ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ 55 ವರ್ಷದ ಮಹಿಳೆ ; 33ರ ಹರೆಯದ ಅಂಧ ಯುವತಿ .!

ಚಾಮರಾಜನಗರದ ಸೇವಾ ಭಾರತಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಇಬ್ಬರೂ ಉತ್ಸಾಹಿ ಮಹಿಳೆಯರು ಸಾಮಾನ್ಯ ವಿದ್ಯಾರ್ಥಿಗಳು ನಾಚುವಂತೆ  ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ಗೌರಮ್ಮ  ಹಾಗೂ ಜನಸುಂದರಿ

ಗೌರಮ್ಮ ಹಾಗೂ ಜನಸುಂದರಿ

  • Share this:
ಚಾಮರಾಜನಗರ(ಜುಲೈ. 01): ಕಠಿಣ ಪರಿಶ್ರಮ ಹಾಗು ಸಾಧನೆ ಮಾಡಬೇಕೆಂಬ ಛಲವಿದ್ದಲ್ಲಿ ಸಾಧನೆಗೆ ಯಾವ ಅಂಗವೈಕಲ್ಯವಾಗಲಿ, ವಯಸ್ಸಾಗಲಿ ಅಡ್ಡಿಯಾಗದು ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಇಬ್ಬರು ಮಹಿಳೆಯರು ಸಾಕ್ಷಿಯಾಗಿದ್ದಾರೆ.

ಚಾಮರಾಜನಗರದ ಸೇವಾ ಭಾರತಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಇಬ್ಬರೂ ಉತ್ಸಾಹಿ ಮಹಿಳೆಯರು ಸಾಮಾನ್ಯ ವಿದ್ಯಾರ್ಥಿಗಳು ನಾಚುವಂತೆ  ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿಯ 33 ವರ್ಷದ ಗೌರಮ್ಮ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರೂ ಈ ಬಾರಿ ಖಾಸಗಿ ವಿದ್ಯಾರ್ಥಿನಿಯಾಗಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಬ್ರೈಲ್ ಲಿಪಿ ಮೂಲಕ ಎಸ್​ಎಸ್​ಎಲ್​​ಸಿ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಿ, ಇದೀಗ ಇತರ ವಿದ್ಯಾರ್ಥಿಗಳಂತೆಯೇ ಪರೀಕ್ಷೆ ಬರೆಯುತ್ತಾ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗೌರಮ್ಮ ಆಕಸ್ಮಿಕವಾಗಿ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದ್ದರು. ಕಣ್ಣು ಕಾಣುವುದಿಲ್ಲ ಎಂದರೆ ತನ್ನ ಸ್ನೇಹಿತರು ಆಡಿಕೊಳ್ಳುತ್ತಾರೆ ಎಂದು ಶಾಲೆಗೆ ಹೋಗುವುದನ್ನೇ ಬಿಡುತ್ತಾರೆ. ಇವರ ದೃಷ್ಟಿದೋಷ ಸಮಸ್ಯೆಯನ್ನು ಅರಿತ ಮೊಬಿಲಿಟಿ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ ಗೌರಮ್ಮಗೆ ಒಂದು ವರ್ಷ ಕಾಲ ತರಬೇತಿ ನೀಡಿ ಬ್ರೈಲ್ ಲಿಪಿ ಕಲಿಸಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೌಕರಿಯನ್ನು ಕೊಡಿಸಿದ್ದಾರೆ.  ತಾನೂ ಉನ್ನತ ವ್ಯಾಸಂಗ ಮಾಡಬೇಕೆಂದು ಕೊಂಡ ಗೌರಮ್ಮ  ಬ್ರೈಲ್ ಲಿಪಿ ಮೂಲಕವೇ ಮನೆಯಲ್ಲಿ ಎಸ್​ಎಸ್​ಎಲ್​​ಸಿ ಪಠ್ಯ ಪುಸ್ತಕಗಳನ್ನು ಅಭ್ಯಾಸ ಮಾಡಿ ಈ ಬಾರಿ ಖಾಸಗಿ ವಿದ್ಯಾರ್ಥಿನಿಯಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಇದನ್ನೂ ಓದಿ :  ಮಂಗಳೂರಿನಲ್ಲಿ ಕೊರೋನಾ ಆರ್ಭಟ ; ಲೇಡಿಗೋಶನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಬಂದ್

ಇನ್ನೊಂದೆಡೆ ಕೊಳ್ಳೇಗಾಲ ತಾಲೂಕು ಮಧುವನಹಳ್ಳಿಯ 55 ವರ್ಷದ ಜಯಸುಂದರಿ ಆಶಾ ಕಾರ್ಯಕರ್ತೆಯಾಗಿದ್ದು ಈಕೆಗೆ ಮೂವರು ಮಕ್ಕಳಿದ್ದಾರೆ.  ಒಬ್ಬರು ನರ್ಸ್ ಆಗಿದ್ದರೆ ಇನ್ನಿಬ್ಬರು ಈ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ತನ್ನ ಮಕ್ಕಳಂತೆಯೇ ವಿದ್ಯಾವಂತೆಯಾಗಬೇಕೆಂದು ಜಯಸುಂದರಿ ಕನಸಿಗೆ ಪತಿ ಹಾಗು ಮಕ್ಕಳು ನೀರೆರೆದಿದ್ದಾರೆ.

ಲಾಕ್ ಡೌನ್ ಪರಿಣಾಮ ಮನೆಯಲ್ಲೇ ಇದ್ದ ಮಕ್ಕಳು ತಮ್ಮ ತಾಯಿಗೆ ಎಸ್​ಎಸ್​ಎಲ್​ಸಿ ಪಾಠ ಹೇಳಿಕೊಟ್ಟಿದ್ದಾರೆ. ಮನೆಯಲ್ಲೇ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ಜಯಸುಂದರಿ ಈ ಬಾರಿ ಖಾಸಗಿ ವಿದ್ಯಾರ್ಥಿನಿಯಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ.
First published: