ಎಸ್​ಎಸ್​ಎಲ್​​ಸಿ ಪ್ರಥಮ ಸ್ಥಾನಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಸರತ್ತು ; ಕೊರೊನಾ ಆತಂಕದ ನಡುವೆ ಪರೀಕ್ಷೆಗೆ ಭರದ ಸಿದ್ಧತೆ

ಉತ್ತಮ ಫಲಿತಾಂಶ ತೆಗೆಯುವ ನಿಟ್ಟಿನಲ್ಲಿ ಚಿಕ್ಕೋಡಿ ಡಿಡಿಪಿಐ ಗಜಾನನ ಮಣ್ಣಿಕೇರಿ ಮಕ್ಕಳ ಕಲಿಕೆಗೆ ಹಲವು ಹಂತದ ವ್ಯವಸ್ಥೆಗಳನ್ನ ಮಾಡೂವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಜೂ.11): ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕಳೆದ 2003 ರಿಂದಲೂ ಸತತವಾಗಿ ಪ್ರಥಮ, ದ್ವಿತೀಯ, ತೃತೀಯ ಹೀಗೆ ಯಾವಾಗಲೂ ಟಾಪ್ 5 ಸ್ಥಾನದಲ್ಲೆ ಗುರುತಿಸಲ್ಪಡುವ ಶೈಕ್ಷಣಿಕ ಜಿಲ್ಲೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲೆ ಇದ್ದರೂ ಹೆಚ್ಚಿನದಾಗಿ ಮಕ್ಕಳಿಗೆ ಮಾತ್ರ ಭಾಷೆಯಲ್ಲಿ ಪಾಠ ಕಲಿಸಲು ಪ್ರೋತ್ಸಾಹ ನೀಡುತ್ತ ಬಂದಿದ್ದು, ಸತತವಾಗಿ ಟಾಪ್ 5 ಸ್ಥಾನದಲ್ಲಿ ಇದ್ದು ತನ್ನ ಅಸ್ತಿತ್ವತ್ವವನ್ನ ಉಳಿಸಿಕೊಂಡು ಬಂದಿದ್ದ ಜಿಲ್ಲೆ, ಆದೆರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ 18 ಸ್ಥಾನಕ್ಕೆ ಕೆಳಗಿಳಿದಿತ್ತು ಮತ್ತೊಮ್ಮೆ ಈಗ ಪ್ರಥಮ ಸ್ಥಾನಕ್ಕೆ ಬರಲು ನಾನಾ ರೂಪುರೇಷೆಗಳನ್ನ ರೂಪಿಸಿದೆ.

ಚಿಕ್ಕೋಡಿ ಜಿಲ್ಲೆಯಯಲ್ಲಿ ಒಟ್ಟು 40,834 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದು 18,712 ಹೆಣ್ಣು ಹಾಗೂ 22,122 ಗಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನು ಜಿಲ್ಲೆಯಾದ್ಯಂತ ಒಟ್ಟು 147 ಪರೀಕ್ಷಾ ಕೇಂದ್ರಗಳನ್ನ  ಸ್ಥಾಪಿಸಲಾಗಿದೆ  ಪ್ರತಿ ಕೊಠಡಿಯಲ್ಲಿ 25  ಮಕ್ಕಳು ಕೂಡಿಸಲು ವ್ಯವಸ್ಥೆ ಮಾಡಲಾಗಿದ್ದು ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಗಳನ್ನ ಪ್ರತ್ಯೇಕವಾಗಿ ಕೂಡಿಸಲು ಕೊಠಡಿಗಳನ್ನ ಮಾಡಲಾಗಿದೆ.

ಇನ್ನು ಲಾಕಡೌನ್ ಹಿನ್ನಲೆ ಮನೆಯಲ್ಲಿ ಮಕ್ಕಳ ವಿಧ್ಯಾಭ್ಯಾಸದಿಂದ ದೂರ ಉಳಿಯದೆ ಉತ್ತಮ ಫಲಿತಾಂಶ ತೆಗೆಯುವ ನಿಟ್ಟಿನಲ್ಲಿ ಚಿಕ್ಕೋಡಿ ಡಿಡಿಪಿಐ ಗಜಾನನ ಮಣ್ಣಿಕೇರಿ ಮಕ್ಕಳ ಕಲಿಕೆಗೆ ಹಲವು ಹಂತದ ವ್ಯವಸ್ಥೆಗಳನ್ನ ಮಾಡೂವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ

ಪ್ರಾಕ್ಟೀಸ್ ಮಾಡು ಫರ್ಪೆಕ್ಟ್​ ಆಗು ಪ್ಲಾನ್

ಇಲ್ಲಿ ದಿನಾಲು ಒಂದು ಪ್ರಶ್ನೆ ಪತ್ರಿಕೆಯನ್ನ ವಾಟ್ಸಪ್ ಮೂಲಕ ಮಕ್ಕಳಿಗೆ ಕಳಿಸಿಲಾಗುತ್ತೆ  ಬೆಳಿಗ್ಗೆ ಒಂದು ಪ್ರಶ್ನೆ ಪತ್ರಿಕೆ ಕೊಟ್ಟು ಸಂಜೆ ರವರೆಗೂ ಬಿಡಿಸಲು ಅವಕಾಶ ನೀಡಿ ಸಂಜೆ ವೇಳೆ ಕೀ ಉತ್ತರ ಬಿಟ್ಟು ಅವರೆ ತಪ್ಪು ಸರಿಗಳನ್ನ ಕಲೆ ಹಾಕಬೇಕು.

ಮಿಸ್ ಕಾಲ ಕೊಡಿ ಉತ್ತರ ಪಡೆಯಿರಿ 

ಇಲ್ಲಿ ಪ್ರತಿ ವಿಷಯಕ್ಕೆ  ನಾಲ್ಕೂ ಶಿಕ್ಷಕರ ತಂಡ ರಚನೆ ಮಾಡಲಾಗಿದೆ ಪ್ರತಿ ಮಕ್ಕಳು ಆಯಾ ವಲಯದ ಶಿಕ್ಷಕರ ನಂಬರಗೆ ಮಿಸ್ ಕಾಲ ಮಾಡಿದ್ರೆ ಸಾಕು ಶಿಕ್ಷಕರೆ ವಾಪಸ್ ಪೋನ್ ಮಾಡಿ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಇರುವ ಡೌಟ್ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸ ಮಾಡುತ್ತಾರೆ.

ಇನದನ್ನೂ ಓದಿ : Karnataka Rains: ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು - ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ಸೂಚನೆ

ಪ್ರತಿ ಶಾಲೆಯ ಮಕ್ಕಳಿಗೆ ಆಯಾ ಶಾಲೆಯ ಎಲ್ಲ ಶಿಕ್ಷಕರಿಗೆ 10 ಮಕ್ಕಳನ್ನ ನೀಡಿ ಆ ಮಕ್ಕಳ ವಿದ್ಯಾಭ್ಯಾಸ ಹಾಗೂ ಮಕ್ಕಳ ಚಟುವಟಿಕಯ ಜವಾಬ್ದಾರಿಯನ್ನ ಹಂಚಿಕೆ ಮಾಡಿದ್ದಾರೆ. ಆಯಾ ಮಕ್ಕಳಿಗೆ ಶಿಕ್ಷಕರು ಪೋನ್ ಮಾಡಿ ಅಥವಾ ಖುದ್ದು ಹೋಗಿ ಅವರ ವಿಚಾರಣೆ ಮಾಡಬೇಕು ಅವರಿಗೆ ಇರುವ ಸಮಸ್ಯೆಗಳಿಗೆ ಪರಿಹಾರ ನೀಡುವುದು ಆಯಾ ಜವಾಬ್ದಾರಿ ಹೊಂದಿದ ಶಿಕ್ಷಕರ ಕೆಲಸ ದಂತಹ ವ್ಯವಸ್ಥೆ ಮಾಡಿ ಮಕ್ಕಳ ಕಲಿಕೆಗೆ ಒತ್ತು ನೀಡಿದ್ದಾರೆ.

ಇನ್ನು ಪರೀಕ್ಷೆಗೆ ಬರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ಎಲ್ಲಾ ವಿಧ್ಯಾರ್ಥಿಗಳಿಗೂ ಎರಡೂ ಮಾಸ್ಕ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆಯನ್ನ ಮಾಡಲಾಗಿದ್ದು, ಮಕ್ಕಳು ನಿರ್ಭಿತರಾಗಿ ಪರೀಕ್ಷೆ ಬರೆಸಲು ಮುಂದಾಗಿರುವ ಇಲಾಖೆ ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸ್ಕೌಟ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಗಳಿಗೆ ಬಳಸಿಕೊಂಡು ಪರೀಕ್ಷೆಗೆ ಬರುವ ಮಕ್ಕಳಿಗೆ  ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ ,ಹಾಗೂ ನೀರು ವಿತರಣೆ ಮಾಡಲು ಬಳಸಿಕೊಳ್ಳುತ್ತೇವೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮಣ್ಣಿಕೇರಿ ಹೇಳಿದ್ದಾರೆ.
First published: