ಗದಗ್​ನಲ್ಲಿ ತಂದೆ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

ನಗರದ ತೋಂಟದಾರ್ಯ ಪರೀಕ್ಷಾ ಕೇಂದ್ರಕ್ಕೆ ಕಣ್ಣೀರು ಹಾಕುತ್ತಲೇ ಬಂದಿದ್ದ ಈ ವಿದ್ಯಾರ್ಥಿನಿಗೆ ಶಿಕ್ಷಕರು ಹಾಗೂ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೇಳದಿಮಠ ಅವರು ಧೈರ್ಯ ತುಂಬಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಗದಗ: ತಂದೆ ಸಾವಿನ ದುಃಖದಲ್ಲೂ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆ ಬರೆದಿರುವ ಮನಕಲಕುವಂತಹ ಘಟನೆ ಗದಗ್​ನಲ್ಲಿ ನಡೆದಿದೆ. ನಗರದ ಈಶ್ವರ ಬಡಾವಣೆಯ ವಿದ್ಯಾರ್ಥಿನಿ ಅನುಷಾ ಭಜಂತ್ರಿ ಅವರು ತಂದೆಯನ್ನು ಕಳೆದುಕೊಂಡಿದ್ದರೂ, ಧೃತಿಗೆಡದೆ ಪರೀಕ್ಷೆ ಬರೆಯಲು ಹಾಜರಾಗಿದ್ದಳು.

ನಗರದ ತೋಂಟದಾರ್ಯ ಪರೀಕ್ಷಾ ಕೇಂದ್ರಕ್ಕೆ ಕಣ್ಣೀರು ಹಾಕುತ್ತಲೇ ಬಂದಿದ್ದ ಈ ವಿದ್ಯಾರ್ಥಿನಿಗೆ ಶಿಕ್ಷಕರು ಹಾಗೂ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೇಳದಿಮಠ ಅವರು ಧೈರ್ಯ ತುಂಬಿದ್ದಾರೆ. ಅನುಷಾ ಅವರ ತಂದೆ ಸುರೇಶ್ ಭಜಂತ್ರಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಅನಾರೋಗ್ಯದ ಕಾರಣದಿಂದ ಇವತ್ತು ಮುಂಜಾನೆ ಅವರು ನಿಧನರಾಗಿದ್ದಾರೆ. ತಂದೆ ಸಾವಿನ ನಡುವೆ ಮಗಳು ಅನುಷಾ ಪರೀಕ್ಷೆ ಬರೆದಿದ್ದಾಳೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹೆಂಡತಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಲೇ ರೈಲಿಗೆ ಅಡ್ಡಹೋಗಿ ಆತ್ಮಹತ್ಯೆಪರೀಕ್ಷೆ ಬರೆದು ಮನೆಗೆ ಬಂದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲು ಸಿದ್ದಮಾಡಿಕೊಳ್ಳಲಾಗಿತ್ತು. ಇಂತಹ ಘಟನೆ ಯಾವ ಮಕ್ಕಳಿಗೂ ಬರಬಾರದು ಅನ್ನುತ್ತಾರೆ ಅವರ ಸಂಬಂಧಿಕರು.

ವರದಿ: ಸಂತೋಷ ಕೊಣ್ಣೂರ
Published by:Vijayasarthy SN
First published: