SSLC Examination: ಚಿಕ್ಕೋಡಿಯಲ್ಲಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆಯಲು ಸಿದ್ದರಾದ ವಿದ್ಯಾರ್ಥಿಗಳು ; ನಾಳೆಯ ಪರೀಕ್ಷೆಗೆ ಇಂದೇ ಮಾಕ್ ಟೆಸ್ಟ್

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಂದು ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡ ಮಕ್ಕಳನ್ನ ಆ ಕೊಠಡಿಯೊಳಗೆ ಕೂಡಿಸಲು ಇಲಾಖೆ ಮುಂದಾಗಿದೆ

ಶಿಕ್ಷಕರಿಗೆ ಮಾಹಿತಿ ನೀಡುತ್ತಿರುವ ಡಿಡಿಪಿಐ

ಶಿಕ್ಷಕರಿಗೆ ಮಾಹಿತಿ ನೀಡುತ್ತಿರುವ ಡಿಡಿಪಿಐ

  • Share this:
ಚಿಕ್ಕೋಡಿ (ಜೂ.24): ಕೊರೋನಾ ಹಾವಳಿ ಮಧ್ಯೆಯೂ ರಾಜ್ಯ ಸರ್ಕಾರ ಎಸ್​ಎಸ್​ಎಲ್​​ಸಿ ಪರೀಕ್ಷೆ ನಡೆಸಲು ಮುಂದಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಪರೀಕ್ಷೆ ನಡೆಸಲು ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ನಾಳೆಯ ಪರೀಕ್ಷೆಗೂ ಮುನ್ನ ಇಂದೆಯೆ ಆಯಾ ಪರೀಕ್ಷಾ ಕೇಂದ್ರದ ಮಕ್ಕಳನ್ನ ಕರೆಸಿ ಅಣುಕು ಪರೀಕ್ಷೆ ನಡೆಸಲಾಯಿತು.

ಮಕ್ಕಳ ಸುರಕ್ಷೆಗೆ ನಾಳೆ ಯಾವ ರೀತಿಯಲ್ಲಿ ಸಿಬ್ಬಂದಿಗಳು ಸಿದ್ದರಿರಬೇಕು ಮಕ್ಕಳು ಯಾವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನ ಅನುಸರಿಸಬೇಕಾದ ಕ್ರಮಗಳ ಕುರಿತು ಎಸ್.ಎಸ್. ಎಲ್ ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲಾಯಿತು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 40781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು ಒಟ್ಟು 147 ಪರಿಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಂದು ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡ ಮಕ್ಕಳನ್ನ ಆ ಕೊಠಡಿಯೊಳಗೆ ಕೂಡಿಸಲು ಇಲಾಖೆ ಮುಂದಾಗಿದೆ. ಅಲ್ಲದೆ ಈಗಾಗಲೆ ಪ್ರತಿ ಮಕ್ಕಳಿಗೂ ಎರಡು ಮಾಸ್ಕಗಳನ್ನ ವಿತರಿಸಿದ್ದು ಕಡ್ಡಾಯ ಮಾಸ್ಕ ಧರಿಸಿಕೊಂಡೆ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಿದೆ.

ಶಿಕ್ಷಣ ಇಲಾಖೆ ಪ್ರತಿ ಕೇಂದ್ರದಲ್ಲೂ ಸಾಮಾಜಿಕ ಅಂತರ, ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ ಹಾಗೂ ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಒಬ್ಬರನ್ನೊಬ್ಬರು ಮುಟ್ಟದೆ ವಿಧ್ಯಾರ್ಥಿಗಳು ತಾವೆ ಮನೆಯಿಂದ ನೀರು ಹಾಗೂ ಮಾಸ್ಕ ಧರಿಸಿಕೊಂಡು ಪರೀಕ್ಷೆಗೆ ಬರಬೇಕು ಎಂದಿದೆ.

ಪರೀಕ್ಷೆಗೆ ಬರುವ ಮಕ್ಕಳಿಗೆ ಜಿಲ್ಲಾಡಳಿತದಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಒಟ್ಟು 178 ಸರ್ಕಾರಿ ಬಸ್ ಗಳನ್ನ ನೀಡಿದ್ದು. ಸಾಮಾಜಿಕ ಅಂತರದೊಂದಿಗೆ ಪ್ರತಿ ಬಸ್ ನಲ್ಲಿ 30 ಮಕ್ಕಳಿಗೆ ಕೂಡಲು ಅವಕಾಶ ನೀಡಿದೆ. ಆ ಬಸ್ ಗಳನ್ನ ವಿಧ್ಯಾರ್ಥಿಗಳಿಗೆ ಹೋಗಲು ಬರಲು ಮಾತ್ರ ಸೀಮಿತಗೊಳಿಸಲಾಗಿದೆ ಪ್ರತಿನಿತ್ಯ ಬಸ್ ಗಳನ್ನ ಕಡ್ಡಾಯ ಸ್ಯಾನಿಟೈಸ್ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ

ಇನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿದ್ದರಿಂದ ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಕ್ಕೆ 51 ಮಕ್ಕಳು ಪರೀಕ್ಷೆ ಬರೆಯಲು ಆಗಮಿಸುತ್ತಿದ್ದು ಗಡಿಯಲ್ಲೆ ವಿದ್ಯಾರ್ಥಿಗಳನ್ನ ಸ್ಯಾನಿಟೈಸ್ ಮಾಡಿ ಪ್ರತ್ಯೇಕ ಬಸ್ ನಲ್ಲಿ ಕರೆದುಕೊಂಡು ಬಂದು ಪರೀಕ್ಷೆ ಬರೆದ ಬಳಿಕ ಮತ್ತೆ ವಾಪಸ್ ಬಿಡಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ : ಸರಗಳ್ಳನತನ ಆರೋಪಿಗೂ ಕೊರೋನಾ ಪಾಸಿಟಿವ್ ; ಎರಡು ದಿನವಾದರೂ ಠಾಣೆಯನ್ನು ಸೀಲ್ ಡೌನ್ ಮಾಡದ ಬಿಬಿಎಂಪಿ

ಅಲ್ಲದೆ ಮಹಾರಾಷ್ಟ್ರ ಹಾಗೂ ಕಂಟೈನ್​​ಮೆಂಟ್ ಏರಿಯಾದಿಂದ ಬರುವ ಮಕ್ಕಳಿಗನ್ನ ಪ್ರತ್ಯೇಕವಾಗಿ ಕೂಡಿಸಿ ವಿಶೇಷವಾಗಿ ಎನ್​​​ 95 ಮಾಸ್ಕ್ ಗಳನ್ನ ನೀಡಲು ಜಿಲ್ಲಾಡಳಿ ಸೂಚನೆ ನೀಡಿದೆ.51 ಮಕ್ಕಳು ಮಹಾರಾಷ್ಟ್ರ ಹಾಗೂ 595 ಮಕ್ಕಳು ಹೊರ ಜಿಲ್ಲೆಗಳಿಂದ ಚಿಕ್ಕೋಡಿಗೆ ಬಂದಿರುವ ಮಕ್ಕಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ 325 ವಿದ್ಯಾರ್ಥಿಗಳು ತೆರಳಿದ್ದು ಆಯಾ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಐ ಗಜಾನನ ಮಣ್ಣಿಕೇರಿ ತಿಳಿಸಿದ್ದಾರೆ.
First published: