’ ಎಂದು ಅವಳು ಹೇಳಿದ್ದಾಳೆ.

ಗ್ರೀಷ್ಮಾ ಶಾಲೆಗೆ ಪ್ರವೇಶ ಪಡೆಯದ ಕಾರಣ ತನ್ನ 10ನೇ ತರಗತಿಯಲ್ಲಿ ಯಾವುದೇ ತರಗತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. "ನನ್ನ ಸಹೋದರಿ ನನಗೆ ಒಂದು ಪೂರ್ಣ ವರ್ಷ ಕಲಿಸಿದಳು. ತರಗತಿಯ ರೀತಿಯಲ್ಲೇ, ಅವಳು ಬೋರ್ಡಿನ ಮುಂದೆ ನಿಂತು ನನಗೆ ಪಾಠಗಳನ್ನು ಹೇಳಿದಳು. ಭಾಷೆಗಳು ಸುಲಭವಾಗಿದ್ದರಿಂದ ಸ್ವತ: ನಾನೇ ಕಲಿಯುವಂತೆ ಆಕೆ ನನಿಗೆ ಹೇಳಿದ್ದಳು. ಪರೀಕ್ಷೆಗೆ ಮೂರು ತಿಂಗಳು ಮುಂಚಿತವಾಗಿ ನಾನು ಅವುಗಳನ್ನು ಕಲಿಯಲು ಆರಂಭಿಸಿದೆ’’ ಎಂದು ಆಕೆ ಹೇಳಿದಳು. ಗ್ರೀಷ್ಮಾ ನಾಯಕ್‌ ಸಹೋದರಿ ಸಹ ಅಧ್ಯಯನ ಮಾಡುತ್ತಿದ್ದು, 19 ವರ್ಷ ವಯಸ್ಸಿನ ಆಕೆ ಬಿಎಸ್ಸಿ ಅಗ್ರಿಕಲ್ಚರ್‌ ವಿದ್ಯಾರ್ಥಿನಿಯಾಗಿದ್ದಾಳೆ.
Published by:Latha CG
First published: