ಜಮೀನಿಗಿಳಿದು‌ ನಾಟಿ ಮಾಡಿದ ತಹಸೀಲ್ದಾರ್; ಆಡಳಿತಕ್ಕೂ ಸೈ, ಕೃಷಿಗೂ ಜೈ ಎಂದ ಶ್ರೀರಂಗಪಟ್ಟಣದ ಮಹಿಳಾ ಅಧಿಕಾರಿ!

ಇಂದು ನಗುವನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ಅಧಿಕಾರಿಗಳ ನಡೆ ಹಳ್ಳಿ ಕಡೆ ಹೆಸರಿನ‌ ಗ್ರಾಮ ವಾಸ್ತವ್ಯದ ವೇಳೆ ರೈತರೊಬ್ಬರ ಜಮೀನಿನಲ್ಲಿ ನಾಟಿ ಹಾಕಿ, ಕಳೆ ಕಿತ್ತು ತೊಟ್ಟಿಲು ತೂಗುವ ಕೈ ಜಗವನ್ನು ತೂಗಬಲ್ಲದು ಎಂಬುದನ್ನು‌ ನಿರೂಪಿಸಿದ್ದಾರೆ.

ನಾಟಿ ಮಾಡುತ್ತಿರುವ ತಹಸೀಲ್ದಾರ್ ರೂಪಾ.

ನಾಟಿ ಮಾಡುತ್ತಿರುವ ತಹಸೀಲ್ದಾರ್ ರೂಪಾ.

  • Share this:
ಮಂಡ್ಯ: ಸಾಮಾನ್ಯವಾಗಿ ಸರ್ಕಾರಿ‌ ಇಲಾಖೆಯಲ್ಲಿ‌ ಉನ್ನತ ದರ್ಜೆ ಅಧಿಕಾರಿಗಳಾದರೆ ಸೂಟು‌ ಬೂಟು ಹಾಕೊಂಡು ಕಾರಲ್ಲೇ ಓಡಾಡುತ್ತಾರೆ. ಅವರಿಗೆ ಜನ ಸಾಮಾನ್ಯರ ಕಷ್ಟ ಗೊತ್ತಿರಲ್ಲ ಅನ್ನೋ ಮಾತಿದೆ. ಇದಕ್ಕೆ ಅಪವಾದ ಎಂಬಂತೆ ಸಕ್ಕರೆನಾಡು‌ ಮಂಡ್ಯದಲ್ಲಿ ಮಹಿಳಾ ತಹ ಸೀಲ್ದಾರ್ ಅಧಿಕಾರಿಯೊಬ್ಬರು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರಿಂದ ಸೈ ಎನಿಸಿಕೊಂಡಿದ್ದಾರೆ.

ಹೌದು! ಹೀಗೆ ನೀರು ತುಂಬಿರುವ ಭತ್ತದ ಗದ್ದೆಯಲ್ಲಿ ಭತ್ತದ ಪೈರಿನ ನಾಟಿ ಮಾಡಿರುವ ಈ ಅಧಿಕಾರಿಯ ಹೆಸರು‌ ರೂಪ ಅಂತಾ. ಇವರು ಸಕ್ಕರೆನಾಡು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ತಹಸೀಲ್ದಾರ್ ‌ಆಗಿ ಕೆಲಸ ಮಾಡುತ್ತಿದ್ದು, ಜನಸ್ನೇಹಿ ಅಧಿಕಾರಿ ಎನಿಸಿಕೊಂಡಿದ್ದಾರೆ. ಈ ಮೊದಲು ಇವರು‌ ಹಲವು ತಾಲೂಕಿಗಳಲ್ಲಿ ತಹಸೀಲ್ದಾರ್ ಆಗಿ ಕೆಲಸ ನಿರ್ವಹಿಸಿದ್ದು, ಇದೀಗ ಕಳೆದ ಒಂದು ವರ್ಷದ ಹಿಂದೆ ಶ್ರೀರಂಗಪಟ್ಟಣ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನಸ್ನೇಹಿಯಾಗಿ ಕೆಲಸ ಮಾಡುವ ಮೂಲಕ ಜನ ಮೆಚ್ಚುಗೆ ಪಡೆದು ದಕ್ಷ ಅಧಿಕಾರಿ ಎನಿಸಿಕೊಂಡಿದ್ದಾರೆ. ಇವರ ಈ ಕೆಲಸವನ್ನು  ಜಿಲ್ಲಾಡಳಿತ ಸೇರಿ ಜಿಲ್ಲಾ ಮಂತ್ರಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಜನರ ಯಾವುದೇ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿ ಪರಿಹರಿಸುವ ಕಾರಣದಿಂದ ಇವರು ಜನಸ್ನೇಹಿ ಅಧಿಕಾರಿಯಾಗಿ, ತಾಲೂಕಿನ ಅಭಿವೃದ್ದಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ಕಾರಣದಿಂದ ಕ್ಷೇತ್ರದ ಜನಪ್ರತಿನಿಧಿಗಳು ಸೇರಿದಂತೆ ಯಾವುದೇ ಎಲ್ಲರ‌ ನೆಚ್ಚಿನ ಅಧಿಕಾರಿಯಾಗಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರೆಲ್ಲರ ಪ್ರೋತ್ಸಾಹದ ಕಾರಣದಿಂದಲೇ ಈ ಮಹಿಳಾ ಅಧಿಕಾರಿ ಕ್ಷೇತ್ರದಲ್ಲಿ ಬಹಳ ಉತ್ಸುಕತೆಯಿಂದ ಕೆಲಸ ಮಾಡಿ ಉತ್ತಮ ಹಾಗೂ ದಕ್ಷ ಅಧಿಕಾರಿ ಎಂಬ ಹೆಸರು ಗಳಿಸಿಕೊಂಡಿದ್ದಾರೆ‌.

ತಹಸೀಲ್ದಾರ್ ರೂಪಾ.


ಇನ್ನು ಈ ಮಹಿಳಾ ಅಧಿಕಾರಿಗೆ  ರೈತರೆಂದರೆ ಎಲ್ಲಿಲ್ಲದ ಕಳಕಳಿ. ಹಾಗಾಗಿ ರೈತರ ಯಾವುದೇ ಸಮಸ್ಯೆಗೂ ತಕ್ಷಣ ಸ್ಪಂದಿಸಿ ಅವರ ಸಮಸ್ಯೆ ಬಗೆಹರಿಸುತ್ತಾರೆ. ಇವರ ಕಚೇರಿಗೆ ಪ್ರತಿನಿತ್ಯ ನೂರಾರು ರೈತರು ತಮ್ಮ‌ ಸಮಸ್ಯೆ ಹೊತ್ತು‌ ಬಂದರೂ ಯಾವುದೇ ಸಮಯದಲ್ಲೂ ರೈತರನ್ನು ಕಚೇರಿಗೆ ಕರೆಸಿ ಅವರ ಸಮಸ್ಯೆ‌ ಇತ್ಯರ್ಥ ಪಡಿಸೋದು ಇವರ ರೈತ ಪರ ಕಳಕಳಿಗೆ ಉದಾಹರಣೆ. ಈ ಅಧಿಕಾರಿ ಕೇವಲ ಓರ್ವ ಅಧಿಕಾರಿಯಾಗಿ ಆಡಳಿತ ನಡೆಸೋದು ಮಾತ್ರವಲ್ಲ ರೈತನ ಮಗಳಾಗಿ ಜಮೀನಿನಲ್ಲಿ ಕೃಷಿ ಕೆಲಸ ಕೂಡ ಮಾಡಲು ಬರುತ್ತೆ ಅನ್ನೋದನ್ನ ಇಂದು ನಗುವನಹಳ್ಳಿ ಗ್ರಾಮದಲ್ಲಿ ರೈತನ ಕೆಸರು ಮತ್ತು ನೀರು ತುಂಬಿದ ಭತ್ತದ ಜಮೀನಿಗಿಳಿದು ನಾಟಿ ಹಾಕುವ ಮೂಲಕ ತಾನೂ ರೈತನ ಮಗಳು ಎನ್ನುವುದನ್ನು‌ ತೋ ರಿಸಿಕೊಟ್ಟಿದ್ದಾರೆ. ಅಲ್ಲದೇ ರೈತರ ಕಷ್ಟ ಸುಖದ ಅರಿವಿದ್ದು ಅವರ ಪರಿಶ್ರಮದ ವಾಸ್ತವತೆಯನ್ನು ತಿಳಿದಿರುವುದಾಗಿ ಸ್ವತಃ ನಿರೂಪಿಸಿದ್ದಾರೆ.

ಇದನ್ನು ಓದಿ: ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ನಿಶ್ಚಯ; 2 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ

ಇಂದು ನಗುವನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ಅಧಿಕಾರಿಗಳ ನಡೆ ಹಳ್ಳಿ ಕಡೆ ಹೆಸರಿನ‌ ಗ್ರಾಮ ವಾಸ್ತವ್ಯದ ವೇಳೆ ರೈತರೊಬ್ಬರ ಜಮೀನಿನಲ್ಲಿ ನಾಟಿ ಹಾಕಿ, ಕಳೆ ಕಿತ್ತು ತೊಟ್ಟಿಲು ತೂಗುವ ಕೈ ಜಗವನ್ನು ತೂಗಬಲ್ಲದು ಎಂಬುದನ್ನು‌ ನಿರೂಪಿಸಿದ್ದಾರೆ.

ಒಟ್ಟಾರೆ ತಾಲೂಕಿನ ರೈತರೊಂದಿಗೆ ಸೌಜನ್ಯದ ಒಡನಾಟ ಇಟ್ಟುಕೊಂಡು ಕೆಲಸ   ಮಾಡುತ್ತಿರುವ ಈ ಮಹಿಳಾ ಅಧಿಕಾರಿ ಇದೀಗ ಕ್ಷೇತ್ರದ ರೈತರ ನೆಚ್ಚಿನ ಅಧಿಕಾರಿಯಾಗಿ ಜನಸ್ನೇಹಿ ಆಡಳಿತ ನೀಡುತ್ತಾ ಬರುತ್ತಾ, ತಾಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಎಲ್ಲೆಡೆ ಅಧಿಕಾರಿಗಳ ಇಂತಹ ಜನಸ್ನೇಹಿ ಆಡಳಿತ ನೀಡಿದರೆ, ಎಲ್ಲರೂ ಜನ ಸ್ನೇಹಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Published by:HR Ramesh
First published: